ETV Bharat / state

ರಾಜ್ಯ ಸರ್ಕಾರಕ್ಕೆ ಪಂಚೇಂದ್ರಿಯಗಳೇ ಇಲ್ಲ: ಎಸ್.ಆರ್. ಪಾಟೀಲ್​ ವಾಗ್ದಾಳಿ

ಕೃಷ್ಣಾ ಮೇಲ್ದಂಡೆ ಯೋಜನೆ ಮಾದರಿಯಲ್ಲಿ ಪರಿಹಾರ ನೀಡಲು ಒತ್ತಾಯಿಸಿದ್ದೇನೆ. ಆದ್ರೆ ಇದಕ್ಕೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಅಲ್ಲದೇ ಕೇಂದ್ರ ಕೂಡ ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುತ್ತಿಲ್ಲ. ಕಬ್ಬು,ರೇಷ್ಮೆ,ತೋಟಗಾರಿಕಾ ಬೆಳೆಗಳಿಗೆ ಎಷ್ಟು ಹಾನಿಯಾಗಿದೆಯೋ ಅಷ್ಟು ಪರಿಹಾರ ಕೊಡಬೇಕು ಎಂದು ಒತ್ತಾಯಿಸಿರುವುದಾಗಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ್​ ಹೇಳಿದರು.

ರಾಜ್ಯ ಸರ್ಕಾರಕ್ಕೆ ಪಂಚೇಂದ್ರಿಯಗಳೇ ಇಲ್ಲ
author img

By

Published : Oct 13, 2019, 1:17 PM IST

ಬಾಗಲಕೋಟೆ: ಕಿವಿ, ಮೂಗು, ಕಣ್ಣು, ಚರ್ಮ ಹಾಗು ನಾಲಿಗೆ ಇಲ್ಲದ ಸರ್ಕಾರ ಎಂದು ರಾಜ್ಯ ಸರ್ಕಾರದ ವಿರುದ್ಧ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ್ ತೀವ್ರ​ ವಾಗ್ದಾಳಿ ನಡೆಸಿದರು.

ವಿಧಾನ ಪರಿಷತ್ ವಿಪಕ್ಷ ನಾಯಕರಾದ ಬಳಿಕ ಮೊದಲ ಬಾರಿಗೆ ಬಾಗಲಕೋಟೆಗೆ ಭೇಟಿ ನೀಡಿ ಮಾಧ್ಯಮಗಳ ಜೊತೆ ಮಾತನಾಡಿದ ಪಾಟೀಲ್​, ಈ ಸರ್ಕಾರಕ್ಕೆ ಪಂಚೇಂದ್ರಿಯಗಳೇ ಇಲ್ಲ. ನೆರೆ ಸಂತ್ರಸ್ತರಿಗೆ 5 ಲಕ್ಷ ರೂ ಬದಲಾಗಿ 10 ಲಕ್ಷ ರೂಪಾಯಿ ಕೊಡುವಂತೆ ಒತ್ತಾಯಿಸಿದ್ದೇನೆ. ಈ ಹಿಂದೆ ಕೊಡಗಿನಲ್ಲಿ 10 ಲಕ್ಷ ರೂ ಪರಿಹಾರ ನೀಡಲಾಗಿದೆ. ನಮ್ಮ ಸರ್ಕಾರವೇ ನೀಡಿದೆ. ಈಗಲೂ ಎಲ್ಲಾ ಸಂತ್ರಸ್ತರಿಗೆ ಸೂಕ್ತ ಪರಿಹಾರ ಕೊಡಲಿ ಎಂದು ಆಗ್ರಹಿಸಿದ್ರು.

ರಾಜ್ಯ ಸರ್ಕಾರದ ವಿರುದ್ಧ ಎಸ್.ಆರ್. ಪಾಟೀಲ್​ ವಾಗ್ದಾಳಿ

ಕೃಷ್ಣಾ ಮೇಲ್ದಂಡೆ ಯೋಜನೆ ಮಾದರಿಯಲ್ಲಿ ಪರಿಹಾರ ನೀಡಲು ಒತ್ತಾಯಿಸಿದ್ದೇನೆ. ಆದ್ರೆ ಇದಕ್ಕೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಅಲ್ಲದೇ ಕೇಂದ್ರ ಕೂಡ ರಾಷ್ಟ್ರೀಯ ವಿಪತ್ತು ಎಂದು ಘೋಷಿಸುತ್ತಿಲ್ಲ. ಕಬ್ಬು, ರೇಷ್ಮೆ, ತೋಟಗಾರಿಕಾ ಬೆಳೆಗಳಿಗೆ ಎಷ್ಟು ಹಾನಿಯಾಗಿದೆಯೋ ಅಷ್ಟು ಸೂಕ್ತ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದ್ದೇನೆ. ಇದಕ್ಕೂ ಸಹ ಸರ್ಕಾರ ಒಪ್ಪಲಿಲ್ಲಾ ಎಂದರು.

