ETV Bharat / state

10 ವಸಂತ ಪೂರೈಸಿದ ನೆಲಮಂಗಲ ತಾಲೂಕು ತಿಗಳರ ಪತ್ತಿನ ಸಹಕಾರ ಸಂಘ: ವಿದ್ಯಾರ್ಥಿಗಳಿಗೆ ಸನ್ಮಾನ

ನೆಲಮಂಗಲ ತಾಲೂಕು ತಿಗಳರ ಪತ್ತಿನ ಸಹಕಾರ ಸಂಘದ 10ನೇ ವಾರ್ಷಿಕ ಮಹಾಸಭೆ ನಡೆಯಿತು. ಕಾರ್ಯಕ್ರಮದಲ್ಲಿ ಎಸ್ಎಸ್ಎಲ್​ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ಸುಮಾರು 70 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ವಿದ್ಯಾರ್ಥಿಗಳಿಗೆ ಸನ್ಮಾನ
author img

By

Published : Sep 24, 2019, 7:11 AM IST

ನೆಲಮಂಗಲ: ತಿಗಳರ ಪತ್ತಿನ ಸಹಕಾರ ಸಂಘದ 10ನೇ ವಾರ್ಷಿಕ ಮಹಾಸಭೆ ಹಾಗೂ ಎಸ್ಎಸ್ಎಲ್​ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ಸುಮಾರು 70 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ತಿಗಳರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅರ್ಜುನ್, ಯಾವ ಸಮುದಾಯದಲ್ಲಿ ಸುಶಿಕ್ಷಿತರ ಸಂಖ್ಯೆ ಹೆಚ್ಚಾಗಿರುತ್ತದೋ ಆ ಸಮಾಜ ಮುಖ್ಯವಾಹಿನಿಯಲ್ಲಿ ಉತ್ತಮ ಸ್ಥಿತಿ ತಲುಪಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ನಮ್ಮ ತಿಗಳರ ಜನಾಂಗದ ವಿದ್ಯಾರ್ಥಿಗಳನ್ನು ಸನ್ಮಾನಿಸಿದಾಗ ನಮ್ಮ ವಿದ್ಯಾಭ್ಯಾಸದ ಜೊತೆ ಜನಾಂಗ ಇದೆ ಎನ್ನುವ ಭಾವನೆ ಬರುತ್ತದೆ. ಅಲ್ಲದೇ ನಮ್ಮ ಸಂಘದ ಕ್ಷೇಯೋಭಿವೃದ್ಧಿಗೆ ಹಣವನ್ನು ಹೂಡಿಕೆ ಮಾಡಿ ಸಂಘ ನಿಮ್ಮ ಜೊತೆ ಇದೆ ಎಂದು ತಿಳಿಸಿದ್ದೇವೆ ಎಂದರು.

Intro:೧೦ ವಸಂತಗಳು ಪೂರೈಸಿದ ನೆಲಮಂಗಲ ತಾಲೂಕು ತಿಗಳರ ಪತ್ತಿನ ಸಹಕಾರ ಸಂಘ,

ಎಸ್ ಎಲ್ ಸಿ ಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ.
Body:ನೆಲಮಂಗಲ: ಯಾವ ಸಮುದಾಯದಲ್ಲಿ ಸುಶಿಕ್ಷಿತರ ಸಂಖ್ಯೆ ಹೆಚ್ಚಾಗಿರುತ್ತದೋ, ಆ ಸಮಾಜದ ಮುಖ್ಯ ವಾಹಿನಿಯಲ್ಲಿ ಉತ್ತಮ ಸ್ಥಿತಿ ತಲುಪಲು ಸಾಧ್ಯ ಎಂದು ನೆಲಮಂಗಲ ತಿಗಳರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅರ್ಜುನ್ ಹೇಳಿದರು.

ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ ಚಿಕ್ಕಲ್ಲಯ್ಯ ಖಾಸಗಿ ಸಭಾಂಗಣದಲ್ಲಿ ತಿಗಳ ಪತ್ತಿನ ಸಹಕಾರ ಸಂಘದಿಂದ ೧೦ ನೇ ವಾರ್ಷಿಕ ಮಹಾಸಭೆ ಹಾಗೂ ಎಸ್ಎಸ್ಎಲ್ ಸಿ ಪಿಯುಸಿಯಲ್ಲಿ ಉತ್ತಮ ಅಂಕಗಳಿಸಿದ ಸುಮಾರು ೭೦ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಆಯೋಜಿಸಿದ್ದರು.

ತಿಗಳರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅರ್ಜುನ್ ಮಾತನಾಡಿ ವಿದ್ಯೆ ಎಂಬುದು ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ, ನಮ್ಮ ತಿಗಳರ ಜನಾಂಗದ ವಿದ್ಯಾರ್ಥಿಗಳು ಜೀವನದಲ್ಲಿ ತಿರುವಿನ ಘಟ್ಟವಾದ ಎಸ್ಎಸ್ಎಲ್ ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕಗಳಿಸಿದವರನ್ನು ಸನ್ಮಾನಿಸಿದಾಗ ನಮ್ಮ ವಿದ್ಯಾಭ್ಯಾಸದ ಜೊತೆ ಜನಾಂಗ ಇದೆ ಎನ್ನುವ ಭಾವನೆ ಬರುತ್ತದೆ, ಅಲ್ಲದೇ ನಮ್ಮ ಸಂಘದ ಕ್ಷೇಯೋಭಿವೃದ್ದಿಗೆ, ಹಣವನ್ನು ಹೂಡಿಕೆ ಮಾಡಿ, ಸಂಘದ ಹಿಡಿಗಂಟ್ಟುನ್ನು ಹೆಚ್ಚಿಸಿರುವ ವಯೋವೃದ್ದರಿಗೂ ಸನ್ಮಾನ್ಮ ಮಾಡಿ ಸಂಘ ನಿಮ್ಮ ಜೊತೆ ಇದೆ ಎಂದು ತಿಳಿಸಿದ್ದೇವೆ ಎಂದರು.

ಸಂಘದ ಉಪಾಧ್ಯಕ್ಷ ಗೋವಿಂದರಾಜು ಮಾತನಾಡಿ ೨೦೦೯ ರಲ್ಲಿ ಪ್ರಾರಂಭವಾದ ಸಂಘದಲ್ಲಿ ಸುಮಾರು ೭೫೦ ಸದಸ್ಯರಿದ್ದರು, ಇದೀಗ ೨೦೦೦ ಸದಸ್ಯರಿದ್ದಾರೇ, ೩೫ ಲಕ್ಷದಿಂದ ಈಗಾಗಲೇ ೭೦ ಲಕ್ಷ ಹಣ ಸಮಿತಿಯ ನಿಧಿಯಲ್ಲಿದೆ, ನಮ್ಮ ಮುಂದಿನ ಗುರಿ ೯ ಕೋಟಿಯಾಗಿದ್ದು, ತಿಗಳರ ಜನಾಂಗದ ಸಣ್ಣ ಪುಟ್ಟ ವ್ಯಾಪಾರಿಗಳಿಗೆ, ಹೂ, ಹಣ್ಣು, ತರಕಾರಿ ಮಾರಾಟಗಾರರಿಗೆ ಸಹಾಯ ಮಾಡುವುದೇ ನಮ್ಮ ಸಂಘದ ಗುರಿ, ಅಲ್ಲದೇ ಜನಾಂಗದ ಎಸ್ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ ಶೇಕಡಾ ೮೦ ಕ್ಕೂ ಅಧಿಕ ಅಂಕಗಳಿಸಿದವರಿಗೆ ಸನ್ಮಾನಿಸಲಾಯಿತು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಸದಸ್ಯರಾದ ರಾಜಣ್ಣ, ಸೀತಾರಾಮು, ವೆಂಕಟರಾಮಯ್ಯ, ಸಿದ್ದಗಂಗಯ್ಯ, ಶ್ರೀನಿವಾಸ್, ಆಂಜಿನಪ್ಪ, ಗಂಗರಾಜು, ಪ್ರಮೀಳಾ ಗಿರಿಧರ್, ಮಂಜುಳಾ, ಪಿಡಿಓ ನರಸಿಂಹಮೂರ್ತಿ. ಕಾರ್ಯದಶೀ ಅನಿಲ್ ಕುಮಾರ್, ವಕೀಲ ಆದಿತ್ಯ ರಮೇಶ್, ಸಿಬ್ಬಂದಿಗಳಾದ ಸುರೇಶ್, ರಘು ಹಾಗೂ ಜನಾಂಗದ ಎಲ್ಲಾ ಮುಖ್ಯಸ್ಥರು ಹಾಜರಿದ್ದರು.

01a-ಬೈಟ್: ಅರ್ಜುನ್, ತಿಗಳರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.