ದೊಡ್ಡಬಳ್ಳಾಪುರ: ಅಪರಿಚಿತ ವ್ಯಕ್ತಿಯೋರ್ವ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ, ಇಲ್ಲಿನ ಶ್ರೀರಾಮನಹಳ್ಳಿ ಗೇಟ್ ಸಮೀಪದ ಮಹಾಲಕ್ಷ್ಮಿ ದೇವಸ್ಥಾನ ಎದುರು ನಡೆದಿದೆ.
ಮೃತವ್ಯಕ್ತಿ ಯಾರೆಂಬುದು ತಿಳಿದುಬಂದಿಲ್ಲ. ಈತನಿಗೆ ಸುಮಾರು 35 ವರ್ಷ, ಎತ್ತರ 5.9ಅಡಿ, ಕಪ್ಪು ಮೈಬಣ್ಣ ಇದೆ ಎಂದು ಯಶವಂತಪುರ ರೈಲ್ವೆ ಪೊಲೀಸರು ಮಾಹಿತಿ ನೀಡಿದ್ದಾರೆ. ಸಂಬಂಧಿಕರು ಯಾರಾದರೂ ಇದ್ದಲ್ಲಿ ದೊಡ್ಡಬಳ್ಳಾಪುರ ರೈಲ್ವೆ ಪೊಲೀಸರನ್ನು ಸಂಪರ್ಕಿಸುವಂತೆ ರೈಲ್ವೆ ಪೊಲೀಸರು ತಿಳಿಸಿದ್ದಾರೆ. - 9480802143.