ETV Bharat / state

ಬಾಗಲಕೋಟೆಯಲ್ಲಿ ಮೂರು ಕೊರೊನಾ ಪ್ರಕರಣ ಪತ್ತೆ: ಇಲಕಲ್​ ಯುವತಿ ಗುಣಮುಖ - ಕೊರೊನಾ ಸುದ್ದಿ

ಬಾಗಲಕೋಟೆಯಲ್ಲಿ ನಿನ್ನೆ ಮತ್ತೆ ಮೂರು ಕೊರೊನಾ ಪಾಸಿಟಿವ್​ ಪ್ರಕರಣಗಳು ವರದಿಯಾಗಿದ್ದು,ಇಲಕಲ್​ ನಗರದ 18 ವರ್ಷದ ಯುವತಿ ರೋಗಿ-5759 ಕೋವಿಡ್‍ನಿಂದ ಗುಣಮುಖರಾಗಿ ಜಿಲ್ಲಾಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಜಿಲ್ಲಾಸ್ಪತ್ರೆಯಿಂದ ಬಿಡುಗಡೆ
ಜಿಲ್ಲಾಸ್ಪತ್ರೆಯಿಂದ ಬಿಡುಗಡೆ
author img

By

Published : Jun 20, 2020, 12:25 AM IST

Updated : Jun 20, 2020, 8:31 AM IST

ಬಾಗಲಕೋಟೆ: ಜಿಲ್ಲೆಯಲ್ಲಿ‌ ಇಂದು ಮತ್ತೆ ಮೂವರಲ್ಲಿ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 115ಕ್ಕೆ ಏರಿಕೆಯಾಗಿದೆ. ಅಲ್ಲದೇ ಓರ್ವ ಯುವತಿ ಸೋಂಕಿನಿಂದ ಗುಣಮುಖರಾಗಿದ್ದು, ಶುಕ್ರವಾರ ಜಿಲ್ಲಾಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಕೋವಿಡ್‍ನಿಂದ ಗುಣಮುಖರಾದವರ ಒಟ್ಟು ಸಂಖ್ಯೆ 94ಕ್ಕೆ ಏರಿಕೆಯಾಗಿದೆ. ಇಲಕಲ್​ ನಗರದ 18 ವರ್ಷದ ಯುವತಿ ರೋಗಿ-5759 ಕೋವಿಡ್‍ನಿಂದ ಗುಣಮುಖರಾದವರು. ಕೋವಿಡ್‍ನಿಂದ ಗುಣಮುಖರಾಗಿದ್ದ ಯುವತಿ ಮಹಾರಾಷ್ಟ್ರದಿಂದ ಬಂದಿದ್ದರು. ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಪ್ರಕಾಶ ಬಿರಾದಾರ ಯುವತಿಗೆ ಪ್ರಮಾಣ ಪತ್ರ ನೀಡಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ಕೈಗೆ ಸೀಲ್ ಹಾಕಿ ಚಪ್ಪಾಳೆ ತಟ್ಟುವ ಮೂಲಕ ಬೀಳ್ಕೊಟ್ಟರು.

ಬಾದಾಮಿ ತಾಲೂಕಿನ ರಾಘಾಪೂರ ಗ್ರಾಮದ 55 ವರ್ಷದ ರೋಗಿ-7950 (ಬಿಜಿಕೆ-113) ಮಹಿಳೆ, 2 ವರ್ಷದ ರೋಗಿ-7951 (ಬಿಜಿಕೆ-114) ಗಂಡು ಮಗು, ಬಾಗಲಕೋಟೆಯ ಲವಳೇಶ್ವರ ತಾಂಡಾದ 25 ವರ್ಷದ ರೋಗಿ-7952 (ಬಿಜಿಕೆ-115) ಮಹಿಳೆಯಲ್ಲಿ ಕೊರೊನಾ ಇರುವುದು ದೃಢಪಟ್ಟಿದೆ. ಕೋವಿಡ್ ದೃಢಪಟ್ಟ ಬಿಜಿಕೆ-113, ಬಿಜಿಕೆ-114 ವ್ಯಕ್ತಿಗಳು ಮಹಾರಾಷ್ಟ್ರದ ಪುಣೆಯಿಂದ ಬಂದಿದ್ದಾರೆ. ಬಿಜಿಕೆ-115 ಗೋವಾದಿಂದ ಬಂದಿದ್ದು, ಬಿಜಿಕೆ-112 ಸೋಂಕಿತ ವ್ಯಕ್ತಿಯ ಮಡದಿಯಾಗಿದ್ದಾರೆ.

ಜಿಲ್ಲಾಸ್ಪತ್ರೆಯಿಂದ ಬಿಡುಗಡೆ
ಜಿಲ್ಲಾಸ್ಪತ್ರೆಯಿಂದ ಬಿಡುಗಡೆ

ಜಿಲ್ಲೆಯಿಂದ ಪರೀಕ್ಷೆಗೆ ಕಳುಹಿಸಲಾದ 75 ಸ್ಯಾಂಪಲ್​​ಗಳ ಪೈಕಿ 60 ನೆಗೆಟಿವ್ ಬಂದಿದ್ದು, 3 ಪಾಸಿಟಿವ್ ಎಂದು ಬಂದಿವೆ. ಇನ್ನು 2 ಸ್ಯಾಂಪಲ್​​ಗಳ ವರದಿಯನ್ನು ನಿರೀಕ್ಷಿಸಲಾಗುತ್ತಿದೆ.

Last Updated : Jun 20, 2020, 8:31 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.