ಬಾಗಲಕೋಟೆ: ಜೀವನದಲ್ಲಿ ಜಿಗುಪ್ಸೆಗೊಂಡು ಹಾಗೂ ಕ್ರಿಕೆಟ್ ಐಪಿಎಲ್ ಬೆಟ್ಟಿಂಗ್ನಲ್ಲಿ ಸೋತ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಳಕಲ್ಲ ಪಟ್ಟಣದಲ್ಲಿ ಜರುಗಿದೆ.
ಭೀಮಶಿ ಲಕ್ಷಣ ಚಿತ್ತರಗಿ (22) ಮೃತ ಯುವಕ. ಈತ ರಾಷ್ಟ್ರೀಯ ಹೆದ್ದಾರಿ 50ರ ಪಕ್ಕದ ಗೊರಬಾಳ ರಸ್ತೆಯಲ್ಲಿ ಫ್ರೆಂಡ್ಸ್ ಗಡಗಿ ಡಾಬಾ ನಡೆಸುತ್ತಿದ್ದು, ಅಲ್ಲಿಯೇ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ. ತಂದೆ-ತಾಯಿ ತೀರಿಹೋಗಿದ್ದ ಕಾರಣ ಅನಾಥ ಪ್ರಜ್ಞೆ ಕಾಡುತ್ತಿತ್ತು. ಇದರ ಜೊತೆಗೆ ಬೆಟ್ಟಿಂಗ್ನಲ್ಲಿ ಸಾಲ ಮಾಡಿದ್ದರಿಂದ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗ್ತಿದೆ.
ಈ ಸಂಬಂಧ ಇಳಕಲ್ಲ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.