ದೊಡ್ಡಬಳ್ಳಾಪುರ : ಡಿಸೆಂಬರ್ 6 ಬಾಬಾ ಸಾಹೇಬ್ ಅಂಬೇಡ್ಕರ್ ಪರಿನಿಬ್ಬಾಣದ ಅಂಗವಾಗಿ ಮೌಢ್ಯ ಕಂದಚಾರ ವಿರೋಧಿ ದಿನಾಚರಣೆಯನ್ನ ಸ್ಮಶಾನದಲ್ಲಿ ಆಚರಣೆ ಮಾಡಲಾಗಿದೆ. ಸ್ಮಶಾನದಲ್ಲಿ ಬಾಡೂಟ ಮಾಡುವ ಮೂಲಕ ಸ್ಮಶಾನ ಕೆಡಕನ್ನು ಉಂಟು ಮಾಡದ ಸ್ಥಳವೆಂದು ದಲಿತ ಸಂಘಟನೆಗಳು ಸಾಬೀತು ಮಾಡಿದವು.
ತಾಲೂಕಿನ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟ ಅಂಬೇಡ್ಕರ್ ಅವರ ಪರಿನಿಬ್ಬಾಣದ ದಿನವನ್ನು ಮೌಢ್ಯ ಮತ್ತು ಕಂದಾಚಾರ ದಿನವನ್ನಾಗಿ ಆಚರಿಸಿದರು. ನಗರದ ರೋಜಿಪುರದ ಸಾರ್ವಜನಿಕ ಸ್ಮಶಾನದಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಚಿಂತಕ ಯೋಗೇಶ್ ಮಾಸ್ಟರ್, ಪತ್ರಕರ್ತ ವೆಂಕಟೇಶ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ದೆವ್ವಗಳ ಪ್ರಭಾವಕ್ಕೆ ಒಳಗಾಗುತ್ತೇವೆ ಎಂಬ ಕಾರಣಕ್ಕೆ ಜನರು ಸ್ಮಶಾನಕ್ಕೆ ಹೋಗುವುದಕ್ಕೆ ಹೆದರುತ್ತಾರೆ. ಜನರ ಮೂಢ ನಂಬಿಕೆಯನ್ನ ದೂರ ಮಾಡಲು ಸ್ಮಶಾನದಲ್ಲಿಯೇ ಕಾರ್ಯಕ್ರಮವನ್ನು ಆಯೋಜನೆ ಮಾಡಿ, ಸ್ಮಶಾನದಲ್ಲಿಯೇ ಬಾಡೂಟ ಮಾಡುವ ಮೂಲಕ ಸ್ಮಶಾನ ಕೆಡಕನ್ನು ಮಾಡದ ಸ್ಥಳವೆಂದು ಸಾಬೀತು ಮಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಚಿಂತಕ ಯೋಗೇಶ್ ಮಾಸ್ಟರ್ ಮಾಧ್ಯಮದೊಂದಿಗೆ ಮಾತನಾಡಿ, ಅಂಬೇಡ್ಕರ್ ಅವರ ಪರಿನಿಬ್ಬಾಣದ ದಿನವನ್ನು ಸಾಂಕೇತಿಕವಾಗಿ ಮೌಢ್ಯ ಮತ್ತು ಕಂದಾಚಾರ ವಿರೋಧಿ ದಿನಾಚರಣೆ ಉತ್ತಮ ನಡೆಯಾಗಿದೆ.
ಅಂಬೇಡ್ಕರ್ ಅವರನ್ನ ಗ್ರಹಿಸುವ ರೀತಿ ಅರಿವಿನ ಮೂಲಕ. ಆದರೆ, ವೈಚಾರಿಕತೆ ತಾನಾಗಿಯೇ ಆಗುತ್ತೆ. ಸ್ಮಶಾನಕ್ಕೆ ಹೋದರೆ ಮಡಿ, ಮೈಲಿಗೆ ಆಗುತ್ತೆ ಅನ್ನೋ ನಂಬಿಕೆ ಇದೆ. ಈ ಮೂಢ ನಂಬಿಕೆಯನ್ನ ಮನಸ್ಸಿನಿಂದ ತೆಗೆದು ಹಾಕಲು ಸ್ಮಶಾನದಲ್ಲಿ ಬಾಡೂಟ ಕಾರ್ಯಕ್ರಮ ಮಾಡಲಾಗಿದೆ ಎಂದರು.
ಮೊಟ್ಟೆ ಬಗ್ಗೆಯ ಚರ್ಚೆಯೇ ನಾನ್‌ಸೆನ್ಸ್ : ಶಾಲಾ ಮಕ್ಕಳಿಗೆ ಊಟದ ಸಮಯದಲ್ಲಿ ಮೊಟ್ಟೆ ಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ಪರ ಮತ್ತು ವಿರೋಧದ ಚರ್ಚೆ ನಡೆಯುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಮಕ್ಕಳಿಗೆ ಮೊಟ್ಟೆ ಕೊಡುವುದನ್ನು ವಿರೋಧಿಸುವುದು ಅವರ ಭೌತಿಕ ದಾರಿದ್ರ್ಯವನ್ನ ತೋರಿಸುತ್ತಿದೆ.
ಮೊಟ್ಟೆ ವಿಚಾರದಲ್ಲಿ ಧರ್ಮ, ಜಾತಿ ಮತ್ತು ಸಂಸ್ಕೃತಿಯನ್ನ ಎಳೆದು ತರಲಾಗುತ್ತಿದೆ. ಸಮಾಜದಲ್ಲಿ ಸಾಕಷ್ಟು ಸಮಸ್ಥೆಗಳಿವೆ. ಮೊಟ್ಟೆ ವಿಚಾರ ಚರ್ಚೆ ಅನವಶ್ಯಕ, ಪೌಷ್ಠಿಕಾಂಶ ಇರುವ ಮೊಟ್ಟೆಯನ್ನ ಮಕ್ಕಳಿಗೆ ಕೊಡಬೇಕು. ತಿನ್ನೋರು ತಿನ್ನಲಿ ಬೇಡ ಎಂದವರಿಗೆ ಬೇಡ ಎಂದರು.
ಇದನ್ನೂ ಓದಿ : ಸಾಕಿದ ಶ್ವಾನಕ್ಕೆ ಸೀಮಂತ ಮಾಡಿದ ಸಬ್ ಇನ್ಸ್‌ಪೆಕ್ಟರ್ - ವಿಡಿಯೋ ವೈರಲ್