ETV Bharat / state

ವಂದೇ ಭಾರತ್​ ಮಿಷನ್​ ಯೋಜನೆ... ಜಕಾರ್ತಾದಿಂದ ಬೆಂಗಳೂರಿಗೆ ಬಂದ 214 ಅನಿವಾಸಿ ಭಾರತೀಯರು - ವಂದೇ ಭಾರತ್ ಮಿಷನ್

ಇಂಡೋನೇಷ್ಯಾದ ಜಕಾರ್ತಾದಲ್ಲಿ​ ಸಿಲುಕಿದ್ದ ಕನ್ನಡಿಗರು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ವಂದೇ ಭಾರತ್ ಮಿಷನ್ ಅಡಿಯಲ್ಲಿ 214 ಮಂದಿ ಅನಿವಾಸಿ ಭಾರತೀಯರು ಬಂದಿದ್ದಾರೆ.

214 Non-resident Indians comes from Jharkhath
ಜರ್ಕಾತ್​​ನಿಂದ ಬೆಂಗಳೂರಿಗೆ ಬಂದ 214 ಅನಿವಾಸಿ ಭಾರತೀಯರು
author img

By

Published : May 23, 2020, 1:59 PM IST

ದೇವನಹಳ್ಳಿ: ಇಂಡೋನೇಷ್ಯಾದ ಜಕಾರ್ತಾ​​ನಲ್ಲಿ ಸಿಲುಕಿದ್ದ ಕನ್ನಡಿಗರು, ಇಂದು ಬೆಳಗಿನ ಜಾವ 1:40 ಗಂಟೆಗೆ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.

ವಂದೇ ಭಾರತ್ ಮಿಷನ್ ಅಡಿಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಹನ್ನೆರಡನೆಯ ವಿಮಾನ ಇದಾಗಿದ್ದು, ಈ ವಿಮಾನದಲ್ಲಿ 214 ಮಂದಿ ಅನಿವಾಸಿ ಭಾರತೀಯರು ಆಗಮಿಸಿದ್ದಾರೆ.

ತಜ್ಞ ವೈದ್ಯರು ಹಾಗೂ ಸಿಬ್ಬಂದಿಯಿಂದ ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಿದ್ದು, ಯಾವುದೇ ಪ್ರಯಾಣಿಕರಲ್ಲಿ ಕೊರೊನಾ ವೈರಸ್​​ ಸೋಂಕಿನ ಲಕ್ಷಣಗಳು ಕಂಡು ಬಂದಿಲ್ಲ. 214 ಪ್ರಯಾಣಿಕರನ್ನು 14 ದಿನಗಳ ಕಾಲ ಕ್ವಾರಂಟೈನ್​​​​​​ಗಾಗಿ ಹೋಟೆಲ್​​​​ಗಳಿಗೆ ಕಳಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ತಿಳಿಸಿದ್ದಾರೆ.

ಜಕಾರ್ತಾನಿಂದ ಬೆಂಗಳೂರಿಗೆ ಬರುವ ಮುನ್ನ, ತಾವು ಭಾರತದಲ್ಲಿ ಕ್ವಾರಂಟೈನ್​​​​ ಗೆ ಹೋಗುವುದಾಗಿ ಸಹಿ ಹಾಕಿದ ಪ್ರಯಾಣಿಕರು, ನಂತರ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ನಾವು ಹೊಟೇಲ್​ ಕ್ವಾರಂಟೈನ್​​​​ಗೆ ಹೋಗುವುದಿಲ್ಲವೆಂದು ಅಧಿಕಾರಿಗಳೊಂದಿಗೆ ಕ್ಯಾತೆ ತೆಗೆದಿದ್ದಾರೆ. ಕ್ವಾರಂಟೈನ್​​ಗೆ ಹೋಗಲು ಕ್ಯಾತೆ ತೆಗೆದ 46 ಪ್ರಯಾಣಿಕರನ್ನ ಸಮಾಧಾನ ಪಡಿಸುವಲ್ಲಿ ಅಧಿಕಾರಿಗಳು ಹೈರಾಣಾಗಿದ್ರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.