ಐಟಿ ದಾಳಿ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಪ್ರಜಾಪ್ರಭುತ್ವಕ್ಕೆ ಮಾರಕವಾಗುವ ಕೆಲಸ ಪ್ರಧಾನಿ ಮೋದಿ ಅವರಿಂದ ನಡೆಯುತ್ತಿದೆ. ಈ ದೇಶದ ಸಮರ್ಥ ಮುಖಂಡರ ಮನೆಮೇಲೆ ದಾಳಿ‌ ನಡೆಯುತ್ತಿದೆ. ಅದರಲ್ಲೂ ಕಾಂಗ್ರೆಸ್ ಮುಖಂಡರ ಮನೆ ಮೇಲೆ ದಾಳಿ ನಡೆಯುತ್ತಿವೆ. ಕಾಂಗ್ರೆಸ್ ನವರು ಇದಕ್ಕೆ ಜಗ್ಗುವುದಿಲ್ಲ ಎಂದು ಹೇಳಿದರು.

ವಿಧಾನಸಭೆಯಲ್ಲಿ ಮಾಧ್ಯಮಗಳನ್ನು ಹೊರಗಿಟ್ಟಿದ್ದು ಸರಿಯಲ್ಲ. ಮಾಧ್ಯಮ ಸ್ವಾತಂತ್ರ್ಯದ ಹಕ್ಕನ್ನು ಮೊಟಕು‌ ಮಾಡುವ ಕೆಲಸ ಸರಿಯಿಲ್ಲ. ವಿಧಾನಪರಿಷತ್ತಿನಲ್ಲಿ ನಮ್ಮ ಸಭಾಪತಿಗಳು ಎಲ್ಲಾ ಮಾಧ್ಯಮದವರಿಗೆ ಅವಕಾಶ ಕಲ್ಪಿಸಿದ್ದಾರೆ. ಜನರಿಂದ ಆಯ್ಕೆಯಾದ ನಾವು ಜನರ ಒಳಿತಿಗಾಗಿ ಹೇಗೆ ಕೆಲಸ ಮಾಡ್ತೇವೆ ಅನ್ನೋದನ್ನು ಜನ ಗಮನಿಸುತ್ತಾರೆ. ಮಾಧ್ಯಮಗಳ ಕಣ್ಣಿಗೆ ಬಟ್ಟೆ ಕಟ್ಟಿ ಮಾಧ್ಯಮಗಳನ್ನು ಹೊರಗಿಡುವುದು ಸರಿಯಲ್ಲಾ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

