ETV Bharat / state

ರಾಜ್ಯದಲ್ಲಿ ಸೂಪರ್ ಸಿಎಂ ಆಗಿ ಯತೀಂದ್ರ ಕಾರ್ಯ ನಿರ್ವಹಿಸುತ್ತಿದ್ದಾರೆ: ಬಿ ಶ್ರೀರಾಮುಲು ಆರೋಪ - yathindra siddaramaiah

B Sriramulu : ರಾಜ್ಯದಲ್ಲಿ ಯತೀಂದ್ರ ಸೂಪರ್ ಸಿಎಂ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟೀಕರಣ ನೀಡಬೇಕು ಎಂದು ಮಾಜಿ ಸಚಿವ ಬಿ ಶ್ರೀರಾಮುಲು ಒತ್ತಾಯಿಸಿದ್ದಾರೆ.

sriramulu
ಬಿ ಶ್ರೀರಾಮುಲು ಆರೋಪ
author img

By ETV Bharat Karnataka Team

Published : Nov 18, 2023, 11:20 AM IST

ಬಿಜೆಪಿ ಪಕ್ಷದ ಕಚೇರಿಯಲ್ಲಿ ಮಾಧ್ಯಮ ಪತ್ರಿನಿಧಿಗಳೊಂದಿಗೆ ಮಾತನಾಡಿದ ಬಿ ಶ್ರೀರಾಮುಲು

ಬಾಗಲಕೋಟೆ : ರಾಜ್ಯದಲ್ಲಿ ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಅವರು ಸೂಪರ್ ಸಿಎಂ ಆಗಿದ್ದಾರೆ. ವರ್ಗಾವಣೆ ಕೆಲಸವನ್ನು ಯತೀಂದ್ರ ಅವರೇ ಮಾಡುವುದು ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ಬಿ ಶ್ರೀರಾಮುಲು ಆರೋಪಿಸಿದರು.

ಬಾಗಲಕೋಟೆ ನಗರದ ಬಿಜೆಪಿ ಪಕ್ಷದ ಕಚೇರಿಯಲ್ಲಿ ಮಾಧ್ಯಮ ಪತ್ರಿನಿಧಿಗಳೊಂದಿಗೆ ಮಾತನಾಡಿದ ಅವರು, "ಯತೀಂದ್ರ ಅವರು ಸೂಪರ್ ಸಿಎಂ ಆಗಿ ಕಾರ್ಯ ನಿರ್ವಹಿಸುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಸರ್ಕಾರದಲ್ಲಿ ಯತೀಂದ್ರ ಅವರು ಆದೇಶ ಕೊಡುವ ಮಟ್ಟಕ್ಕೆ ತಲುಪಿದ್ದಾರೆ ಎಂದರೆ ಏನರ್ಥ?, ವಿಡಿಯೋ ಸಂಭಾಷಣೆಯ ಬಗ್ಗೆ ಮುಖ್ಯಮಂತ್ರಿಗಳು ಸ್ಪಷ್ಟೀಕರಣ ಕೊಡಬೇಕು. ರಾಜ್ಯದಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯೋ ಅಥವಾ ಅವರ ಮಗಾ ಯತೀಂದ್ರನೋ ಎಂದು ಪ್ರಶ್ನಿಸಿದರು.

ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ ಅವರು ವೈಎಸ್​ಟಿ ಟ್ಯಾಕ್ಸ್ ಎಂದು ಹೇಳಿದ್ದಾರೆ, ಅದು ನಿಜಾನಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಶ್ರೀರಾಮುಲು, ಹೆಚ್ ಡಿ ಕೆ ಹೇಳಿರುವುದು ನೂರಕ್ಕೆ ನೂರು ಸತ್ಯ. ಅದು ಯತೀಂದ್ರ ಅವರ ವೈ ಎಸ್ ಟಿ ಟ್ಯಾಕ್ಸ್. ಕಾಂಗ್ರೆಸ್ ಪಕ್ಷ ಯತೀಂದ್ರ ಅವರ ಕೈಯ್ಯಲ್ಲಿದೆ ಎನ್ನುವುದು ಸ್ಪಷ್ಟವಾಗುತ್ತಿದೆ ಎಂದು ಆರೋಪಿಸಿದರು.

