ದೇವನಹಳ್ಳಿ: ಕೌಟುಂಬಿಕ ಕಲಹದಿಂದಾಗಿ ಪತಿ-ಪತ್ನಿಯ ನಡುವೆ ಗಲಾಟೆ ಶುರುವಾಗಿ ಹೆಂಡತಿಯ ಕೊಲೆಯೊಂದಿಗೆ ಅಂತ್ಯವಾಗಿದೆ. ಇದೇ ವೇಳೆ, ಅಪ್ಪ ಜೈಲು ಸೇರಿದ್ರೆ, ಅಮ್ಮ ಕೊಲೆಯಾಗಿದ್ದಾಳೆ. ಪೋಷಕರಿಲ್ಲದೆ ಮಕ್ಕಳು ಅನಾಥರಾಗಿದ್ದಾರೆ.
ದೇವನಹಳ್ಳಿಯ ಸಾವಕನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶಬೀನಾ (28) ಕೊಲೆಯಾದ ದುರ್ದೈವಿ. ಆರೋಪಿ ಇಮ್ತಿಯಾಜ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಸಾವಕನಹಳ್ಳಿ ಗೇಟ್‌ನ ಟ್ರ್ಯಾಕ್ಟರ್ ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಕಡಬ: ಯುವತಿಗೆ ಮಗು ಕರುಣಿಸಿ ಶೀಲ ಶಂಕಿಸಿದ ಯುವಕನ ವಿರುದ್ಧ ದೂರು