ETV Bharat / state

ಬೈಕ್​ ಮೇಲೆ ನಾಲ್ವರ ಪಯಣ;  ಓವರ್​ ಟೇಕ್​ ಮಾಡಲು ಹೋಗಿ ಇಬ್ಬರ ದುರ್ಮರಣ - ಬೈಕ್, ಟ್ರ್ಯಾಕ್ಟರ್ ಮಧ್ಯೆ ಅಪಘಾತ

ಓವರ್​ ಟೇಕ್​ ಮಾಡಲು ಹೋಗಿ ಟ್ಯ್ರಾಕ್ಟರ್​ ಗಾಲಿಗೆ ಸಿಲುಕಿ ಬೈಕ್​ನಲ್ಲಿ ಚಲಿಸುತ್ತಿದ್ದ ನಾಲ್ವರಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಬೀಳಗಿ ತಾಲೂಕಿನ ಕಾತರಕಿ ಸೇತುವೆ ಬಳಿ ನಡೆದಿದೆ.

ಬೈಕ್, ಟ್ರ್ಯಾಕ್ಟರ್ ಮಧ್ಯೆ ಅಪಘಾತ
accident in Bagalkot
author img

By

Published : Dec 9, 2019, 1:09 PM IST

ಬಾಗಲಕೋಟೆ : ಓವರ್​ ಟೇಕ್​ ಮಾಡಲು ಹೋಗಿ ಟ್ಯ್ರಾಕ್ಟರ್​ ಗಾಲಿಗೆ ಸಿಲುಕಿ ಬೈಕ್​ನಲ್ಲಿ ಚಲಿಸುತ್ತಿದ್ದ ನಾಲ್ವರಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಬೀಳಗಿ ತಾಲೂಕಿನ ಕಾತರಕಿ ಸೇತುವೆ ಬಳಿ ನಡೆದಿದೆ.

ಬೀಳಗಿ ಬಳಿ ಬೈಕ್, ಟ್ರ್ಯಾಕ್ಟರ್ ಮಧ್ಯೆ ಅಪಘಾತದಲ್ಲಿ ಇಬ್ಬರ ದುರ್ಮರಣ

ಹನಮಪ್ಪ ಲಕ್ಷ್ಮಪ್ಪ ನಾಯ್ಕರ(65), ರುದ್ರವ್ವ ಹನಮಪ್ಪ ನಾಯ್ಕರ್ (55) ಮೃತವ್ಯಕ್ತಿಗಳು. ಬೈಕ್​ನಲ್ಲಿ ಹೋಗುತ್ತಿದ್ದ ನಾಲ್ವರು ಟ್ಯ್ರಾಕ್ಟರ್​ನ್ನು ಓವರ್ ಟೇಕ್ ಮಾಡಿ ಹಿಂದಕ್ಕೆ ಹಾಕುವ ಸಮಯದಲ್ಲಿ ಎದುರಿನಿಂದ ಟಂ ಟಂ ವಾಹನ ಬಂದಿದೆ. ಪರಿಣಾಮ ಆಯಾ ತಪ್ಪಿ ಟ್ಯ್ರಾಕ್ಟರ್​ ಗಾಲಿಗೆ ಸಿಲುಕಿ ಇಬ್ಬರು ವ್ಯಕ್ತಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇನ್ನು ಬೈಕ್​ನಲ್ಲಿದ್ದ ಲಕ್ಷ್ಮಪ್ಪ ಚಿಗರಿ ಜಾನಮಟ್ಟಿ, ಚಂದ್ರವ್ವ ಭೀಮಪ್ಪ ನಾಯ್ಕರ್ ಎಂಬುವವರು ಗಂಭೀರ ಗಾಯಗೊಂಡಿದ್ದು ಇವರನ್ನು ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಈ ಸಂಬಂಧ ಬೀಳಗಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗಿದೆ.

Intro:AnchorBody:ಬಾಗಲಕೋಟೆ--ಬೈಕ್ ಮೇಲೆ ನಾಲ್ವರು ಚಲಿಸುತ್ತಿದ್ದಾಗ ಓವರ್ ಟೆಕ್ ಮಾಡುವ ಸಮಯದಲ್ಲಿ ಆಯಾ ತಪ್ಪಿ ಟ್ಯಾಕ್ಟರ್ ಗಾಲಿ ಸಿಲುಕಿ ಇಬ್ಬರು ಮೃತ ಪಟ್ಟು,ಇಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಜಿಲ್ಲೆಯ ಕಲಾದಗಿ ಗ್ರಾಮದ ಸಮೀಪ ನಡೆದಿದೆ.
ಹಿರೇಶೆಲ್ಲಿಕೇರಿಯಿಂದ ಜಾನಮಟ್ಟಿಗೆ ಹೋಗುವ ಸಮಯದಲ್ಲಿ ಈ ದುರ್ಘಟನೆ ನಡೆದಿದ್ದು,ಬೈಕನಲ್ಲಿ ನಾಲ್ಕು ಜನರು ಸವಾರಿ ಮಾಡುತ್ತಿದ್ದರು ಎನ್ನಲಾಗಿದೆ.ಕಾತರಕಿ ಸೇತುವೆ ಬಳಿ ಈ ಘಟನೆ ನಡೆದಿದ್ದು,ಬೈಕ್ ದ ಮೂಲಕ ಟ್ಯಾಕ್ಟರ ವನ್ನು ಓವರ್ ಟೆಕ್ ಮಾಡಿ ಹಿಂದಕ್ಕೆ ಹಾಕುವ ಸಮಯದಲ್ಲಿ ಎದುರಿಗೆ ಟಂ ಟಂ ವಾಹನ ಬಂದಿದೆ.ಆಗ ತಪ್ಪಿಸಲು ಹೋಗಿ ಟ್ಯಾಕ್ಟರ್ ಗಾಲಿಯ ಒಳಗೆ ಸಿಕ್ಕಿ ಮೃತ ಪಟ್ಟಿದ್ದಾರೆ.
ಮೃತ ಪಟ್ಟವರಲ್ಲಿ
ಹನಮಪ್ಪ ಲಕ್ಷ್ಮಪ್ಪ ನಾಯ್ಕರ(೬೫)
ರುದ್ರವ್ವ ಹನಮಪ್ಪ ನಾಯ್ಕರ್ (೫೫) ಎಂಬುವವರು ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ.
ಯಲ್ಲಪ್ಪ ಜನನ ಲಕ್ಷ್ಮಪ್ಪ ಚಿಗರಿ(೨೫) ಜಾನಮಟ್ಟಿ
ಚಂದ್ರವ್ವ ಭೀಮಪ್ಪ ನಾಯ್ಕರ್(೧೩) ಎಂಬುವವರು ಗಂಭೀರ ಗಾಯಗೊಂಡಿದ್ದು,ಜಿಲ್ಲಾ ಆಸ್ಪತ್ರೆ ಗೆ ಚಿಕಿತ್ಸೆ ರವಾನಿಸಲಾಗಿದೆ.ಎಲ್ಲರೂ ಹಿರೇ ಶೇಲಿಕೇರಿ ಗ್ರಾಮದ ನಿವಾಸಿ ಆಗಿದ್ದಾರೆ.ಬೀಳಗಿ ಪೋಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ತನಿಖೆ ನಡೆಸಲಾಗಿದೆ..Conclusion:ಈ ಟಿ ವಿ,ಭಾರತ,ಬಾಗಲಕೋಟೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.