ದೇವನಹಳ್ಳಿ: ದುಬೈನಿಂದ ಬಂದಿಳಿದ ಪ್ರಯಾಣಿಕರನ್ನ ವಿಚಾರಣೆ ನಡೆಸಿದ ಬೆಂಗಳೂರು ಏರ್ ಕಸ್ಟಮ್ಸ್ ಅಧಿಕಾರಿಗಳು ಅಕ್ರಮ ಕಳ್ಳ ಸಾಗಣಿಕೆ ಜಾಲ ಬೇಧಿಸಿ 38 ಲಕ್ಷ ಮೌಲ್ಯದ ವಿದೇಶಿ ಸಿಗರೇಟ್, ಸೌಂದರ್ಯ ವರ್ಧಕಗಳು ಮತ್ತು ಚಿನ್ನ ವಶಕ್ಕೆ ಪಡೆದಿದ್ದಾರೆ.
ಜನವರಿ 27ರಂದು ದುಬೈನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ 8 ಪ್ರಯಾಣಿಕರನ್ನ ಅನುಮಾನದ ಮೇಲೆ ಬೆಂಗಳೂರು ಏರ್ ಕಸ್ಟಮ್ಸ್ ವಾಯು ಗುಪ್ತಚರ ಘಟಕ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ತಪಾಸಣೆಯ ವೇಳೆ ಕೋಪ್ಟಾ(COPTA) ಲೇಬಲಿಂಗ್ ಇಲ್ಲದ 73,600 ವಿದೇಶಿ ಸಿಗರೇಟ್, ಸೌಂದರ್ಯ ವರ್ಧಕಗಳು ಮತ್ತು 439.72 ಗ್ರಾಂ ಕಳ್ಳ ಸಾಗಣಿಕೆ ಮಾಡಲು ಯತ್ನಿಸುತ್ತಿದ ಚಿನ್ನವನ್ನು ವಶ ಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ:ನಕಲಿ ಐಡಿ ಬಳಸಿ ರೈಲ್ವೆ ಟಿಕೆಟ್ ಬುಕ್ಕಿಂಗ್: ಬೆಂಗಳೂರಲ್ಲಿ 10 ಆರೋಪಿಗಳ ಬಂಧನ
ಈ ಸಂಬಂಧ 8 ಮಂದಿ ಪ್ರಯಾಣಿಕರನ್ನ ವಶಕ್ಕೆ ಪಡೆಯಲಾಗಿದೆ. ಒಟ್ಟು 38,06,335 ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ವಿಚಾರಣೆ ಮುಂದುವರೆಸಲಾಗಿದೆ.