ETV Bharat / state

ನಿಲ್ಲಿಸಿದ್ದ ಕಾರಿನ ಕಿಟಕಿ ಒಡೆದು ಕಳ್ಳತನ: ಸಿಸಿಟಿವಿಯಲ್ಲಿ ದೃಶ್ಯ ಸೆರೆ - ಈಟಿವಿ ಭಾರತ ಕನ್ನಡ

ನಿಲ್ಲಿಸಿದ್ದ ಕಾರಿನ ಕಿಟಕಿ ಒಡೆದು ಹಣ ಇದ್ದ ಬ್ಯಾಗ್​ ಕಳ್ಳತನ ಮಾಡಲಾಗಿದೆ. ಕಳ್ಳತನದ ದೃಶ್ಯ ಲಾಡ್ಜ್​ನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

stolen from car parked in Bagalkote
ನಿಲ್ಲಿಸಿದ್ದ ಕಾರಿನ ಕಿಟಕಿ ಒಡೆದು ಕಳ್ಳತನ
author img

By

Published : Nov 25, 2022, 6:58 PM IST

ಬಾಗಲಕೋಟೆ: ಕಾರಿನ ಗ್ಲಾಸ್ ಒಡೆದು ಹಣ ಹಾಗೂ ವಸ್ತುಗಳನ್ನು ಖದೀಮರು ದೋಚಿರುವ ಘಟನೆ ಜಿಲ್ಲೆಯ ಇಳಕಲ್ ಪಟ್ಟಣದಲ್ಲಿ ವರದಿಯಾಗಿದೆ. ವಸತಿ ಗೃಹದ ಎದುರು ನಿಲ್ಲಿಸಿದ್ದ ಕಾರಿನಲ್ಲಿ ಹಾಡಹಗಲೇ ಕಳ್ಳತನ ಮಾಡಿ, ಹಣ ಹಾಗೂ ಇತರ ವಸ್ತುಗಳನ್ನು ದೋಚಿಕೊಂಡು ಪರಾರಿ ಆಗಿದ್ದಾರೆ. ಇಳಕಲ್ ನಗರದ ಬಸ್ ನಿಲ್ದಾಣ ಪಕ್ಕದಲ್ಲಿರುವ ಜೆಬಿ ಲಾಡ್ಜ್ ಎದುರು ಈ ಘಟನೆ ನಡೆದಿದೆ.

ಕಾರಿನ ಮುಂಭಾಗದ ಗಾಜು ಒಡೆದು 1 ಲಕ್ಷ 59 ಸಾವಿರ 500 ರೂ. ನಗದು ಹಣ ಹಾಗೂ ನಾಲ್ಕು ಎಟಿಎಂ, ಎರಡು ಪಾನ್ ಕಾರ್ಡ್, ಸ್ಮಾರ್ಟ್ ಫೋನ್ ಇದ್ದ ಬ್ಯಾಗ್​ವನ್ನು ಕಳ್ಳತನ ಮಾಡಿದ್ದಾರೆ. ಮಹಾರಾಷ್ಟ್ರ ಮೂಲದ ವಾಹನ ಇದಾಗಿದ್ದು, ರತ್ನಗಿರಿ ಜಿಲ್ಲೆ ಕರವಂಚವಾಡಿ ಗ್ರಾಮದ ಬಜರಂಗ ಸುವಾಲಾಲ ರಾಚೋರಿ ಎನ್ನುವರಿಗೆ ಸೇರಿದ ವಾಹನ ಎಂದು ತಿಳಿದು ಬಂದಿದೆ.

ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಎರಡು ದಿನಗಳ ಹಿಂದೆ ಈ ಘಟನೆ ನಡೆದಿದೆ‌. ಖದೀಮ ಕಾರಿನ ಗಾಜು ಒಡೆಯುವುದು. ಬಳಿಕ ಹಣದ ಬ್ಯಾಗ್ ಎಗರಿಸಿಕೊಂಡು ಹೋಗುವ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಒಬ್ಬ ಖದೀಮ ಕಾರಿನ ಗಾಜು ಒಡೆದು ಹಣ ದೋಚುತ್ತಿದ್ದರೆ, ಮತ್ತೊಬ್ಬ ರಸ್ತೆಯಲ್ಲಿ ಬೈಕ್ ಮೇಲೆ ಕುಳಿತು ಅತ್ತ ಇತ್ತ ಗಮನಿಸುತ್ತಿದ್ದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಳಕಲ್​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಖದೀಮರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ: ನಂಬರ್​ ಪ್ಲೇಟ್​ ಇಲ್ಲದ 80ಕ್ಕೂ ಹೆಚ್ಚು ವಾಹನ ಜಪ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.