ದೇವನಹಳ್ಳಿ: ಪ್ರಯಾಣದ ತರಾತುರಿಯಲ್ಲಿದ್ದ ಪ್ರಯಾಣಿಕನೊಬ್ಬ ಚಿನ್ನದ ಬ್ರಾಸ್ಲೈಟ್ ಬಿಳಿಸಿಕೊಂಡು ಹೋಗಿದ್ದ, ಈ ವೇಳೆ ಟ್ರಾಲಿ ಅಪರೇಟರ್ ಒಬ್ಬರು ಪ್ರಯಾಣಿಕನಿಗೆ ಹಿಂದುರುಗಿಸಿ ಕರ್ತವ್ಯ ನಿಷ್ಠೆ ಮೆರುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ದೇವನಹಳ್ಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ಥಾಣಕ್ಕೆ ಗುರುವಾರ ಬಂದ ಪ್ರಯಾಣಿಕನೊಬ್ಬ ಲಗೇಜ್ ಬೆಲ್ಟ್ ಬಳಿ ಲಗೇಜ್ ತೆಗೆದುಕೊಳ್ಳುವ ಅವಸರದಲ್ಲಿ ಕೈನಲ್ಲಿದ್ದ ಬ್ರಾಸ್ಲೈಟ್ ಅನ್ನು ಬೀಳಿಸಿಕೊಂಡು ಹಾಗೆ ಹೋಗಿದ್ದಾನೆ. ಏರ್ಪೋಟ್ ಟ್ರಾಲಿ ಆಪರೇಟರ್ ರಘು ಎಂಬವರಿಗೆ ಬ್ರಾಸ್ಲೈಟ್ ಸಿಕ್ಕಿದೆ. ಕೂಡಲೇ ಇದನ್ನು ಏರ್ಪೋಟ್ ಭದ್ರತಾ ಸಿಬ್ಬಂದಿಗೆ ನೀಡಿದ್ದಾರೆ.
![Air port trolley crew delivered gold brass light who losed it](https://etvbharatimages.akamaized.net/etvbharat/prod-images/kn-bng-02-airport-av-7208821_25122020210044_2512f_1608910244_546.jpg)
ಭದ್ರತಾ ಸಿಬ್ಬಂದಿ ಪ್ರಯಾಣಿಕನನ್ನು ಹುಡುಕಿ ಅವರಿಗೆ ವಾಪಸ್ ನೀಡಿದ್ದಾರೆ ಎನ್ನಲಾಗಿದೆ. ಇನ್ನೂ ಏರ್ಪೋರ್ಟ್ ಸಿಬ್ಬಂದಿಯ ಕಾರ್ಯಕ್ಕೆ ಪ್ರಯಾಣಿಕರು ಸೇರಿದಂತೆ ಅಧಿಕಾರಿ ವರ್ಗ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.