ದೇವನಹಳ್ಳಿ: ಯಲಹಂಕ ಏರ್ ಫೋರ್ಸ್ ಸ್ಟೇಷನ್ನಲ್ಲಿ ಫೆಬ್ರವರಿ 3ರಿಂದ 5ರವರೆಗೆ ಏರೋ ಇಂಡಿಯಾ 2021 ನಡೆಯುವ ಹಿನ್ನೆಲೆ ಏರ್ಪೋರ್ಟ್ ರಸ್ತೆಯಲ್ಲಿ ಪ್ರಧಾನಿ ಸೇರಿದಂತೆ ಗಣ್ಯರು ಆಗಮಿಸಲಿದ್ದಾರೆ. ಹೀಗಾಗಿ ವಾಹನ ದಟ್ಟಣೆಯ ನಿಯಂತ್ರಣಕ್ಕೆ ಉತ್ತರ ವಿಭಾಗದ ಸಂಚಾರಿ ಪೊಲೀಸರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬದಲಿ ಮಾರ್ಗ ವ್ಯವಸ್ಥೆ ಕಲ್ಪಿಸಿದ್ದಾರೆ.
ನಗರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲು ಮೂರು ಮಾರ್ಗಗಳನ್ನು ಮಾಡಲಾಗಿದ್ದು, ಏರೋ ಇಂಡಿಯಾ 2021 ನಡೆಯುವ ಮೂರು ದಿನ ವಾಹನಗಳು ಬದಲಿ ಮಾರ್ಗದಲ್ಲಿಯೇ ಹೋಗಬೇಕಿದೆ. ಹೀಗಾಗಿ ಸಂಚಾರಿ ಪೊಲೀಸರು ಬೆಳಗ್ಗೆ 5ರಿಂದ ರಾತ್ರಿ 10 ಗಂಟೆಯವರೆಗೂ ಬೇರೆ ಮಾರ್ಗವನ್ನು ನಿಗದಿ ಮಾಡಿದ್ದಾರೆ.
ಬೆಂಗಳೂರು ಪೂರ್ವ ಕಡೆಯಿಂದ ಕೆಐಎಎಲ್: ಬೆಂಗಳೂರು ಪೂರ್ವ ಭಾಗದಲ್ಲಿನ ವರ್ತೂರು, ವೈಟ್ ಫೀಲ್ಡ್, ಕೆಆರ್ ಪುರ, ಹಲಸೂರು, ಶಿವಾಜಿನಗರ, ಇಂದಿರಾನಗರ, ಬಾಣಸವಾಡಿ ಕಡೆಯಿಂದ ಬರುವ ವಾಹನಗಳು ಟಿನ್ ಫ್ಯಾಕ್ಟರಿ-ರಾಮಮೂರ್ತಿನಗರ-ಹೆಣ್ಣೂರು ಕ್ರಾಸ್ ಬಲ ತಿರುವು-ಹೆಣ್ಣೂರು ಮುಖ್ಯರಸ್ತೆ-ಬೈರತಿ ಕ್ರಾಸ್-ಹೊಸೂರು ಬಂಡೆ- ಚಾಗಲಹಟ್ಟಿ- ಬಾಗಲೂರು ಗುಂಡಪ್ಪ ಸರ್ಕಲ್ ಬಲ ತಿರುವು-ಬಾಗಲೂರು ಬಸ್ ನಿಲ್ದಾಣ ಎಡ ತಿರುವು- ಬಂಡಿಕೊಡಿಗೇಹಳ್ಳಿ ಮುಖ್ಯ ರಸ್ತೆ-ಮೈಲನಹಳ್ಳಿ ಕ್ರಾಸ್- ಎಡ ತಿರುವು-ಬೇಗೂರು ಬ್ಯಾಕ್ ಗೇಟ್-ಬಲ ತಿರುವು-1ನೇ ಸರ್ಕಲ್-2ನೇ ಸರ್ಕಲ್ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಬೇಕು.
