ETV Bharat / state

ಬಾಗಲಕೋಟೆ: 'ಮಾವ' ಮಾರುತ್ತಿದ್ದ ಇಬ್ಬರ ಬಂಧನ - Mava

ತಂಬಾಕಿನಿಂದ ತಯಾರಿಸುವ ಮಾವ ಎಂಬ ಪದಾರ್ಥವನ್ನು ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ.

Tobacco dealers arrest
Tobacco dealers arrest
author img

By

Published : Jun 19, 2020, 2:51 PM IST

ಬಾಗಲಕೋಟೆ: ಅಮಲು ಬರುವ ತಂಬಾಕಿನಿಂದ ತಯಾರಿಸುವ ಮಾವ ಎಂಬ ಪದಾರ್ಥವನ್ನು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ, ಅವರಿಂದ ಅಡಕೆ, ಸುಣ್ಣ ಹಾಗೂ ತಂಬಾಕು ಪದಾರ್ಥಗಳನ್ನು ವಶಕ್ಕೆ ಪಡೆದುಕೊಂಡಿರುವ ಘಟನೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಹೊಸುರು ಗ್ರಾಮದಲ್ಲಿ ನಡೆದಿದೆ.

ಅಜರುದ್ದಿನ್​ ಗೌಸಮೋದಿನ ಇನಾಂದಾರ (20) ಹಾಗೂ ಫಿರೋಜ್ ದಾದಾಪೀರ ಕುಳ್ಳೋಳ್ಳಿ (38) ಬಂಧಿತರು. ಆರೋಪಿಗಳಿಂದ ಮಾವ ಪ್ಯಾಕೇಟ್​, 500 ರೂ. ಮೌಲ್ಯದ 12 ಕೆಜಿ ಒಣ ಮಾವ, 13,500 ರೂ. ಮೌಲ್ಯದ 55 ಕೆಜಿ ತಂಬಾಕು, 8000 ಮೌಲ್ಯದ 50 ಕೆಜಿ ಕಚ್ಚಾ ಅಡಕೆ, 190 ರೂ. ಮೌಲ್ಯದ 19 ಕೆಜಿ ಸುಣ್ಣ ಹಾಗೂ 30,000 ರೂ. ಮೌಲ್ಯದ 2 ಅಡಕೆ ಒಡೆಯುವ ಯಂತ್ರ ಸೇರಿ ಒಟ್ಟು 52,580 ಮೌಲ್ಯದ ಸಾಮಗ್ರಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಎಸ್​ಪಿ ಲೋಕೇಶ ಜಗಲಸಾರ ತಿಳಿಸಿದ್ದಾರೆ.

ಡಿಸಿಆರ್​ಬಿ ಹಾಗೂ ಕ್ರೈಂ ಬ್ರಾಂಚ್​ ಸಿಬ್ಬಂದಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ರಬಕವಿ-ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.