ETV Bharat / state

ರಾಜಕೀಯ ಪ್ರಚಾರಕ್ಕೆ ಕಟ್ಟಿದ ಬಂಟಿಂಗ್ಸ್​ಗೆ ಸಿಲುಕಿ ಪ್ರಾಣ ಕಳೆದುಕೊಂಡ ಕೋತಿ

ಚುನಾವಣಾ ಪ್ರಚಾರಕ್ಕೆ ಕಟ್ಟಲಾಗಿದ್ದ ಬಂಟಿಂಗ್ಸ್​ಗೆ ಕೋತಿಯೊಂದು ಸಿಲುಕಿ ಪ್ರಾಣಬಿಟ್ಟಿದೆ.

ಬಂಟಿಂಗ್ಸ್​ಗೆ ಸಿಲುಕಿ ಪ್ರಾಣ ಕಳೆದುಕೊಂಡ ಕೋತಿ

author img

By

Published : Feb 3, 2023, 10:41 PM IST

ದೊಡ್ಡಬಳ್ಳಾಪುರ: ರಾಜಕೀಯ ಪ್ರಚಾರಕ್ಕೆಂದು ಕಟ್ಟಲಾಗಿದ್ದ ಬಂಟಿಂಗ್ಸ್​ಗೆ ಸಿಲುಕಿದ ಕೋತಿಯೊಂದು ಪ್ರಾಣಬಿಟ್ಟಿರುವ ಘಟನೆ ತಾಲೂಕಿನ ಆರೂಢಿ ಗ್ರಾಮದಲ್ಲಿ ಸಂಭವಿಸಿದೆ. ಗ್ರಾಮದ ಅರಳಿ ಮರದ ಮೇಲೆ ಬಂಟಿಂಗ್ಸ್ ಹೊತ್ತೊಯ್ದು ಕೋತಿಗಳು ಆಟವಾಡುತ್ತಿದ್ದಾಗ, ಒಂದು ಕೋತಿಯ ಕುತ್ತಿಗೆಗೆ ಬಂಟಿಂಗ್ಸ್ ಸುತ್ತಿಕೊಂಡು ಸಾವನ್ನಪ್ಪಿದೆ.

ಎತ್ತರವಾದ ಮರದ ಮೇಲೆ ಘಟನೆ ನಡೆದಿರುವುದರಿಂದ ಕೋತಿಯನ್ನು ತೆರವುಗೊಳಿಸಲು ಸಾಧ್ಯವಾಗದೆ ಯುವಕರು ಅಸಹಾಯಕರಾದರು. ಜೊತೆಯಲ್ಲಿದ್ದ ಕೋತಿಗಳೂ ಸಹ ಶವವನ್ನು ಬಂಟಿಂಗ್ಸ್​ನಿಂದ ಬೇರ್ಪಡಿಸಲು ಪ್ರಯತ್ನಿಸಿ ವಿಫಲವಾದವು. ಇತ್ತೀಚೆಗಷ್ಟೆ ತಾಲೂಕಿನಾದ್ಯಂತ ಅನಧಿಕೃತ ಬ್ಯಾನರ್ ಬಂಟಿಂಗ್ಸ್ ತೆರವು ಮಾಡಲಾಗಿತ್ತು. ಅಂತೆಯೇ ಆರೂಢಿ ಗ್ರಾಮದಲ್ಲಿ ಸಹ ತೆರವು ಕಾರ್ಯ ನಡೆದಿತ್ತು.

ಕೂಲಿ ಕಾರ್ಮಿಕನ ಮೇಲೆ ಹುಲಿ ದಾಳಿ: ಹುಲಿ ದಾಳಿಯಿಂದ ಕೂಲಿ ಕಾರ್ಮಿಕ ಗಾಯಗೊಂಡಿರುವ ಘಟನೆ ಹೆಚ್‌.ಡಿ.ಕೋಟೆ ತಾಲ್ಲೂಕಿನ ಮೇಟೆಕುಪ್ಪೆ ಗ್ರಾಮದ ಜಮೀನಿನಲ್ಲಿ ನಡೆದಿದೆ. ಹಿರೇಹಳ್ಳಿ ಎ ಕಾಲೋನಿಯ ಮುನೇಶ್ವರ (27) ಗಾಯಗೊಂಡವರು ಎಂದು ತಿಳಿದುಬಂದಿದೆ. ಬಾಳೆಗೊನೆ ಕತ್ತರಿಸಲು ಕೇರಳಿಗರ ಜಮೀನಿಗೆ ಕೂಲಿ ಕೆಲಸಕ್ಕೆ 3 ಮಂದಿ ಕಾರ್ಮಿಕರು ಹೋಗಿದ್ದಾಗ ಪೊದೆಯಿಂದ ಹೊರಬಂದ ಹುಲಿ ದಾಳಿ ನಡೆಸಿದೆ. ಗಾಬರಿಯಿಂದ ಕಾರ್ಮಿಕರು ಚೀರಾಡುತ್ತಿದ್ದಂತೆಯೇ ಹುಲಿ ಕಾಲ್ಕಿತ್ತಿದೆ. ಮುನೇಶ್ವರ ಅವರ ಬಲಭಾಗದ ಕೈ ಬೆರಳುಗಳು ಸೀಳಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೀದಿನಾಯಿಗಳ ದಾಳಿಗೆ ಹಸು-ಕರು ಬಲಿ: ಜಿಲ್ಲೆಯಲ್ಲಿ ಪ್ರತಿನಿತ್ಯ ಚಿರತೆ, ಹುಲಿ ಹಾಗೂ ಆನೆ ದಾಳಿಗೆ ಮನುಷ್ಯರು ಹಾಗೂ ಸಾಕು ಪ್ರಾಣಿಗಳು ಬಲಿ ಎಂಬ ಸುದ್ದಿ ಕೇಳುತ್ತಿದ್ದೇವೆ. ಆದರೆ ನಗರದಲ್ಲಿ ಬೀದಿ ನಾಯಿಗಳ ದಾಳಿಗೆ ಹಸುವಿನ ಕರು ಬಲಿಯಾಗಿರುವ ಘಟನೆ ಭಾನುವಾರ ಮುಂಜಾನೆ ನಡೆದಿದೆ. ಆರಂಭದಲ್ಲಿ ಚಿರತೆ ದಾಳಿ ನಡೆಸಿದೆ ಎಂದು ಶಂಕಿಸಲಾಗಿತ್ತು.

ಇದನ್ನೂ ಓದಿ: ಫೇಸ್​ಬುಕ್​​ ಜಾಹೀರಾತು ನೋಡಿ ಜಾಬ್‌ಗೆ ಅಪ್ಲೈ ಮಾಡ್ತೀರಾ? ಇಂಥ ವಂಚಕರಿದ್ದಾರೆ ಜೋಕೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.