ETV Bharat / state

ಬಾಗಲಕೋಟೆಯಲ್ಲಿ ಚಿತ್ರಕಲೆಯ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮ - painting

ಮತದಾರರಲ್ಲಿ ಚಿತ್ರಕಲೆಯ ಮೂಲಕ ಮತದಾನದ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಜಾಗೃತಿ ಸಂದೇಶ ಕಾರ್ಯಕ್ರಮ
author img

By

Published : Mar 17, 2019, 9:17 AM IST

ಬಾಗಲಕೋಟೆ : ಮತದಾರರಲ್ಲಿ ಮತದಾನ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನವನಗರದ ಕಲಾಭವನದಲ್ಲಿ ಚಿತ್ರಕಲಾ ಶಿಕ್ಷಕರಿಗೆ ಚಿತ್ರಕಲಾ ಸ್ಪರ್ಧೆ ನಡೆಸಲಾಯಿತು.

ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್​ ಸಹಯೋಗದಲ್ಲಿ ಜಿಲ್ಲಾ ಸ್ವೀಪ್ ಯೋಜನೆಯಡಿ ಹಮ್ಮಿಕೊಂಡ ಚಿತ್ರಕಲಾ ಸ್ಪರ್ಧೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಮಾತನಾಡಿ ಕಲೆ ಎಂಬುದು ದೈವದತ್ತವಾಗಿ ಬಂದಿರುವುದರಿಂದ ಇದನ್ನು ಗಾಂಧರ್ವ ವಿದ್ಯೆಯೆಂದು ಕರೆಯಲಾಗುತ್ತದೆ. ಒಬ್ಬ ಕಲಾವಿದನ ಕೈಯಲ್ಲಿ ಬಣ್ಣ, ಕುಂಚದಿಂದ ಅರ್ಥಪೂರ್ಣವಾದ ಹಾಗೂ ಮತದಾನದ ಜಾಗೃತಿ ಸಂದೇಶ ಮೂಡಿಸುವ ಚಿತ್ರಗಳು ಹೊರಹೊಮ್ಮಿದ್ದು, ಕಲಾವಿದರ ಅದ್ಬುತ ಕಲೆ ಅನಾವರಣಗೊಂಡಿದೆ. ಕಳೆದ ಬಾರಿ ಶೇ.68 ರಷ್ಟು ಮತದಾನವಾಗಿದ್ದು, ಆದರೆ ಈ ಬಾರಿ ನೂರಕ್ಕೆ ನೂರರಷ್ಟು ಮತದಾನವಾಗಬೇಕೆಂಬ ಗುರಿ ನಮ್ಮದು ಎಂದರು.

ಜಿ.ಪಂ ಸಿಇಓ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರಾದ ಗಂಗೂಬಾಯಿ ಮಾನಕರ ಮಾತನಾಡಿ, ಚಿತ್ರಕಲೆಯ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮತದಾನದ ಜಾಗೃತಿ ಮೂಡಿಸಲು ಪ್ರಚಾರದ ಜೊತೆಗೆ ಚಿತ್ರಕಲೆ ಕೂಡಾ ಉತ್ತಮ ಸಾಧನವಾಗಿದೆ. ಚಿತ್ರಕಲಾ ಶಿಕ್ಷಕರು ಮತದಾನ ಜಾಗೃತಿಯ ಸಂದೇಶಗಳುಳ್ಳ ಚಿತ್ರವನ್ನು ಬಿಡಿಸಿದ್ದು, ಚಿತ್ರಕಲಾ ಶಿಕ್ಷಕರ ಕುಂಚದಿಂದ ಹೊರ ಬಂದ ಸಂದೇಶಗಳನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ರವಾನಿಸಲಾಗುವುದು. ಅಲ್ಲದೇ ಚಿತ್ರಗಳನ್ನು ಒಂದು ಅಲ್ಬಂಬ್​ ಮಾಡಿಡಲಾಗುವುದು ಎಂದರು.

ಚಿತ್ರಕಲಾ ಶಿಕ್ಷಕರಾದ ತಿರುಪತಿ ಚಲವಾದಿ ಹಾಗೂ ಸಿ.ಜೆ.ಜತ್ತಿ ಮಾತನಾಡಿ, ಚಿತ್ರಕಲಾ ಶಿಕ್ಷಕರಿಗೆ ಉನ್ನತ ಅಧಿಕಾರಿಗಳು ಇತ್ತೀಚಿನ ದಿನಗಳಲ್ಲಿ ಕಡೆಗಣಿಸಿದ್ದನ್ನು ನೋಡಿದರೆ ಬಾಗಲಕೋಟೆ ಜಿಲ್ಲೆಯ ಜಿಲ್ಲಾಧಿಕಾರಿಗಳು ಚಿತ್ರಕಲಾ ಶಿಕ್ಷಕರ ಮೇಲೆ ಇಟ್ಟ ಅಭಿಮಾನಕ್ಕೆ ಚಿರ ಋಣಿಯಾಗಿದ್ದೇನೆ. ಕೇವಲ ಕಲಾ ಪ್ರದರ್ಶನಗಳಲ್ಲಿ ಭಾಗವಹಿಸುತ್ತಿರುವ ನಮ್ಮ ಕಲೆಗೆ ಈ ಬಾರಿ ಜಿಲ್ಲಾಡಳಿತದಿಂದ ಮತದಾನ ಜಾಗೃತಿ ಮೂಡಿಸುವಂತಹ ಜವಾಬ್ದಾರಿ ಕಾರ್ಯ ಚಿತ್ರದ ಮೂಲಕ ಜಾಗೃತಗೊಳಿಸಲು ಚಿತ್ರಕಲಾ ಶಿಕ್ಷಕರನ್ನುಬಳಸಿಕೊಂಡಿದ್ದು ಸಂತಸ ತಂದಿದೆ ಎಂದರು.

Intro:Body:

1 R-Kn-Bgk-2-160319-Art-Vote-Bagalkote-Anand-Av-1.JPG  

close

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.