ETV Bharat / state

ಗಮನ ಸೆಳೆದ ಬನಹಟ್ಟಿ ಜಂಗಿ ನಿಖಾಲಿ ಕುಸ್ತಿ ಪಂದ್ಯ: 50ಕ್ಕೂ ಹೆಚ್ಚು ಕುಸ್ತಿ ಪಟುಗಳು ಭಾಗಿ - ಬನಹಟ್ಟಿಯ ಶ್ರೀ ಕಾಡಸಿದ್ದೇಶ್ವರ ಜಾತ್ರೆ

ಬನಹಟ್ಟಿಯ ಶ್ರೀ ಕಾಡಸಿದ್ದೇಶ್ವರ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ದೇವಸ್ಥಾನದ ಆವರಣದಲ್ಲಿ ಯುವಜನ ಮತ್ತು ಕ್ರೀಡಾ ಇಲಾಖೆಯಿಂದ ನಿರ್ಮಾಣಗೊಂಡಿರುವ ಮೈದಾನದಲ್ಲಿ ಸ್ಥಳೀಯ ಗಣ್ಯರಾದ ವೀರಭದ್ರಪ್ಪ ಮೈದಾನದ ಪೂಜೆ ನೆರವೇರಿಸಿ ಕುಸ್ತಿ ಪಂದ್ಯಾವಳಿಗೆ ಅದ್ಧೂರಿ ಚಾಲನೆ ನೀಡಿದರು. ಸುಮಾರು 50ಕ್ಕೂ ಹೆಚ್ಚು ಜೋಡಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿ ಜನರ ಮೆಚ್ಚುಗೆಗೆ ಪಾತ್ರರಾದರು. ಇನ್ನು ಪುಟಾಣಿ ಕುಸ್ತಿ ಪಟುಗಳು ಪಂದ್ಯದಲ್ಲಿ ಭಾಗವಹಿಸಿ ನೋಡುಗರ ಗಮನ ಸೆಳೆದರು.

Wrestling competition
author img

By

Published : Sep 19, 2019, 10:30 AM IST

ಬಾಗಲಕೋಟೆ: ಉತ್ತರ ಕರ್ನಾಟಕದಲ್ಲಿ ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಮಹತ್ವವಿದೆ. ಯಾವುದೇ ಜಾತ್ರೆ, ಉತ್ಸವ ನಡೆಸಿದರೂ ಕುಸ್ತಿ, ಕಬ್ಬಡ್ಡಿ ಪಂದ್ಯಾವಳಿ ಆಯೋಜಿಸುವುದು ಸಾಮಾನ್ಯ. ಈ ಹಿನ್ನೆಲೆಯಲ್ಲಿ ಬನಹಟ್ಟಿಯ ಶ್ರೀ ಕಾಡಸಿದ್ದೇಶ್ವರ ಜಾತ್ರೆ ನಿಮಿತ್ತ ಅಂತಾರಾಷ್ಟ್ರೀಯ ಮಟ್ಟದ ಜಂಗಿ ನಿಖಾಲಿ ಕುಸ್ತಿಯನ್ನು ಹಮ್ಮಿಕೊಳ್ಳಲಾಗಿತ್ತು.

ಗಮನ ಸೆಳೆದ ಬನಹಟ್ಟಿ ಜಂಗಿ ನಿಖಾಲಿ ಕುಸ್ತಿ ಪಂದ್ಯ

ಬನಹಟ್ಟಿಯ ಶ್ರೀ ಕಾಡಸಿದ್ದೇಶ್ವರ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ದೇವಸ್ಥಾನದ ಆವರಣದಲ್ಲಿ ಯುವಜನ ಮತ್ತು ಕ್ರೀಡಾ ಇಲಾಖೆಯಿಂದ ನಿರ್ಮಾಣಗೊಂಡಿರುವ ಮೈದಾನದಲ್ಲಿ ಸ್ಥಳೀಯ ಗಣ್ಯರಾದ ವೀರಭದ್ರಪ್ಪ ಭದ್ರನವರು ಮೈದಾನದ ಪೂಜೆ ನೆರವೇರಿಸಿ ಕುಸ್ತಿ ಪಂದ್ಯಾವಳಿಗೆ ಅದ್ಧೂರಿ ಚಾಲನೆ ನೀಡಿದರು.

