ETV Bharat / state

ಉದ್ಯೋಗಖಾತ್ರಿಯಲ್ಲಿ ರೈತರ ಜಮೀನಿನಲ್ಲೂ ಕೆಲಸ ಮಾಡಿಸಿಕೊಳ್ಳಲು ಸಾಧ್ಯ : ಬಾಗಲಕೋಟೆ ಜಿ.ಪಂ. ಸಿಇಒ

ಬಾಗಲಕೋಟೆ ಜಿಲ್ಲೆಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಗಂಗೂಬಾಯಿ ಮಾನಕರ್ ರೈತರ ಜಮೀನುಗಳಿಗೆ ಭೇಟಿ ನೀಡಿ ಉದ್ಯೋಗ ಖಾತ್ರಿ ಯೋಜನೆಯ ವಿವಿಧ ಪ್ರಯೋಜನಗಳ ಕುರಿತು ಮನವರಿಕೆ ಮೂಡಿಸುವ ಕಾರ್ಯ ನಡೆಸಿದ್ದಾರೆ.

author img

By

Published : Feb 17, 2020, 7:54 AM IST

visit-to-the-farmers-land-from-the-chief-operating-officer-of-the-district-panchayat-in-bhagalkote
ಶ್ರೀಮತಿ ಗಂಗೂಬಾಯಿ ಮಾನಕರ್

ಬಾಗಲಕೋಟೆ: ಉದ್ಯೋಗ ಖಾತ್ರಿ ಯೋಜನೆ ಅಡಿ ಕೇವಲ ಗ್ರಾಮದಲ್ಲಿ ರಸ್ತೆ, ಕೆರೆ, ಸೇತುವೆ ನಿರ್ಮಾಣ ಮಾಡುವುದಕ್ಕೆ ಅಷ್ಟೇ ಸಿಮೀತವಲ್ಲ. ರೈತರು ತಮ್ಮ ಜಮೀನಿನಲ್ಲಿ ಕೆಲಸ ಮಾಡುವುದಕ್ಕೂ ಬಳಕೆ ಮಾಡಿಕೊಳ್ಳಬಹುದು. ಈ ಬಗ್ಗೆ ಜಿಲ್ಲೆಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಗಂಗೂಬಾಯಿ ಮಾನಕರ್ ರೈತರ ಜಮೀನುಗಳಿಗೆ ಭೇಟಿ ನೀಡಿ, ಜಾಗೃತಿ ಮೂಡಿಸುವ ಕಾರ್ಯ ನಡೆಸಿದ್ದಾರೆ.

ಶ್ರೀಮತಿ ಗಂಗೂಬಾಯಿ ಮಾನಕರ್

ತೋಟಗಾರಿಕೆ ಬೆಳೆಗಳನ್ನು ಬೆಳೆಸುವ ಜೊತೆಗೆ ಹೂವು ಬಿಡುವ ಸಸಿಗಳನ್ನು ರೈತರು ತಮ್ಮ ಜಮೀನಿನಲ್ಲಿ ನಡೆಸುವುದಕ್ಕೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ವೇತನ ನೀಡಲಾಗುವುದು. ಇದು ಅಲ್ಲದೆ ತೋಟಗಾರಿಕೆ ಬೆಳೆಗಳಾದ ದಾಳಿಂಬೆ, ಪೇರಲೆ, ಲಿಂಬು ಸೇರಿದಂತೆ ಇತರ ಹಣ್ಣುಗಳ ಸಸಿಗಳನ್ನು ನಡೆಸುವುದಕ್ಕೆ ದಿನಗೂಲಿಯಂತೆ ಉದ್ಯೋಗ ಖಾತ್ರಿ ಯೋಜನೆ ಉಪಯೋಗ ತೆಗೆದುಕೊಳ್ಳಬಹುದು ಎಂಬುದನ್ನು ತೋರಿಸಿಕೊಟ್ಟರು.

ಈಗಾಗಲೇ ಉದ್ಯೋಗ ಖಾತ್ರಿಯ ಯೋಜನೆಯಲ್ಲಿ ಉಪಯೋಗ ಪಡೆದುಕೊಂಡಿರುವ ಕೆಲ ರೈತರ ಜಮೀನುಗಳಿಗೆ ಭೇಟಿ ‌ನೀಡಿ, ಪರಿಶೀಲನೆ ನಡೆಸಿದ ಅವರು, ರೈತರೊಂದಿಗೆ ಸಂವಾದ ನಡೆಸಿ ಮಾಹಿತಿ‌ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.