ETV Bharat / state

ಕೊರೊನಾ, ನೆರೆ ಭೀತಿ ನಡುವೆ ಬಾಗಲಕೋಟೆಯಲ್ಲಿ ಸರಳ ಹಬ್ಬ ಆಚರಣೆ - ಬಾಗಲಕೋಟೆ ಗಣೇಶ ಹಬ್ಬ

ಸರ್ಕಾರದ ಆದೇಶದಂತೆ ಬೃಹತ್ ಆಕಾರದ ಗಣೇಶ ಮೂರ್ತಿಗಳು ಇಲ್ಲದೇ ಚಿಕ್ಕದಾದ ಮೂರ್ತಿಗಳನ್ನು ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಸಾಮಾನ್ಯವಾಗಿ ಕಂಡು‌ ಬಂದಿತು.

Bagalkota
ಬಾಗಲಕೋಟೆ
author img

By

Published : Aug 22, 2020, 5:09 PM IST

ಬಾಗಲಕೋಟೆ: ಕೊರೊನಾ ಭೀತಿ ಮಧ್ಯೆಯೂ ಜಿಲ್ಲೆಯಲ್ಲಿ ಗಣೇಶ ಹಬ್ಬವನ್ನು ಸರಳವಾಗಿ ಆಚರಣೆ ಮಾಡಲಾಯಿತು.

ಸರ್ಕಾರದ ಆದೇಶದಂತೆ ಬೃಹತ್ ಆಕಾರದ ಗಣೇಶ ಮೂರ್ತಿಗಳು ಇಲ್ಲದೇ, ಚಿಕ್ಕದಾದ ಮೂರ್ತಿಗಳನ್ನು ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಸಾಮಾನ್ಯವಾಗಿ ಕಂಡು‌ ಬಂದಿದೆ. ಮೆರವಣಿಗೆ, ಕುಣಿತ ಇಲ್ಲದೇ ಸರಳವಾಗಿ ಕೈಯಲ್ಲಿ ಹಿಡಿದುಕೊಂಡು ಗಣೇಶನನ್ನು ಮನೆಗೆ ಕೊಂಡೊಯ್ದಿದ್ದಾರೆ.

ಕುಟುಂಬ ಸಮೇತ ಆಗಮಿಸಿ, ಗಣೇಶನಿಗೆ ಪೂಜೆ ಸಲ್ಲಿಸಿ,ತೆಗೆದುಕೊಂಡು ಹೋಗುವ ದೃಶ್ಯ ಸಾಮಾನ್ಯವಾಗಿತ್ತು. ಮಾರುಕಟ್ಟೆಯಲ್ಲಿ ಕೆಲವು ಪ್ರದೇಶದಲ್ಲಿ ಸಾಮಾಜಿಕ ಅಂತರ ,ಮಾಸ್ಕ್ ಇಲ್ಲದೇ ಗಣೇಶ ಮೂರ್ತಿಯನ್ನು ಪೂಜೆ ಮಾಡಿ ತೆಗೆದುಕೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಆದರೆ, ನಗರದ ಎಸ್ ಎಸ್ ಕೆ ಸಮಾಜದ ವತಿಯಿಂದ ಪ್ರತಿ ವರ್ಷ ಗಣೇಶನ ಹಬ್ಬವೂ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಕೊರೊನಾ ಹಿನ್ನೆಲೆ ಸರಳವಾಗಿ ಆಚರಣೆ ಮಾಡಲಾಗಿದ್ದು, ಗೋ ಗೋ ಕೊರೊನಾ...ಕಮ್ ಕಮ್ ಗಣಪ ಎಂಬ ಹಾಡನ್ನು ಹಾಡುವ ಮೂಲಕ ಗಣೇಶನನ್ನು ಬರಮಾಡಿಕೊಳ್ಳಲಾಯಿತು.

ಸಮಾಜದ ಕಾರ್ಯದರ್ಶಿ ರಘನಾಥಸಾ ಧೋಂಗಡೆ, ತುಳಜನಸಾ ದಾನಿ, ಆನಂದ ಭಾಂಡೆಗೆ, ಹನುಮಂತ ನಿರಂಜನ ಹಾಗೂ ಜಗದೀಶ ಪವಾರ ಸೇರಿದಂತೆ ಇತರ ಯುವ ಮುಖಂಡರು ಉಪಸ್ಥಿತ ಇದ್ದು, ಗಣೇಶನಿಗೆ ಪೂಜೆ ಪುರಸ್ಕಾರ ನಂತರ ಹೀಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ, ಕೊರೊನಾದ ವಿಘ್ನವನ್ನು ದೂರು ಮಾಡುವಂತೆ ಪ್ರಾರ್ಥನೆ ಸಲ್ಲಿಸಿದರು.

ಒಂದೆಡೆ ‌ಕೊರೊನಾ ಭೀತಿ ಇದ್ದರೆ, ಮತ್ತೊಂದೆಡೆ ಪ್ರವಾಹ ಭೀತಿಯಿಂದ ಗಣೇಶ ಹಬ್ಬದ ಸಂಭ್ರಮ ಇಲ್ಲದೇ ಸಂತ್ರಸ್ತರು ಸರಳವಾಗಿ ಆಚರಣೆ ಮಾಡುತ್ತಿದ್ದಾರೆ. ಮಲ್ಲಪ್ರಭಾ, ಘಟಪ್ರಭಾ ಹಾಗೂ ಕೃಷ್ಣ ನದಿಗಳ ಪ್ರವಾಹದಿಂದ‌ ಜನತೆ ತತ್ತರಗೊಂಡಿದ್ದು, ಜಲಾವೃತ್ತಗೊಂಡ ಮನೆಗಳಲ್ಲಿ ಗಣೇಶ ಹಬ್ಬದ ಕಳೆ ಇಲ್ಲದೇ ಸರಳ ಆಚರಣೆಗೆ ಮುಂದಾಗಿರುವುದು ಕಂಡು ಬಂತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.