ದೊಡ್ಡಬಳ್ಳಾಪುರ : ಡಬಲ್ ರೈಡಿಂಗ್ನಲ್ಲಿ ಜೊತೆಯಾಗಿ ಬೈಕ್ ವೀಲಿಂಗ್ ಮಾಡುತ್ತಿದ್ದ ಯುವಕರಿಬ್ಬರು ವೀಲಿಂಗ್ ಕ್ರೇಜ್ನಿಂದ ಒಟ್ಟಿಗೇ ಪ್ರಾಣ ಕಳೆದುಕೊಂಡಿದ್ದಾರೆ.
ಬೆಂಗಳೂರಿನ ಮತ್ತೀಕೆರೆ ನಿವಾಸಿಗಳಾದ ಸೈಯದ್ (20) ಅರ್ಬಾಸ್ (22) ಮೃತಪಟ್ಟವರು. ಇವರಿಬ್ಬರೂ ಎಲ್ಲಿಗೆ ಹೋದ್ರು ಜೊತೆಯಾಗಿಯೇ ಹೋಗುತ್ತಿದ್ದು, ಜೊತೆಯಾಗಿಯೇ ಬೈಕ್ ವೀಲಿಂಗ್ ಮಾಡುತ್ತಿದ್ದರು. ವೀಲಿಂಗ್ ಮಾಡುವ ಸಾಕಷ್ಟು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲೂ ಶೇರ್ ಮಾಡಿಕೊಂಡಿದ್ದರು.
ಆದರೆ ಸೈಯದ್ ಮತ್ತು ಅರ್ಬಾಸ್ ದೊಡ್ಡಬಳ್ಳಾಪುರ-ಯಲಹಂಕ ರಸ್ತೆಯಲ್ಲಿ ನಿನ್ನೆ ಸಂಜೆ 5 ಗಂಟೆ ವೇಳೆಗೆ ಬೈಕ್ ವೀಲಿಂಗ್ ಮಾಡುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ವೀಲಿಂಗ್ ಮಾಡುತ್ತಿದ್ದವರು ವೀಲಿಂಗ್ ಮಾಡುತ್ತಲೇ ಜೆಸಿಬಿ ಓವರ್ ಟೇಕ್ ಮಾಡಲು ಯತ್ನಿಸಿದ್ದಾರೆ. ಈ ವೇಳೆ ನಿಯಂತ್ರಣ ಕಳೆದುಕೊಂಡ ಬೈಕ್ ಸವಾರ ಜೆಸಿಬಿಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದ ತೀವ್ರತೆಗೆ ಸೈಯದ್ ಮತ್ತು ಅರ್ಬಾಸ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಹೊಸಹುಡೆ ಗೇಟ್ ಬಳಿಯ ಕಂಟ್ರಿ ಕ್ಲಬ್ ಮುಂಭಾಗದಲ್ಲಿ ಘಟನೆ ಸಂಭವಿಸಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.