ದೊಡ್ಡಬಳ್ಳಾಪುರ : ಮಧ್ಯಾಹ್ನದ ಊಟ ಮಾಡಿದ 13 ಕೂಲಿ ಕಾರ್ಮಿಕರು ವಾಂತಿ ಭೇದಿಯಿಂದ ಅಸ್ವಸ್ಥಗೊಂಡಿದ್ದು, ಚಿಕಿತ್ಸೆ ನಂತರ ಚೇತರಿಸಿಕೊಂಡಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಸಂಕಷ್ಟನಹಳ್ಳಿಯ ಹೂವಿನ ತೋಟದ ಕೂಲಿ ಕೆಲಸಕ್ಕೆಂದು ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಎಂ.ಬೇವಿನಹಳ್ಳಿಯ 13 ಹೆಂಗಸರು ಬಂದಿದ್ದರು, ಮಧ್ಯಾಹ್ನದ ಊಟಕ್ಕಾಗಿ ಮನೆಯಿಂದಲೇ ಬಾಕ್ಸ್ ತಂದಿದ್ದರು. ಮಧ್ಯಾಹ್ನ 2 ಗಂಟೆಯ ಸಮಯದಲ್ಲಿ ಪರಸ್ಪರ ಊಟ ಹಂಚಿಕೊಂಡು ತಿಂದಿದ್ದಾರೆ. ಊಟ ಮಾಡಿದ ಕೆಲವೇ ಕ್ಷಣಗಳಲ್ಲಿ ಕೆಲವರಿಗೆ ವಾಂತಿ, ಮತ್ತೆ ಕೆಲವರಿಗೆ ಭೇದಿಯಾಗಿ ಅಸ್ವಸ್ಥಗೊಂಡಿದ್ದರು.
ಅಸ್ವಸ್ಥಗೊಂಡಿದ್ದ ಕೂಲಿ ಕಾರ್ಮಿಕರನ್ನ ಕೊನೇನಹಳ್ಳಿ ಆರೋಗ್ಯ ಉಪಕೇಂದ್ರಕ್ಕೆ ಕಳುಹಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಲಾಗಿತು.