ETV Bharat / state

ರೈಲ್ವೆ ಅಂಡರ್​ ಪಾಸ್ ಬಳಿ ಹಳ್ಳಕ್ಕೆ ಬಿದ್ದು ವ್ಯಕ್ತಿ ಸಾವು - ಈಟಿವಿ ಭಾರತ ಕನ್ನಡ

ರೈಲ್ವೆ ಕಾಮಗಾರಿಗೆ ಎಂದು ನಿರ್ಮಿಸಿದ್ದ ಹಳ್ಳಕ್ಕೆ ಕಾಲು ಜಾರಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ದೊಡ್ಡ ಬಳ್ಳಾಪುರದಲ್ಲಿ ನಡೆದಿದೆ.

ಹಳ್ಳಕ್ಕೆ ಬಿದ್ದು ವ್ಯಕ್ತಿ ಸಾವು
ಹಳ್ಳಕ್ಕೆ ಬಿದ್ದು ವ್ಯಕ್ತಿ ಸಾವು
author img

By

Published : May 22, 2023, 6:16 PM IST

ದೊಡ್ಡಬಳ್ಳಾಪುರ: ಕಾಮಗಾರಿಗೆಂದು ನಿರ್ಮಾಣ ಮಾಡಲಾಗಿದ್ದ ಹಳ್ಳಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ನಗರದ ರೈಲ್ವೆ ಸ್ಟೇಷನ್ ಬಳಿ ಇಂದು ನಡೆದಿದೆ. ವಿ ಉಮೇಶ್ (42) ಮೃತ ವ್ಯಕ್ತಿ. ಕಳೆದ ಮೂರು ದಿನಗಳಿಂದ ತಾಲೂಕಿನಲ್ಲಿ ಭಾರಿ ಮಳೆಯಾಗುತ್ತಿದೆ. ಈ ವೇಳೆ, ಇಲ್ಲಿಯ ರೈಲ್ವೆ ಅಂಡರ್ ಪಾಸ್ ಬಳಿ ಕಾಮಾಗಾರಿಗಾಗಿ ನಿರ್ಮಾಣ ಮಾಡಲಾಗಿದ್ದ ಹಳ್ಳಕ್ಕೆ ಮಳೆ ನೀರು ಹರಿದು ಬಂದಿದೆ. ಇದಿರಿಂದ ಹಳ್ಳ ಸಂಪೂರ್ಣವಾಗಿ ತುಂಬಿದೆ. ಇದೇ ಮಾರ್ಗದಲ್ಲಿ ಹೋಗುತ್ತಿದ್ದ ಉಮೇಶ್​ ಕಾಲು ಜಾರಿ ಹಳ್ಳಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ.

ಮೃತನ ದೇಹದ ಅಂಗಿಯಲ್ಲಿ ದೊರೆತ ಆಧಾರ್ ಕಾರ್ಡ್ ನಿಂದ ಗುರುತು ಪತ್ತೆಯಾಗಿದೆ, ಮೃತ ವ್ಯಕ್ತಿ ದೊಡ್ಡಬಳ್ಳಾಪುರ ತಾಲೂಕಿನ ಕೋಡಿಹಳ್ಳಿಯ ನಿವಾಸಿ ಎಂದು ತಿಳಿದು ಬಂದಿದೆ. ಮತ್ತೊಂದು ಮೂಲದ ಪ್ರಕಾರ ಮೃತ ವ್ಯಕ್ತಿ ಕುಡಿದ ಮತ್ತಿನಲ್ಲಿ ಹಳ್ಳಕ್ಕೆ ಬಿದ್ದಿದ್ದಾರೆ ಎಂದು ಹೇಳಲಾಗಿದೆ. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ರಾಜ್ಯದ ವಿವಿಧೆಡೆ ಭಾರೀ ಗಾಳಿ ಸಹಿತ ಮಳೆ.. ಏಳು ಮಂದಿ ಸಾವು, ಜನಜೀವನ ಅಸ್ತವ್ಯಸ್ತ

ಇನ್ನು ನಿನ್ನೆ ದಿನ ರಾಜ್ಯದ ವಿವಿಧೆಡೆ ಗಾಳಿ ಸಹಿತ ಭಾರೀ ಮಳೆ ಸುರಿದಿದ್ದು, ಅನೇಕ ಅವಾಂತರಗಳು ಸುಷ್ಟಿಯಾಗಿವೆ. ಮಳೆಯಿಂದಾಗಿ ಕೊಪ್ಪಳ, ಬಳ್ಳಾರಿ, ಮೈಸೂರು, ಚಿಕ್ಕಮಗಳೂರು, ಬೆಂಗಳೂರು ಸೇರಿದಂತೆ ಅನೇಕ ಕಡೆಗಳಲ್ಲಿ ಸಾವು ನೋವು ಸಂಭವಿಸಿವೆ.

ಮೈಸೂರಿನಲ್ಲಿ ಕಳೆದ ಎರಡುದಿನಗಳಿಂದ ಬಿಟ್ಟು ಬಿಡದೆ ಗುಡುಗು ಸಹಿತ ಮಳೆಯಾಗಿದೆ. ಪರಿಣಾಮ ಜಿಲ್ಲೆಯಲ್ಲಿ ಒಟ್ಟು 3 ಜನ ಸಾವನ್ನಪ್ಪಿದ್ದಾರೆ. ಪಿರಿಯಾಪಟ್ಟಣದ ಬೆಟ್ಟದಪುರ ಹತ್ತಿರದ ಅವರ್ತಿ ಗ್ರಾಮದ ರೈತ ಲೋಕೇಶ್ (55), ಹುಣಸೂರು ತಾಲೂಕಿನ ಮಂಟಿಕೊಪ್ಪಲು ಗ್ರಾಮದ ರೈತ ಹರೀಶ್​ ಸಿಡಿಲಿಗೆ ಬಲಿಯಾಗಿದ್ದಾರೆ.

ಕೊಪ್ಪಳದಲ್ಲಿ ಬಾಲಕ ಬಲಿ: ಕೊಪ್ಪಳ ಜಿಲ್ಲೆಯ ಶಿವಪುರದಲ್ಲಿ ನಿನ್ನೆ ಮಧ್ಯಾಹ್ನ ಸಿಡಿಲು ಬಡಿದು ಶ್ರೀಕಾಂತ ದೊಡ್ಡನಗೌಡ್ರ ಮೇಟಿ (16) ಎಂಬ ಬಾಲಕ ಸಾವನಪ್ಪಿದ್ದಾನೆ. ಸಿಡಿಲು ಬಡಿದ ಕೂಡಲೇ ಶ್ರೀಕಾಂತನನ್ನು ಸ್ಥಳೀಯರು ಜಿಲ್ಲಾಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ. ಏಕಾಏಕಿ ಗಾಳಿ ಸಹಿತ ಸುರಿದ ಮಳೆಗೆ ಹಲವಾರು ಮರ ಗಿಡಗಳು ದರೆಗುರುಳಿವೆ.

ಸಿಡಿಲು ಬಡಿದು ಗ್ರಾ.ಪಂ ಸದಸ್ಯ ಸಾವು: ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಡಿ ಸಿದ್ದಾಪುರ ಗ್ರಾಮದಲ್ಲಿ ಸಿಡಿಲು ಬಡಿದು ಗ್ರಾಮ ಪಂಚಾಯ್ತಿ ಸದಸ್ಯ ಮೃತಪಟ್ಟ ಘಟನೆ ಭಾನುವಾರ ಸಂಜೆ ನಡೆದಿದೆ. ಮಲ್ಲಿಕಾರ್ಜುನ (38) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಮಲ್ಲಿಕಾರ್ಜುನ್​ ಭಾನುವಾರ ಸಂಜೆ ಮನೆ ಹಿಂಭಾಗದಲ್ಲಿಯ ಹೊಲಕ್ಕೆ ಹೋದಾ ವೇಳೆ ಸಿಡಿಲು ಬಡಿದಿದೆ.

ಮರ ಬಿದ್ದು ವ್ಯಕ್ತಿ ಸಾವು: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ಭಾನುವಾರ ಬಿರುಗಾಳಿ ಸಹಿತ ಭಾರಿ ಮಳೆ ಸುರಿದಿದೆ. ಈ ವೇಳೆ ಚಲಿಸುತ್ತಿದ್ದ ಸ್ಕೂಟಿ ಮೇಲೆ ಮರ ಉರುಳಿ ಬಿದ್ದು, ಸವಾರ ಮೃತಪಟ್ಟಿದ್ದಾನೆ. ವೇಣುಗೋಪಾಲ್ (65) ಮೃತ ದುರ್ದೈವಿ.

ಆಂಧ್ರ ಯುವತಿ ಸಾವು: ಬೆಂಗಳೂರಿನಲ್ಲಿ ಕಬನ್ ಪಾರ್ಕ್​ ನೋಡಿಕೊಂಡು ಕಾರಿನಲ್ಲಿ ಹಿಂತಿರುಗಿದ್ದ ವೇಳೆ ಮಳೆ ಬಿದ್ದ ಪರಿಣಾಮ ಕೆ.ಆರ್.ಸರ್ಕಲ್ ಬಳಿಯ ಅಂಡರ್ ಪಾಸ್​ನಲ್ಲಿ ಕಾರು ಮುಳುಗಡೆಯಾಗಿದೆ. ಕಾರಿನಲ್ಲಿದ್ದ ಚಾಲಕ ಸೇರಿ ಒಟ್ಟು ಆರು ಜನರನ್ನು ಸ್ಥಳೀಯರು, ಪೊಲೀಸರು ರಕ್ಷಣೆ ಮಾಡಿದ್ದಾರೆ. ಆದೆರೆ ಇದರಲ್ಲಿದ್ದ ಯುವತಿ ತೀವ್ರ ಅಸ್ವಸ್ಥಗೊಂಡು, ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.