ETV Bharat / state

ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ: 3.68 ಲಕ್ಷ ಮೌಲ್ಯದ 230 ಗ್ರಾಂ ಗಾಂಜಾ ವಶಕ್ಕೆ

author img

By

Published : Nov 12, 2020, 7:16 PM IST

ಯುಎಸ್ಎದಿಂದ ಕೆಐಎಎಲ್​ನ ಇಂಟರನ್ಯಾಷನಲ್ ಏರ್ ಕೋರಿಯರ್ ಸೆಂಟರ್​ಗೆ ಬಂದಿದ್ದ ಪಾರ್ಸಲ್ ತಪಾಸಣೆ ನಡೆಸಿದ್ದಾಗ ಮಕ್ಕಳ ಆಟಿಕೆಯಲ್ಲಿ ಬಚ್ಚಿಟ್ಟು ಗಾಂಜಾ ಸಾಗಾಣಿಕೆ ಮಾಡುತ್ತಿರುವುದು ಪತ್ತೆಯಾಗಿದೆ.

230 grams of marijuana worth Rs 3.68 lakh seized
ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ: 3.68 ಲಕ್ಷ ಮೌಲ್ಯದ 230 ಗ್ರಾಂ ಗಾಂಜಾ ವಶಕ್ಕೆ

ದೇವನಹಳ್ಳಿ: ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ಕಾರ್ಯಚರಣೆಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 3.68 ಲಕ್ಷ ಮೌಲ್ಯದ 230 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಇಂಟೆಲಿಜೆನ್ಸ್ ವಿಂಗ್​ನ ಅಧಿಕಾರಿಗಳು ಅಕ್ರಮವಾಗಿ ವಿದೇಶದಿಂದ ಬೆಂಗಳೂರಿಗೆ ತರಲಾಗಿದ್ದ ಗಾಂಜಾವನ್ನು ಪತ್ತೆ ಮಾಡಿದ್ದಾರೆ.

ಯುಎಸ್ಎದಿಂದ ಕೆಐಎಎಲ್​ನ ಇಂಟರನ್ಯಾಷನಲ್ ಏರ್ ಕೋರಿಯರ್ ಸೆಂಟರ್​ಗೆ ಬಂದಿದ್ದ ಪಾರ್ಸಲ್ ತಪಾಸಣೆ ನಡೆಸಿದ್ದಾಗ ಮಕ್ಕಳ ಆಟಿಕೆಯಲ್ಲಿ ಬಚ್ಚಿಟ್ಟು ಗಾಂಜಾ ಸಾಗಾಣಿಕೆ ಮಾಡುತ್ತಿರುವುದು ಪತ್ತೆಯಾಗಿದೆ. 3.68 ಲಕ್ಷ ಮೌಲ್ಯದ 230 ಗ್ರಾಂ ಗಾಂಜಾ ವಶಕ್ಕೆ ಪಡೆದಿರುವ ಕಸ್ಟಮ್ಸ್ ಅಧಿಕಾರಿಗಳು ಪ್ರಕರಣ ದಾಖಲು ಮಾಡಿದ್ದಾರೆ.

ನವೆಂಬರ್ 1 ರಂದು ಸಹ ಕೆಐಎಎಲ್​ನ ಕಸ್ಟಮ್ಸ್ ಇಂಟೆಲಿಜೆನ್ಸ್ ವಿಂಗ್ ಕಸ್ಟಮ್ಸ್ ಏರ್-ಕಾರ್ಗೋ ಕಾಂಪ್ಲೆಕ್ಸ್​ನಲ್ಲಿ ತಪಾಸಣೆ ನಡೆಸಿದ್ದಾಗ 72 ಲಕ್ಷ ಮೌಲ್ಯದ 448 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದರು.

ಯುಎಸ್​ಎಯಿಂದ ಕೊರಿಯರ್ ಪಾರ್ಸೆಲ್‌ಗಳಲ್ಲಿ ಬಂದಿದ್ದ ಗೇಮಿಂಗ್ ಮೌಸ್ ಮತ್ತು ವಾಟರ್ ಕಲರ್ ಕಿಟ್‌ನಲ್ಲಿ ಬಚ್ಚಿಟ್ಟು ಗಾಂಜಾವನ್ನು ಸಾಗಾಣಿಕೆ ಮಾಡಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.