ಬಾಗಲಕೋಟೆ : ಕಳೆದ ಹಲವು ವರ್ಷಗಳಿಂದ ನೆನೆಗುದ್ದಿಗೆ ಬಿದ್ದಿರುವ ಜಿಲ್ಲಾ ಕ್ರೀಡಾಂಗಣದಲ್ಲಿನ ಈಜುಕೊಳ ದುರಸ್ಥಿ ಬಗ್ಗೆ ಶಾಸಕ ವೀರಣ್ಣ ಚರಂತಿಮಠ ಭೇಟಿ ನೀಡಿ ಪರಿಶೀಲಿಸಿದರು.
ಇದು ಸಾರ್ವಜನಿಕ ಉಪಯೋಗ ಇಲ್ಲದೆ ಹಾಳಾಗಿದ್ದು, ಈಜುಕೊಳ ದುರಸ್ಥಿಗೊಳಿಸಿ, ಮರಳಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈಜುಕೊಳ ಒಂದು ಮೀಟರ್ ಎತ್ತರಿಸಿ ದುರಸ್ಥಿ ಮಾಡುವಂತೆ ಮತ್ತು ಅದರ ಮಗ್ಗಲು ಚಿಕ್ಕಮಕ್ಕಳಿಗೆ ಈಜುಕೊಳ ನಿರ್ಮಾಣಕ್ಕೆ ಸುಮಾರು 90 ಲಕ್ಷ ರೂಪಾಯಿ ಕಾಮಗಾರಿಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕ್ಯಾಪ್ಟನ್ ಕೆ ರಾಜೇಂದ್ರ, ನಿರ್ಮಿತಿ ಕೇಂದ್ರ ಅಧಿಕಾರಿ ಶಂಕರಲಿಂಗ ಗೋಗಿ, ಲೋಕೋಪಯೋಗಿ ಇಲಾಖೆಯ ಕುರುಬಗಟ್ಟಿ, ಜಿಲ್ಲಾ ಕ್ರೀಡಾಂಗಣ ಅಧಿಕಾರಿ ಕುಂದರಗಿ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.