ಬೆಂಗಳೂರು: ಕೂಲಿ ಕಾರ್ಮಿಕನೋರ್ವ ವಾಹನವನ್ನು ಓವರ್ ಟೇಕ್ ಮಾಡಲು ಹೋಗಿ ಎದರು ಬರುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಹೊಸಕೋಟೆ ತಾಲೂಕಿನ ಉಪ್ಪಾರ ಹಳ್ಳಿಯಲ್ಲಿ ನಡೆದಿದೆ.
ತಿಮ್ಮಸಂದ್ರ ಗ್ರಾಮದ ವಿಜಯಕುಮಾರ್ ( 35 ) ಮೃತ ಕೂಲಿ ಕಾರ್ಮಿಕ ಎನ್ನಲಾಗಿದೆ. ಈತ ಕೆಲಸ ಮುಗಿಸಿಕೊಂಡು ಬೈಕಿನಲ್ಲಿ ಹೊಸಕೋಟೆಯಿಂದ ತನ್ನ ಗ್ರಾಮಕ್ಕೆ ಹೊರಟಿದ್ದಾಗ ಮುಂದೆ ಹೋಗುತ್ತಿದ್ದ ವಾಹನವನ್ನು ಒವರ್ ಟೇಕ್ ಮಾಡಲು ಹೋಗಿ ಎದುರಿನಿಂದ ಬರುತ್ತಿದ್ದ ಟ್ಯಾಂಕರ್ಗೆ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಈ ಸಂಬಂಧ ಹೊಸಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.