ನೆಲಮಂಗಲ: ಸಿಮೆಂಟ್ ಶೀಟ್ ಒಡೆದು ಬಾರ್‌ನಲ್ಲಿದ್ದ ಮದ್ಯ ಕಳ್ಳತನ ಮಾಡಿರುವ ಪ್ರಕರಣ ನೆಲಮಂಗಲ ಸಮೀಪದ ಗುಡೇಮಾರನಹಳ್ಳಿಯಲ್ಲಿ ನಡೆದಿದೆ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಮದ್ಯಪ್ರಿಯರು ಹತಾಶರಾಗಿ ಕಳೆದ ರಾತ್ರಿ ಬಾರ್‌ಗೆ ಕನ್ನ ಹಾಕಿದ್ದಾರೆ. ಈ ವೇಳೆ 40 ಸಾವಿರ ರೂಪಾಯಿ ಮೌಲ್ಯದ ಮದ್ಯದ ಬಾಟಲಿಗಳನ್ನು ಕದ್ದು ಪರಾರಿಯಾಗಿದ್ದಾರೆ.
ಗುಡೇಮಾರನಹಳ್ಳಿ ಊರ ಹೊರವಲಯದಲ್ಲಿ ಈ ಬಾರ್ ಮತ್ತು ರೆಸ್ಟೋರೆಂಟ್ ಇದೆ. ಸ್ಥಳಕ್ಕೆ ಮಾಗಡಿ ಪೊಲೀಸರು ಮತ್ತು ಬೆರಳಚ್ಚು ತಜ್ಞರು ಆಗಮಿಸಿ ಪ್ರಾಥಮಿಕ ತನಿಖೆ ನಡೆಸಿದ್ದಾರೆ.