ಬೆಂಗಳೂರು ದಕ್ಷಿಣ ಮತ್ತು ಕೇಂದ್ರ ಭಾಗದಿಂದ ಕೆಐಎಎಲ್: ಬೆಂಗಳೂರು ದಕ್ಷಿಣ ಮತ್ತು ಕೇಂದ್ರ ಭಾಗದ ಎಲೆಕ್ಟ್ರಾನಿಕ್ ಸಿಟಿ, ಕೋರಮಂಗಲ, ಜಯನಗರ, ಜೆಪಿನಗರ, ಬನಶಂಕರಿ, ಬಸವನಗುಡಿ, ಮೆಜೆಸ್ಟಿಕ್, ಎಂಜಿ ರಸ್ತೆ ಯಿಂದ ಬರುವ ವಾಹನಗಳು ಬಸವೇಶ್ವರ ಸರ್ಕಲ್-ಮೇಕ್ರಿ ಸರ್ಕಲ್-ಎಡ ತಿರುವು-ಸದಾಶಿವನಗರ ಪೊಲೀಸ್ ಸ್ಟೇಷನ್-ಬಲ ತಿರುವು- ನ್ಯೂ ಬಿಇಎಲ್ ಸರ್ಕಲ್- ಕುವೆಂಪು ಸರ್ಕಲ್-ಬಲ ತಿರುವು- ಭದ್ರಪ್ಪ ಲೇಔಟ್-ಹೆಬ್ಬಾಳ ಸರ್ಕಲ್-ವೀರಣ್ಣ ಪಾಳ್ಯ-ನಾಗವಾರ ಜಂಕ್ಷನ್- ಎಡ ತಿರುವು-ಥಣಿಸಂದ್ರ ಮುಖ್ಯ ರಸ್ತೆ-ರೇವಾ ಕಾಲೇಜ್ ಜಂಕ್ಷನ್-ಬಲ ತಿರುವು- ಬಲ ತಿರುವು- ಬಾಗಲೂರು ಮುಖ್ಯ ರಸ್ತೆ- ಬಾಗಲೂರು ಗುಂಡಪ್ಪ ಸರ್ಕಲ್ ಬಲ ತಿರುವು-ಬಾಗಲೂರು ಬಸ್ ನಿಲ್ದಾಣ-ಎಡ ತಿರುವು- ಬಂಡಿಕೊಡಿಗೇಹಳ್ಳಿ ಮುಖ್ಯರಸ್ತೆ-ಮೈಲನಹಳ್ಳಿ ಕ್ರಾಸ್- ಎಡ ತಿರುವು-ಬೇಗೂರು ಬ್ಯಾಕ್ ಗೇಟ್-ಬಲ ತಿರುವು-1ನೇ ಸರ್ಕಲ್-2ನೇ ಸರ್ಕಲ್ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಬೇಕು.
ಬೆಂಗಳೂರು ಪಶ್ಚಿಮ ಮತ್ತು ಉತ್ತರ ಭಾಗದಿಂದ ಕೆಐಎಎಲ್ ಕಡೆಗೆ: ಬೆಂಗಳೂರು ಪಶ್ಚಿಮ ಮತ್ತು ಉತ್ತರ ಭಾಗದ ಕೆಂಗೇರಿ, ವಿಜಯನಗರ, ಮೈಸೂರು ರಸ್ತೆ, ರಾಜಾಜಿ ನಗರ, ಮಲ್ಲೇಶ್ವರಂ, ಯಶವಂತಪುರ, ಪೀಣ್ಯ ದಿಂದ ಬರುವ ವಾಹನಗಳು ಗೊರಗುಂಟೆ ಪಾಳ್ಯ-ಬಿಇಎಲ್ ಜಂಕ್ಷನ್-ಎಡ ತಿರುವು-ಗಂಗಮ್ಮನ ಗುಡಿ ಸರ್ಕಲ್- ಎಂ.ಎಸ್. ಪಾಳ್ಯ- ಯಲಹಂಕ ಮದರ್ ಡೈರಿ ಜಂಕ್ಷನ್- ಮೇ।। ಸಂದೀಪ್ ಉನ್ನಿಕೃಷ್ಣನ್ ಜಂಕ್ಷನ್-ಎಡ ತಿರುವು-ನಾಗೇನಹಳ್ಳಿ ಗೇಟ್-ಸಿಂಗನಾಯಕನಹಳ್ಳಿ-ರಾಜಾನುಕುಂಟೆ-ಬಲ ತಿರುವು-ಎಂ.ವಿ.ಐ.ಟಿ ಜಂಕ್ಷನ್-ಎಡ ತಿರುವು-ವಿದ್ಯಾನಗರ ಕ್ರಾಸ್- ಚಿಕ್ಕಜಾಲ-ಸಾದಹಳ್ಳಿ ಗೇಟ್-ಏರ್ಪೋರ್ಟ್ ಟೋಲ್- 1ನೇ ಸರ್ಕಲ್-2ನೇ ಸರ್ಕಲ್ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಬೇಕು.