ನೆಲಮಂಗಲ: ನಟ ವಿನೋದ್ ರಾಜ್ ಮನೆಯಲ್ಲಿ ಅನ್ನಪೂರ್ಣ ಎಂಬ ಯುವತಿ ಕಳೆದ ನಾಲ್ಕು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಇದೀಗ ಆಕೆಯ ಮದುವೆಯನ್ನು ಮನೆ ಮಗಳಂತೆ ಮಾಡಿಸಿದ್ದಾರೆ ವಿನೋದ್ ರಾಜ್. ಮದ್ದೂರು ತಾಲೂಕು ಹುಳಗನಹಳ್ಳಿಯ ಪ್ರಕಾಶ್ ಎಂಬವರು ಅನ್ನಪೂರ್ಣ ಅವರನ್ನು ತಮ್ಮ ಬಾಳ ಸಂಗಾತಿಯಾಗಿ ವರಿಸಿದರು. ಪ್ರಕಾಶ್ ಪೊಲೀಸ್ ಇಲಾಖೆಯಲ್ಲಿ ಕಳೆದ 7 ವರ್ಷದಿಂದ ಹೋಂ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ. ನೆಲಮಂಗಲದ ಯಂಟಗಾನಹಳ್ಳಿಯ ಪುರಾತನ ಗೂಬೆಕಲ್ಲಮ್ಮ ದೇವಾಸ್ಥಾನದಲ್ಲಿ ಹಿರಿಯರ ಸಮ್ಮುಖದಲ್ಲಿ ಮದುವೆ ಸರಳವಾಗಿ ನಡೆಯಿತು.
ಇದನ್ನೂ ಓದಿ: ಹಾಸನ.. ಬಾಲಕಿ ಮೇಲೆ ಅತ್ಯಾಚಾರ: ಇಬ್ಬರ ಬಂಧನ