ಬಾಗಲಕೋಟೆ: ಮೋಟಾರ್ ವಾಹನ ಕಾಯ್ದೆ ಪ್ರಕಾರ ವಾಹನಗಳ ನಂಬರ್ ಪ್ಲೇಟ್ ಮೇಲೆ ಯಾವುದೇ ಅಕ್ಷರಗಳನ್ನು ಬರೆಯುವಂತಿಲ್ಲ.ಆದರೆ ಈ ಕಾನೂನು ಜಿಲ್ಲೆಯ ತೇರದಾಳ ಮತಕ್ಷೇತ್ರ ಶಾಸಕರಾದ ಸಿದ್ದು ಸವದಿಯವರಿಗೆ ಅನ್ವಯವಾಗುತ್ತದೆಯೋ ಇಲ್ಲವೋ ಎಂಬ ಚರ್ಚೆ ಆರಂಭವಾಗಿದೆ.
ಕಾರಣ ಶಾಸಕ ಸಿದ್ದು ಸವದಿ ತಮ್ಮ ವಾಹನದ ನಂಬರ್ ಪ್ಲೇಟ್ ಮೇಲೆ ವಿಧಾನ ಸಭೆಯ ಸದಸ್ಯರು ಹಾಗೂ ಶಾಸಕರು ಎಂದು ಬರೆಸಿಕೊಂಡಿದ್ದಾರೆ. ಇನ್ನು ಎಲ್ಲೆಡೆ ಈ ರೀತಿಯಾಗಿ ಕಾನೂನು ಮಿರಿದ್ರೆ ಅಂತವರಿಗೆ ದಂಡ ಹಾಕಿ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಆದರೆ ಶಾಸಕರು ಈ ರೀತಿಯಲ್ಲಿ ಹಾಕುವುದು ಸರಿಯೇ ಅಥವಾ ಶಾಸಕರಿಗೆ ಮೋಟಾರು ಕಾಯ್ದೆಯಲ್ಲಿ ಹೆಸರು ಹಾಕಲು ಅವಕಾಶವಿದೆಯೇ ಎಂಬುದನ್ನು ಶಾಸಕರು ಸ್ಪಷ್ಟ ಪಡಿಸಬೇಕಾಗಿದೆ.
ಇನ್ನು ದೇಶದಲ್ಲಿ ಎಲ್ಲರಿಗೂ ಒಂದೆ ಕಾನೂನು.ಆದರೆ ಶಾಸಕರು ಈ ರೀತಿ ನಡೆದುಕೊಳ್ಳುತ್ತಿರುವುದು ಎಷ್ಟು ಸರಿ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.