ದೇವನಹಳ್ಳಿ: ಚೆನ್ನೈಯಿಂದ ಬೆಂಗಳೂರಿಗೆ ಬರುವ ವಿಮಾನದಲ್ಲಿ ಮಹಿಳಾ ಪ್ರಯಾಣಿಕರ ಹಿಂಬದಿಯ ಸೀಟ್ನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ಮಹಿಳೆಯ ಮೈ ಮುಟ್ಟಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂಬ ದೂರಿನ್ವಯ ವ್ಯಕ್ತಿಯ ಬಂಧನ ಮಾಡಲಾಗಿದೆ.
ಆಕೆ ಮಾರ್ಕೆಟಿಂಗ್ ಕೆಲಸಕ್ಕೆ ಚೆನ್ನೈಗೆ ಹೋಗಿ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದರು. ಏಪ್ರಿಲ್ 18ರ ರಾತ್ರಿ 10ಗಂಟೆ ಸುಮಾರಿಗೆ ಇಂಡಿಗೋ 6e6225 ವಿಮಾನದ ಹಿಂಬದಿ ಸೀಟ್ ನಂ-20aರಲ್ಲಿ ಕುಳಿತಿದ್ದ. ಚೆನ್ನೈ ಮೂಲದ ಕೃಷ್ಣನ್. ಪಿ. ಎಂಬಾತ ಮುಂದಿನ ಸೀಟ್ನಲ್ಲಿ ಕುಳಿತಿದ್ದ ಮಹಿಳೆಯ ಮೈಮುಟ್ಟಿ ಅಸಭ್ಯವಾಗಿ ವರ್ತಿಸಿದ್ದ. ಮಹಿಳೆ ಕೂಡಲೇ ಎಚ್ಚೆತ್ತು ವಾರ್ನಿಂಗ್ ಮಾಡಿದ್ದರು. ಆದರೂ ಆತ ಮೂರ್ನಾಲ್ಕು ಸಲ ಮಹಿಳೆ ಮೈಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದ.
ಮಹಿಳೆ ಹಿಂಬದಿ ಸೀಟಿನ ಕೃಷ್ಣನ್ನಿಂದ ವಿಮಾನದಲ್ಲೆ ಲೈಂಗಿಕ ಕಿರುಕುಳ ನೀಡಿದ್ದರ ಬಗ್ಗೆ ವಿಮಾನದ ಕ್ಯಾಬಿನ್ ಕ್ರೂಗೆ ತಿಳಿಸಿದ್ದರು. ಕೃಷ್ಣನ್ ಜೊತೆ ಕೂತಿದ್ದ ದಂಪತಿ ಸಹ ಈತನ ಕೃತ್ಯದ ಬಗ್ಗೆ ಸಿಬ್ಬಂದಿಗೆ ತಿಳಿಸಿದ್ದರು. ವಿಮಾನದಿಂದ ಇಳಿದ ಕೂಡಲೇ ಕೆಂಪೇಗೌಡ ಏರ್ಪೋರ್ಟ್ ಪೊಲೀಸ್ ಠಾಣೆಯಲ್ಲಿ ಸಂತ್ರಸ್ಥ ಮಹಿಳೆ ದೂರು ದಾಖಲಿಸಿದ್ದ ಪರಿಣಾಮ ಕೃಷ್ಣನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು.
ಇದನ್ನೂ ಓದಿ: ಸಾಲ ಕೊಡಿಸುವ ನೆಪದಲ್ಲಿ ಜನರಿಗೆ ವಂಚನೆ: ನಾಲ್ವರ ಬಂಧನ