ಇದನ್ನೂ ಓದಿ : ಕಾಂಗ್ರೆಸ್ ಪಕ್ಷದ ತುಂಬೆಲ್ಲಾ ಇರುವುದೇ ದಲ್ಲಾಳಿಗಳು : ಡಾ. ಸಿ ಅಶ್ವತ್ಥ ನಾರಾಯಣ ವಾಗ್ದಾಳಿ

ಬಿ.ವೈ.ವಿಜಯೇಂದ್ರನನ್ನು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆ ಮಾಡಿರುವುದಕ್ಕೆ ಹಿರಿಯರಲ್ಲಿ ಉಂಟಾಗಿರುವ ಅಸಮಧಾನದ ಬಗ್ಗೆ ಮಾತನಾಡಿದ ಅವರು, ವಿ.ಸೋಮಣ್ಣ, ಯತ್ನಾಳ್​ ಸೇರಿದಂತೆ ಎಲ್ಲರೂ ನಮ್ಮ ಹಿರಿಯ ನಾಯಕರು. ಆ ರೀತಿ ಏನೇ ಇದ್ದರೂ ನಮ್ಮ ಪಾರ್ಟಿ ಅವರನ್ನು ಬಿಟ್ಟು ಕೊಡುವುದಿಲ್ಲ. ಅವರು ಕೂಡ ನಮ್ಮ ಪಕ್ಷ ಬಿಟ್ಟು ಕೊಡುವುದಿಲ್ಲ. ಸಣ್ಣಪುಟ್ಟ ಗೊಂದಲಗಳನ್ನು ಸರಿ ಪಡಿಸಿಕೊಳ್ತಾರೆ. ಬಿಜೆಪಿಯಲ್ಲಿ ಎಲ್ಲವೂ ಚೆನ್ನಾಗಿದೆ ಎಂದರು.

ಇದನ್ನೂ ಓದಿ : ರಾಮನಗರ ಜಿಲ್ಲೆ ಹೆಸರು ಬದಲಾವಣೆ ವಿರೋಧಿಸಿ ಹೆಚ್​ಡಿಕೆ ನಡೆಸುವ ಸತ್ಯಾಗ್ರಹಕ್ಕೆ ಬಿಜೆಪಿ ಬೆಂಬಲ : ಅಶ್ವತ್ಥ ನಾರಾಯಣ್

ಇನ್ನು ಆಡಳಿತದಲ್ಲಿ ಯತೀಂದ್ರ ಹಸ್ತಕ್ಷೇಪ ಇಲ್ಲ ಅನ್ನೋದೆಲ್ಲ ಸುಳ್ಳು, ಎಲ್ಲದರಲ್ಲೂ ಹಸ್ತಕ್ಷೇಪ ನಡೆಯುತ್ತಿದೆ. ಎಲ್ಲದರಲ್ಲೂ ಕ್ಯಾಂಪೇನ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ಬರ ನಿರ್ವಹಣೆಯಲ್ಲಿ ರಾಜ್ಯ ಕಾಂಗ್ರೆಸ್​ ಸರ್ಕಾರ ವಿಫಲವಾಗಿದೆ. ಲೂಟಿ ಹೊಡೆದಿರೋದಕ್ಕೆ ಐಟಿ ದಾಳಿ ಮಾಡಿದಾಗ ಸಾಕ್ಷಿ ಸಿಕ್ಕಿದೆ. ಆರ್ ಡಿ ಪಾಟೀಲ್ ಕಾಲ್ ಚೆಕ್ ಮಾಡಿದಾಗ 30 ಬಾರಿ ಕರೆ ಮಾಡಿರುವ ಲಿಸ್ಟ್​ ಸಿಕ್ಕಿದೆ. ತಂದೆಯ ಹೆಸರಲ್ಲಿ ಅಧಿಕಾರ ದುರ್ಬಳಕೆ ಆಗುತ್ತಿದೆ. ಈ ರೀತಿಯ ವ್ಯವಸ್ಥೆಗೆ ಕಣ್ಣ ಮುಂದೆಯೇ ಸಾಕ್ಷಿ ಇದೆ. ಕಾನೂನಿನ ಬಗ್ಗೆ ಎಳ್ಳಷ್ಟು ಗೌರವ ಇಲ್ಲ. ಕೂಡಲೇ ಯತೀಂದ್ರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಳೆದ ಎರಡು ದಿನಗಳ ಹಿಂದೆ ಮಾಜಿ ಡಿಸಿಎಂ ಡಾ. ಅಶ್ವತ್ಥ ನಾರಾಯಣ ಸಹ ಆಗ್ರಹಿಸಿದ್ದಾರೆ.

ಇದನ್ನೂ ಓದಿ : ಆಡಳಿತದಲ್ಲಿ ಹಸ್ತಕ್ಷೇಪ ಆರೋಪ : ಸಿಎಂ ಪುತ್ರ ಯತೀಂದ್ರ ವಿರುದ್ಧ ಕ್ರಮಕ್ಕೆ ಅಶ್ವತ್ಥ ನಾರಾಯಣ ಆಗ್ರಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.