ETV Bharat / state

ಬಾಗಲಕೋಟೆ ಜಿಲ್ಲೆ ಸಂಪೂರ್ಣ ಲಾಕ್​ಡೌನ್​​ ಸಾಧ್ಯವಿಲ್ಲ: ಡಿಸಿಎಂ ಕಾರಜೋಳ

author img

By

Published : Jul 15, 2020, 10:11 PM IST

ಜಿಲ್ಲೆಯಲ್ಲಿ ಕೊರೊನಾ ಸೋಂಕು‌ ಹೆಚ್ಚಾಗುತ್ತಿರುವ ಹಿನ್ನೆಲೆ ಯಾವುದೇ ವೈದ್ಯಾಧಿಕಾರಿಗಳಿಗೆ ರಜೆ‌ ನೀಡುವಂತಿಲ್ಲ. ಅನಾರೋಗ್ಯ ಸಮಯದಲ್ಲಿ ಮಾತ್ರ ರಜೆ ನೀಡಬೇಕು ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದ್ದಾರೆ.

The entire lockdown in the district is not possible: DCM Govind Karjola
ಜಿಲ್ಲೆಯ ಸಂಪೂರ್ಣ ಲಾಕ್​ಡೌನ್​​ಗೆ ಸಾಧ್ಯವಿಲ್ಲ: ಡಿಸಿಎಂ ಗೋವಿಂದ ಕಾರಜೋಳ

ಬಾಗಲಕೋಟೆ: ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದ ಲಾಕ್​​​​​ಡೌನ್ ಸಾಧ್ಯವಿಲ್ಲ, ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಸೋಂಕು ಹರಡಿಲ್ಲ. ಹೀಗಾಗಿ ಜಿಲ್ಲೆಯನ್ನು ಸಂಪೂರ್ಣ ಲಾಕ್​ಡೌನ್​ ಮಾಡಿದಲ್ಲಿ ಗ್ರಾಮೀಣ ಜನತೆಗೆ ಹಾಗೂ ರೈತಾಪಿ ವರ್ಗದವರಿಗೆ ಅನಗತ್ಯ ತೊಂದರೆ ಉಂಟಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ‌ಕಾರಜೋಳ ತಿಳಿಸಿದ್ದಾರೆ.

ಜಿಲ್ಲೆಯ ಸಂಪೂರ್ಣ ಲಾಕ್​ಡೌನ್​​ ಸಾಧ್ಯವಿಲ್ಲ: ಡಿಸಿಎಂ ಗೋವಿಂದ ಕಾರಜೋಳ

ಜಿಲ್ಲಾಡಳಿತ ಭವನದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಕೊರೊನಾ ಸೋಂಕು‌ ಹೆಚ್ಚಾಗುತ್ತಿರುವ ಹಿನ್ನೆಲೆ, ಯಾವುದೇ ವೈದ್ಯಾಧಿಕಾರಿಗಳಿಗೆ ರಜೆ‌ ನೀಡುವಂತಿಲ್ಲ. ಅನಾರೋಗ್ಯ ಸಮಯದಲ್ಲಿ ಮಾತ್ರ ರಜೆ ನೀಡಬೇಕು ಎಂದು ತಿಳಿಸಿದ ಕಾರಜೋಳ, ಕೊರೊನಾ ಸೋಂಕು ಪಟ್ಟಣ ಪ್ರದೇಶದಲ್ಲಿ ಹೆಚ್ಚು ಹರಡುತ್ತಿದ್ದು, ಬಾಗಲಕೋಟೆ, ಮುಧೋಳ, ಇಳಕಲ್ಲ ಪಟ್ಟಣ ಹಾಗೂ ಕಲಾದಗಿ ಗ್ರಾಮದಲ್ಲಿ ಮಾತ್ರ ಹೆಚ್ಚಾಗಿ ಹರಡುತ್ತಿದೆ. ಇಂತಹ ಪ್ರದೇಶದಲ್ಲಿ ಮಾತ್ರ ಸೀಲ್‌‌ಡೌನ್ ಮಾಡಲಾಗುವುದು ಎಂದರು.

ಕಡಿಮೆ ಅನುದಾನ ಬಿಡುಗಡೆ ಮಾಡಿರುವ ವಿಧಾನಸಭಾ ಕ್ಷೇತ್ರಗಳಿಗೆ ವಿಶೇಷ ಅನುದಾನ ಎಂದು 25 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದರು. ರಾಜ್ಯದಲ್ಲಿ 2,799 ಕೋಟಿ ರೂ, ಅನುದಾನ ಬಿಡುಗಡೆ ಮಾಡಿದ್ದು, ಸುಮಾರು 5,044 ಕಾಮಗಾರಿಯನ್ನು ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.