ETV Bharat / state

ಹಿಪ್ಪರಗಿ ಬ್ಯಾರೇಜ್​​ನಿಂದ ಚಿಕ್ಕಪಡಸಲಗಿ ಬ್ಯಾರೇಜ್​​​​ಗೆ ನೀರು ಬಿಡುಗಡೆ - ಹಿಪ್ಪರಗಿ ಬ್ಯಾರೇಜ್​​ನಿಂದ ಚಿಕ್ಕಪಡಸಲಗಿ ಬ್ಯಾರೇಜ್​​​​ಗೆ ನೀರು ಬಿಡುಗಡೆ

ಕೃಷ್ಣ ನದಿಯಿಂದ ಹಿಪ್ಪರಗಿ ಜಲಾಶಯಕ್ಕೆ ನೀರು ಹರಿಯಬಿಟ್ಟಿರುವ ಪರಿಣಾಮ, ಹಿಪ್ಪರಗಿ ಬ್ಯಾರೇಜಿಗೆ ಶಾಸಕ ಆನಂದ‌ ನ್ಯಾಮಗೌಡ ನೇತೃತ್ವದಲ್ಲಿ ರೈತ ಮುಖಂಡರೊಂದಿಗೆ ಪೂಜೆ ಸಲ್ಲಿಸುವ ಮೂಲಕ ಚಿಕ್ಕಪಡಸಲಗಿ ಬ್ಯಾರೇಜ್​​​ಗೆ ನೀರನ್ನು ಹರಿಬಿಡಲಾಯಿತು.

Water supply
ನೀರು ಬಿಡುಗಡೆ
author img

By

Published : May 2, 2020, 12:08 AM IST

ಬಾಗಲಕೋಟೆ: ಕೆಲವು ದಿನಗಳಿಂದ ಜಮಖಂಡಿ ತಾಲೂಕಿನ ಜನರು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದರು. ಆದರೆ ಇಂದು ಹಿಪ್ಪರಗಿ ಬ್ಯಾರೇಜ್​​ನಿಂದ ಚಿಕ್ಕಪಡಸಲಗಿ ಬ್ಯಾರೇಜ್​​​​ಗೆ (ಶ್ರಮಬಿಂದು ಸಾಗರ) 0.3 ಟಿಎಂಸಿ ನೀರನ್ನು ಸರ್ಕಾರ ಬಿಡುಗಡೆ ಮಾಡಿದೆ. ಈ ಕಾರಣ ಜಮಖಂಡಿ ಕ್ಷೇತ್ರದ ಶಾಸಕ ಆನಂದ ನ್ಯಾಮಗೌಡ ಸರ್ಕಾರಕ್ಕೆ ಧನ್ಯವಾದ ಹೇಳಿದ್ದಾರೆ.

ಕೃಷ್ಣ ನದಿಯಿಂದ ಹಿಪ್ಪರಗಿ ಜಲಾಶಯಕ್ಕೆ ನೀರು ಹರಿಯಬಿಟ್ಟಿರುವ ಪರಿಣಾಮ, ಹಿಪ್ಪರಗಿ ಬ್ಯಾರೇಜಿಗೆ ಶಾಸಕ ಆನಂದ‌ ನ್ಯಾಮಗೌಡ ನೇತೃತ್ವದಲ್ಲಿ ರೈತ ಮುಖಂಡರೊಂದಿಗೆ ಪೂಜೆ ಸಲ್ಲಿಸುವ ಮೂಲಕ ಚಿಕ್ಕಪಡಸಲಗಿ ಬ್ಯಾರೇಜ್​​​ಗೆ ನೀರನ್ನು ಹರಿಬಿಡಲಾಯಿತು. ಬೇಸಿಗೆ ವೇಳೆ ಜಮಖಂಡಿ ತಾಲೂಕಿನ 32 ಗ್ರಾಮಗಳಿಗೆ ಕುಡಿಯುವ ನೀರಿಗೆ ಅನುಕೂಲವಾಗಲಿದೆ. ಸಾವಿರಾರು ಎಕರೆ ಪ್ರದೇಶ ಜಮೀನುಗಳಿಗೆ ಅಂತರ್ಜಲ ಮಟ್ಟ ಹೆಚ್ಚಳ ಆಗಲಿದೆ. ಈ ಹಿನ್ನೆಲೆಯಲ್ಲಿ ನೀರು‌ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಒತ್ತಾಯ ಮಾಡುವ ಮೂಲಕ ಇತ್ತೀಚೆಗೆ ಹೋರಾಟ ಕೂಡಾ ಮಾಡಲಾಗಿತ್ತು.ಆದರೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಭರವಸೆ ನೀಡಿದ್ದರಿಂದ ಹೋರಾಟದಿಂದ ಹಿಂದೆ ಸರಿಯಲಾಗಿತ್ತು. ಭರವಸೆ ನೀಡಿದಂತೆ ಈಗ ಡಿಸಿಎಂ ಅವರು ನೀರು ಬಿಡಿಸಿರುವುದಕ್ಕೆ ಜಮಖಂಡಿ ತಾಲೂಕಿನ ಜನತೆಗೆ ಹಾಗೂ ರೈತಾಪಿ ವರ್ಗದವರಿಗೆ ಅನುಕೂಲವಾಗಲಿದೆ. ತಮ್ಮ ಸಮಸ್ಯೆಗಳಿಗೆ ಸ್ಪಂದಿಸಿದ ಸರ್ಕಾರಕ್ಕೆ ವಿಶೇಷವಾಗಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ ಶಾಸಕ ನ್ಯಾಮಗೌಡ ಧನ್ಯವಾದ ಅರ್ಪಿಸಿದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.