ಈ ಕುಸ್ತಿ ಪಂದ್ಯದಲ್ಲಿ ನಮ್ಮ ರಾಜ್ಯದಿಂದ ಮಾತ್ರವಲ್ಲದೇ ವಿವಿಧ ರಾಜ್ಯಗಳಾದ ಮಹಾರಾಷ್ಟ್ರಗಳಿಂದಲೂ ಕುಸ್ತಿ ಪಟುಗಳು ಆಗಮಿಸಿ ತಮ್ಮ ಶಕ್ತಿ ಪ್ರದರ್ಶನ ಮಾಡಿದರು. ಸುಮಾರು 50ಕ್ಕೂ ಹೆಚ್ಚು ಜೋಡಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿ ಜನರ ಮೆಚ್ಚುಗೆಗೆ ಪಾತ್ರರಾದರು. ಇನ್ನು ಪುಟಾಣಿ ಕುಸ್ತಿ ಪಟುಗಳು ಪಂದ್ಯದಲ್ಲಿ ಭಾಗವಹಿಸಿ ನೋಡುಗರ ಗಮನ ಸೆಳೆದರು.

ಹರಿದು ಬಂದ ಜನಸಾಗರ:
ಕುಸ್ತಿ ಪಂದ್ಯಾವಳಿಯನ್ನು ವೀಕ್ಷಿಸಲು ಅನೇಕ ಗ್ರಾಮ ಮತ್ತು ಪಟ್ಟಣಗಳಿಂದ ಅಪಾರ ಪ್ರಮಾಣದ ಜನಸಾಗರವೇ ಹರಿದು ಬಂದಿತ್ತು. ಬೃಹತ್ ಎರಡು ಪರದೆಗಳ ಮೇಲೆ ನೇರ ಚಿತ್ರೀಕರಣ ವೀಕ್ಷಿಸಲು ಸಾವಿರಾರು ಜನ ಜಮಾಯಿಸಿದ್ದು, ವಿಶೇಷವಾಗಿತ್ತು.

ಈ ಪಂದ್ಯಾವಳಿಯಲ್ಲಿ ಶಾಸಕ ಸಿದ್ದು ಸವದಿ, ಮಾಜಿ ಸಚಿವೆ ಉಮಾಶ್ರೀ, ಡಾ.ಪದ್ಮಜೀತ ನಾಡಗೌಡ ಪಾಟೀಲ್​​, ಕುಸ್ತಿ ಸಮಿತಿಯ ಅಧ್ಯಕ್ಷ ಚನವೀರಪ್ಪ ಹಾದಿಮನಿ, ಮಂಗಳವಾರ ಪೇಟೆ ದೈವ ಮಂಡಳಿಯ ಅಧ್ಯಕ್ಷ ಶ್ರೀಶೈಲ ಧಬಾಡಿ, ರಾಜೇಂದ್ರ ಭದ್ರನವರ, ಬೃಜ್‍ಮೋಹನ ಡಾಗಾ, ಭೀಮಶಿ ಮಗದುಮ್, ಮಲ್ಲಿಕಾರ್ಜುನ ಬಣಕಾರ, ಸಿದ್ರಾಮ ಸವದತ್ತಿ, ಶಂಕರ ಸೋರಗಾವಿ, ಧರೆಪ್ಪ ಉಳ್ಳಾಗಡ್ಡಿ, ಚಂದ್ರು ಪಟ್ಟಣ, ಧರೆಪ್ಪ ಸಾಂಗ್ಲಿಕರ್ ಸೇರಿದಂತೆ ಅನೇಕರು ಇದ್ದರು.

