ಬಾಗಲಕೋಟೆ: ನಗರದ ಬಸವೇಶ್ವರ ವಿದ್ಯಾವರ್ಧಕ ಸಂಘದ ಮಿನಿ ಸಭಾಂಗಣದಲ್ಲಿ 2017-18 ಹಾಗೂ 2018-19ರ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭವು ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಸಾನ್ನಿಧ್ಯದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಸಿದ್ದೇಶ್ವರ ಮಾತನಾಡಿದ ಶ್ರೀಗಳು, ಶಿಕ್ಷಕರು ತಮ್ಮ ಎಲ್ಲಾ ಶ್ರಮವನ್ನು ಹಾಕಿ, ಸಮಾಜ ಸುಧಾರಣೆಗೆ ಒತ್ತು ನೀಡುತ್ತಾರೆ. ಸದಾ ವಿದ್ಯಾರ್ಥಿಗಳಾಗಿ ಕಲಿಕೆ ಮಾಡುತ್ತ, ವಿದ್ಯಾರ್ಥಿಗಳಿಗೆ ತಮ್ಮ ಜ್ಞಾನ ನೀಡುತ್ತಾರೆ ಎಂದರು.
ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದ 10 ಶಿಕ್ಷಕರಿಗೆ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು. ಪ್ರೋ. ಎನ್.ಜಿ.ಕೆರೂರು ಅವರ ತಂದೆಯ ಸ್ಮರಣಾರ್ಥ 2 ಲಕ್ಷ ರೂ. ನಗದು ಠೇವಣಿ ಇಟ್ಟಿದ್ದು, ಅದರ ಬಡ್ಡಿಯ ಹಣದಿಂದ ಪ್ರತಿ ವರ್ಷ ಶಿಕ್ಷಕರಿಗೆ ಸನ್ಮಾನ ಮಾಡಲಾಗುತ್ತಿದೆ.