Intro:AnchorBody: ಇದು ಪಂಚೇಂದ್ರಿಯಗಳು ಇಲ್ಲದ ಸರ್ಕಾರ. ಕಿವಿ ಮೂಗು ಕಣ್ಣು ಚರ್ಮ ಇಲ್ಲದ ಚರ್ಮಗೇಡಿ ಸರ್ಕಾರ ಎಂದು ರಾಜ್ಯ ಸರ್ಕಾರದ ವಿರುದ್ಧ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ವಾಗ್ದಾಳಿ ನಡೆಸಿದರು.
ಅವರು ವಿಧಾನ ಪರಿಷತ್ ವಿಪಕ್ಷ ನಾಯಕರಾದ ಬಳಿಕ ಮೊದಲ ಬಾರಿಗೆ ಬಾಗಲಕೋಟೆಗೆ ಭೇಟಿ ನೀಡಿ ಮಾಧ್ಯಮಗಳ ಜೊತೆ ಮಾತನಾಡಿದ ಪಾಟೀಲ, ಈ ಸರ್ಕಾರ ಪಂಚೇಂದ್ರಿಯಗಳು ಇಲ್ಲದ ಸರ್ಕಾರ. ನೆರೆ ಸಂತ್ರಸ್ತರಿಗೆ ಐದು ಲಕ್ಷದ ಬದಲಾಗಿ ಹತ್ತು ಲಕ್ಷ ರೂಪಾಯಿ ಕೊಡುವಂತೆ ಒತ್ತಾಯ ಮಾಡಿದ್ದೇನೆ. ಈ ಹಿಂದೆ ಕೊಡಗಿನಲ್ಲಿ ಹತ್ತು ಲಕ್ಷ ಪರಿಹಾರ ನೀಡಲಾಗಿದೆ. ನಮ್ಮ ಸರ್ಕಾರವೇ ನೀಡಿದೆ. ಈಗಲೂ ಎಲ್ಲಾ ಸಂತ್ರಸ್ತರಿಗೆ ಸೂಕ್ತಪರಿಹಾರ ಕೊಡಲಿ. ಕೃಷ್ಣಾ ಮೇಲ್ದಂಡೆ ಯೋಜನೆ ಮಾದರಿಯಲ್ಲಿ ಪರಿಹಾರ ನೀಡಲು ಒತ್ತಾಯಿಸಿದ್ದೇನೆ. ಆದ್ರೆ ಇದಕ್ಕೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿಲ್ಲಾ ಅಂತಾ ಆರೋಪಿಸಿದರು. ಅಲ್ಲದೇ ಕೇಂದ್ರ ಕೂಡ ಇದನ್ನ ರಾಷ್ಟ್ರೀಯ ವಿಪತ್ತು ಎಂದು ಘೋಷಿಸುತ್ತಿಲ್ಲಾ. ಕಬ್ಬು,ರೇಷ್ಮೆ,ತೋಟಗಾರಿಕಾ ಬೆಳೆಗಳಿಗೆ ಎಷ್ಟು ಹಾನಿಯಾಗಿದೆಯೋ ಅಷ್ಟು ಸೂಕ್ತ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದ್ದೇನೆ. ಇದಕ್ಕೂ ಸಹ ಸರ್ಕಾರ ಒಪ್ಪಲಿಲ್ಲಾ. ನಾವು ಸಂತ್ರಸ್ತರ ಪರವಾಗಿ ನಿಂತಿದ್ದೇವೆ ಅಂತಾ ಭರವಸೆ ಕೊಟ್ಟರು ಎಂದು ತಿಳಿಸಿದ ಅವರು, ಐಟಿ ದಾಳಿ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಪ್ರಜಾಪ್ರಭುತ್ವಕ್ಕೆ ಮಾರಕವಾಗುವ ಕೆಲಸ ಪ್ರಧಾನಿ ಮೋದಿ ಅವರಿಂದ ನಡೆಯುತ್ತಿದೆ. ಈ ದೇಶದ ಸಮರ್ಥ ಮುಖಂಡರ ಮನೆಮೇಲೆ ದಾಳಿ‌ನಡೀತಿದೆ. ಅದರಲ್ಲೂ ಕಾಂಗ್ರೆಸ್ ಮುಖಂಡರ ಮನೆ ಮೇಲೆ ದಾಳಿ ನಡೆಯುತ್ತಿವೆ. ಕಾಂಗ್ರೆಸ್ ನವರು ಇದಕ್ಕೆ ಜಗ್ಗುವುದಿಲ್ಲಾ. ಕೇವಲ‌ ಕಾಂಗ್ರೆಸ್ ನಾಯಕರನ್ನೇ ಟಾರ್ಗೆಟ್ ಮಾಡಲಾಗುತ್ತಿದೆ. ಕಾಂಗ್ರೆಸ್ ನಾಯಕರ ಮೇಲೆ ಐಟಿ ದಾಳಿ ಮಾಡಿದ್ರೆ ನಾವು ಸಶಕ್ತರಾಗ್ತಿವಿ ಅನ್ನೋದು ಅಸಾಧ್ಯದ ಮಾತು ಅಂತಾ ಹೇಳಿದರು. ಇದು ರಾಜಕೀಯ ಪ್ರೇರಿತದಾಳಿ ಅಂತ ನನಗೆ ಹಾಗೆ ಅನಿಸಿದೆ. ನಮ್ಮ ಅಭಿಪ್ರಾಯ ಹೇಳುವ ಹಕ್ಕಿದೆ. ಸಾರ್ವಜನಿಕ ಬದುಕಿನಿಂದ ಕಾಂಗ್ರೆಸ್ ನಾಯಕರು ನಿರ್ಗಮಿಸಬೇಕು, ಇಲ್ಲಾ ತಮ್ಮ ಪಕ್ಷಕ್ಕೆ ಬರಬೇಕೆನ್ನುವ ಕಾರಣಕ್ಕೆ ಮಾಡ್ತಾ ಇದ್ದಾರೆ. ಸಂವಿಧಾನಾತ್ಮಕ ಸಂಸ್ಥೆಗಳನ್ನು ಪ್ರಧಾನಿ ಮೋದಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಅಂತಾ ವಾಗ್ದಾಳಿ ನಡೆಸಿದ್ರು. ವಿಧಾನಸಭೆಯಲ್ಲಿ ಮಾಧ್ಯಮಗಳನ್ನು ಹೊರಗಿಟ್ಟಿದ್ದು ಸರಿಯಲ್ಲ. ಮಾದ್ಯಮ ಸ್ವಾತಂತ್ರ್ಯದ ಹಕ್ಕನ್ನು ಮೊಟಕು‌ಮಾಡುವ ಕೆಲಸ ಸರಿಯಿಲ್ಲಾ. ವಿಧಾನಪರಿಷತ್ತಿನಲ್ಲಿ ನಮ್ಮ ಸಭಾಪತಿಗಳು ಎಲ್ಲಾ ಮಾಧ್ಯಮದವರಿಗೆ ಅವಕಾಶ ಕಲ್ಪಿಸಿದೆ. ಜನರಿಂದ ಆಯ್ಕೆಯಾದ ನಾವು ಜನರ ಒಳಿತಿಗಾಗಿ ಹೇಗೆ ಕೆಲಸ ಮಾಡ್ತೇವೆ ಅನ್ನೋದನ್ನ ಜನ ಗಮನಿಸುತ್ತಾರೆ. ಮಾಧ್ಯಮಗಳ ಕಣ್ಣಿಗೆ ಬಟ್ಟೆ ಕಟ್ಟಿ ಮಾದ್ಯಮಗಳನ್ನು ಹೊರಗಿಡುವುದು ಸರಿಯಲ್ಲಾ ಅಂತಂದ್ರು. ಸರ್ಕಾರದ ಖಜಾನೆ ಖಾಲಿ ವಿಚಾರ, ಪ್ರತಿಬಾರಿ ನಮ್ಮ ಭಾಗದಲ್ಲಿ ಅಧಿವೇಶನ ನಡೀಬೇಕು ಎನ್ನುವ ಉದ್ದೇವಿತ್ತು. ಬೆಳಗಾವಿಯಲ್ಲಿ ಈ ಬಾರಿ ನಡೀಲಿಲ್ಲಾ. ನೆರೆ ಬಂದು ಆ ಭಾಗದ ಜನರಿಗೆ ಬಹಳ ತೊಂದರೆಯಾಗಿದೆ. ಈ ಹಿಂದೆ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ನಡೆದಾಗ ನಾವು ಬೆಳಗಾವಿಯಿಂದ ಅಧಿವೇಶನ ಶಿಪ್ಟ ಮಾಡಿರಲಿಲ್ಲಾ. ಅಧಿಕಾರಿಗಳು ಬೇಡ ಎಂದಿದ್ದಕ್ಕೆ ಬೆಂಗಳೂರಿಗೆ ಸ್ಥಳಾಂತರಿಸಿದ್ರು. ಬೆಂಗಳೂರಿನಲ್ಲಿ ಕೇವಲ‌ಮೂರೇ ದಿನ ನಡೆಸಿದ್ಯಾಕೆ ಅಂತಾ ಸರ್ಕಾರವನ್ನು ಪ್ರಶ್ನಿಸಿದ್ರು. ಇನ್ನು ಎರಡನೇ ಬಾರಿಗೆ ವಿಧಾನಪರಿಷತ್ ವಿರೋಧ ಪಕ್ಷದ ನಾಯಕನಾಗಿ ಹೈಕಮಾಂಡ ಆಯ್ಕೆ ಮಾಡಿದ್ದು ಕೃತಜ್ಞತೆ ಸಲ್ಲಿಸುತ್ತೇನೆ. ಕಾಯಾ ವಾಚಾ ಮನಸಾ ಕೆಲಸ ಮಾಡ್ತೇನೆ. ಸರ್ಕಾರ ಜನಪರ‌ ಆಡಳಿತ ಕೊಡುವ ನಿಟ್ಟಿನಲ್ಲಿ ವಿರೋಧ ಪಕ್ಷದಲ್ಲಿ ಕರ್ತವ್ಯ ನಿರ್ವಹಿಸುತ್ತೇನೆ. ಜಿಲ್ಲೆಯ ಬಾದಾಮಿ ಶಾಸಕ, ಮಾಜಿ ಸಿಎಂ ಸಿದ್ದರಾಮಯ್ಯ ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿದ್ದಾರೆ. ವಿಧಾನಸಭೆ ಹಾಗೂ ಪರಿಷತ್ ವಿರೋಧ ಪಕ್ಷದ ನಾಯಕರು ಬಾಗಲಕೋಟೆ ಜಿಲ್ಲೆಯವರೆ ಆಗಿದ್ದು ವಿಶೇಷ ಚರಿತ್ರಾರ್ಹ ಅಂತಾ ಖುಷಿಪಟ್ಟರು.

ಬೈಟ್: ಎಸ್.ಆರ್. ಪಾಟೀಲ (ವಿಧಾನ ಪರಿಷರ್ ವಿರೋಧ ಪಕ್ಷದ ನಾಯಕ)Conclusion:ಈ ಟಿವಿ,ಭಾರತ,ಬಾಗಲಕೋಟೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.