Intro:AnchorBody:ಬನಹಟ್ಟಿ: ಗಮನ ಸೆಳೆದ ಜಂಗಿ ನಿಕಾಲಿ ಕುಸ್ತಿಗಳು
* ಇಪ್ಪತ್ತು ಸಾವಿರಕ್ಕೂ ಹೆಚ್ಚು ಪ್ರೇಕ್ಷಕರಿಂದ ವೀಕ್ಷಣೆ
* ಕರ್ನಾಟಕ ಮತ್ತು ಮಹಾರಾಷ್ಟ್ರದ ಪೈಲ್ವಾನರು ಬಾಗಿ
* ನಾಲ್ಕು ಗಂಟೆಗಳಿಗಿಂತ ಹೆಚ್ಚು ಕಾಲ ನಡೆದ ಕುಸ್ತಿ ಪಂದ್ಯಗಳು

ಬಾಗಲಕೋಟೆ--ಉತ್ತರ ಕರ್ನಾಟಕ ದಲ್ಲಿ ಗ್ರಾಮೀಣ ಕ್ರೀಡೆಗಳಿಗೆ ಇನ್ನು ಹೆಚ್ಚು ಮಹತ್ವ ಇದೆ.ಯಾವುದೇ ಜಾತ್ರೆ,ಉತ್ಸವ ಇರಲಿ,ಅಲ್ಲಿ ಕುಸ್ತಿ,ಕಬ್ಬಡ್ಡಿ ಪಂದ್ಯಾವಳಿ ಆಯೋಜಿಸುವದು ಸಾಮಾನ್ಯ.ಈ ಮೂಲಕ ಗ್ರಾಮೀಣ ಕ್ರೀಡೆಯನ್ನು ಬೆಳೆಸಿಕೊಂಡು ಬರಲಾಗುತ್ತದೆ.ಈ ಹಿನ್ನಲೆಯಲ್ಲಿ ಬನಹಟ್ಟಿಯ ಶ್ರೀ ಕಾಡಸಿದ್ಧೇಶ್ವರ ಜಾತ್ರೆ ನಿಮಿತ್ತ ಅಂತರಾಷ್ಟ್ರೀಯ ಮಟ್ಟದ ಜಂಗಿ ನಿಕಾಲಿ ಕುಸ್ತಿಗಳು ಹಮ್ಮಿಕೊಳಲಾಗಿತ್ತು. ಸ್ಥಳೀಯ ಕಾಡಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಯುವಜನ ಮತ್ತು ಕ್ರೀಡ ಇಲಾಖೆಯಿಂದ ನಿರ್ಮಾಣಗೊಂಡ ಮೈದಾನದಲ್ಲಿ ಅನೇಕ ಜಗಜಟ್ಟಿಗಳ ನಡುವೆ ಅದ್ಧೂರಿ ಜರುಗಿದವು, ಕುಸ್ತಿ ವೀಕ್ಷಿಸಲು ಅನೇಕ ಗ್ರಾಮ ಮತ್ತು ಪಟ್ಟಣಗಳಿಂದ ಅಪಾರ ಪ್ರಮಾಣದ ಜನಸಾಗರವೇ ಹರಿದು ಬಂದಿತ್ತು.
         ಮಧ್ಯಾಹ್ನ ಮೂರು ಗಂಟೆಗೆ ಸ್ಥಳೀಯ ಗಣ್ಯರಾದ ವೀರಭದ್ರಪ್ಪ ಭದ್ರನವರ ಅವರು ಮೈದಾನದ ಪೂಜೆಯನ್ನು ನೆರವೇರಿಸಿದ ನಂತರ ಕುಸ್ತಿ ಪಂದ್ಯಗಳು ಆರಂಭಗೊಂಡವು.
         ಏ ಒಗಿಯೋ ಬಿಡಬ್ಯಾಡ, ತಪ್ಪಿದ್ಯೋ ತಮ್ಯಾ, ಏ ಮ್ಯಾಲ್ ಎತ್ತ, ಇನ್ನೂ ಕುಸ್ತಿ ಆಗಿಲ್ಲ ಇವು ಸ್ಥಳೀಯ ಕಾಡಸಿದ್ಧೇಶ್ವರ ದೇವರ ಜಾತ್ರೆಯ ನಿಮಿತ್ತವಾಗಿ ಹಮ್ಮಿಕೊಳ್ಳಲಾದ ಕುಸ್ತಿ ಪಂದ್ಯಾವಳಿಯಲ್ಲಿ ಪ್ರೇಕ್ಷಕರ ವರ್ಗದಿಂದ ಕೇಳಿ ಬಂದ ಮಾತುಗಳು. ಇಲ್ಲಿ ಪ್ರೇಕ್ಷಕರೇ ನಿಜವಾದ ನಿರ್ಣಾಯಕರು.
ನಟ ಸುದೀಪ ಅಭಿನಯದ ಪೈಲ್ವಾನ್ ಚಿತ್ರ ಬಂದ ಬಳಿಕ ಈಗ ಭಾಗದ ಜನತೆಗೆ ,ಕುಸ್ತಿ ಕ್ರೀಡೆ ಮೇಲೆ ಮತ್ತಷ್ಟು ಉತ್ಸಾಹ ಮೂಡಿಸಿದೆ.
         ರಾಜ್ಯದ ವಿವಿಧ ಪ್ರದೇಶಗಳಿಂದ ಅಲ್ಲದೆ ಮಹಾರಾಷ್ಟ್ರ ದಿಂದಲೂ ಕುಸ್ತಿ ಪೈಲಾನ್ ಆಗಮಿಸಿ,ತಮ್ಮ ಶಕ್ತಿಯನ್ನು ಪ್ರದರ್ಶನ ನಡೆಸುವ ಮೂಲಕ ಮೆಚ್ಚುಗೆ ಗಳಿಸಿದರು.
ಅಂದಾಜು 50ಕ್ಕೂ ಹೆಚ್ಚು ಜೋಡಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಪುಟಾಣಿ ಕುಸ್ತಿ ಪೈಲ್ವಾನರು ಭಾಗವಹಿಸಿ ಗಮನ ಸೆಳೆದರು.
ಹರಿದು ಬಂದ ಜನಸಾಗರ: ಮೈದಾನ ತುಂಬಿ ತುಳುಕುವದಲ್ಲದೆ ಬೃಹತ್ ಎರಡು ಪರದೆಗಳ ಮೇಲೆ ನೇರ ಚಿತ್ರೀಕರಣವನ್ನು ವೀಕ್ಷಿಸಲು ಸಾವಿರಾರು ಜನ ಜಮಾಯಿಸಿದ್ದು ವಿಶೇಷವಾಗಿತ್ತು.
         ಈ ಸಂದರ್ಭದಲ್ಲಿ ಶಾಸಕ ಸಿದ್ದು ಸವದಿ, ಮಾಜಿ ಸಚಿವೆ ಉಮಾಶ್ರೀ, ಡಾ.ಪದ್ಮಜೀತ ನಾಡಗೌಡ ಪಾಟೀಲ, ಕುಸ್ತಿ ಸಮಿತಿಯ ಅಧ್ಯಕ್ಷ ಚನವೀರಪ್ಪ ಹಾದಿಮನಿ, ಮಂಗಳವಾರ ಪೇಟೆ ದೈವ ಮಂಡಳಿಯ ಅಧ್ಯಕ್ಷ ಶ್ರೀಶೈಲ ಧಬಾಡಿ, ರಾಜೇಂದ್ರ ಭದ್ರನವರ, ಬೃಜ್‍ಮೋಹನ ಡಾಗಾ, ಭೀಮಶಿ ಮಗದುಮ್, ಮಲ್ಲಿಕಾರ್ಜುನ ಬಾಣಕಾರ, ಸಿದ್ರಾಮ ಸವದತ್ತಿ, ಶಂಕರ ಸೋರಗಾವಿ, ಧರೆಪ್ಪ ಉಳ್ಳಾಗಡ್ಡಿ, ಚಂದ್ರು ಪಟ್ಟಣ, ಧರೆಪ್ಪ ಸಾಂಗ್ಲಿಕರ್ ಸೇರಿದಂತೆ ಅನೇಕರು ಇದ್ದರು.
         ದಾವಲಸಬ್ ಆಸಂಗಿ, ಕಾಡಪ್ಪ ಜಿಡ್ಡಿಮನಿ, ಧರೆಪ್ಪ ಪಾಟೀಲ, ಮಲ್ಲಪ್ಪ ಗೌಡಪ್ಪನವರ, ರಮೇಶ ಜಿಡ್ಡಿಮನಿ ಮತ್ತು ಕಾಡಪ್ಪ ಮಹಿಷವಾಡಗಿ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದರು.Conclusion:ಈ ಟಿವಿ,ಭಾರತ,ಬಾಗಲಕೋಟೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.