ETV Bharat / state

ಪ್ರವಾಹ ಪೀಡಿತ ಪ್ರದೇಶಗಳಿಗೆ ಸಿದ್ದರಾಮಯ್ಯ.. ಸಂತ್ರಸ್ತರಿಗೆ ಸೂಕ್ತ ಪರಿಹಾರ ಕೊಡಿಸುವ ಭರವಸೆ - Badami MLA Siddaramaiah

ಕಣ್ಣಿಗೆ ಶಸ್ತ್ರಚಿಕಿತ್ಸೆ ಆಗಿದ್ದರಿಂದ ನೆರೆ ವೀಕ್ಷಣೆಗೆ ಬಂದಿರಲಿಲ್ಲ. ಅದಕ್ಕಾಗಿ ಮಗ ಡಾ. ಯತೀಂದ್ರ ಅವರನ್ನ ಕಳುಹಿಸಿಕೊಟ್ಟು ವೀಕ್ಷಣೆ ಮಾಡಿಸಿದ್ದೇನೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದೇನೆ. ಸಂತ್ರಸ್ತರಿಗೆ ಅಗತ್ಯ ನೆರವು ಕೊಡುವಂತೆ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದು ಬಾದಾಮಿ ಶಾಸಕ ಸಿದ್ದರಾಮಯ್ಯ ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
author img

By

Published : Aug 19, 2019, 8:12 PM IST

ಬಾದಾಮಿ : ಮಲಪ್ರಭಾ ನದಿಯಿಂದ ಉಂಟಾದ ಪ್ರವಾಹ ಪೀಡಿತ ಪ್ರದೇಶಗಳಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಬಾದಾಮಿ ಶಾಸಕ ಸಿದ್ದರಾಮಯ್ಯ ಭೇಟಿ ನೀಡಿ‌ ಪರಿಶೀಲನೆ ನಡೆಸಿದರು.

ನರಗುಂದ ಮಾರ್ಗವಾಗಿ ಆಗಮಿಸಿ ಸಿದ್ದರಾಮಯ್ಯನವರು ಕರ್ಲಕೊಪ್ಪ ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತರೊಂದಿಗೆ ಚರ್ಚೆ ನಡೆಸಿದರು. ಸಮಸ್ಯೆ ಆಲಿಸಿ ನಂತರ ಸಂತ್ರಸ್ತರನ್ನುದ್ದೇಶಿಸಿ ಮಾತನಾಡಿದ ಅವರು, ಕಣ್ಣಿಗೆ ಶಸ್ತ್ರಚಿಕಿತ್ಸೆ ಆಗಿದ್ದರಿಂದ ನೆರೆ ವೀಕ್ಷಣೆಗೆ ಬರಲಿಲ್ಲ. ಪುತ್ರ ಡಾ. ಯತೀಂದ್ರ ಅವರನ್ನ ಕಳುