ಕುಷ್ಟಗಿ: ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಮುರಡಿ ಗ್ರಾಮದಲ್ಲಿ ಕೊರೊನಾ ಶಂಕಿತನನ್ನು ಐಸೋಲೇಷನ್ ಮಾಡಲಾಗಿದ್ದು, ಈ ಭೀತಿಯಿಂದ ಗಡಿ ಭಾಗದ ಕುಷ್ಟಗಿ ತಾಲೂಕಿನ ಪಟ್ಟಲಚಿಂತೆ ಗ್ರಾಮದ ಮುಖ್ಯ ರಸ್ತೆಗೆ ನಿರ್ಬಂಧ ಹಾಕಲಾಗಿದೆ.
ಕುಷ್ಟಗಿ ತಾಲೂಕಿನ ಪಟ್ಟಲಚಿಂತೆ ಹಾಗೂ ಹುನಗುಂದ ಗ್ರಾಮದ ಮುರಡಿ ಗ್ರಾಮಗಳು ಕೂಗಳತೆ ದೂರದಲ್ಲಿವೆ. ಮುರಡಿ ಗ್ರಾಮದ ಶಂಕಿತ ವ್ಯಕ್ತಿ ಹುನಗುಂದ ತಾಲೂಕು ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ.
ಕೊಪ್ಪಳ ಜಿಲ್ಲೆಯು ಗ್ರೀನ್ ಝೂನ್ನಲ್ಲಿದ್ದು, ಪಟ್ಟಲಚಿಂತೆ ಗ್ರಾಮದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಈ ಹಿನ್ನೆಲೆ ತಡರಾತ್ರಿಯೇ ಜೆಸಿಬಿ ಬಳಸಿ ರಸ್ತೆ ಸಂಚಾರವನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ ಎಂದು ಸಿಪಿಐ ಚಂದ್ರಶೇಖರ ಜಿ. ಮಾಹಿತಿ ನೀಡಿದರು.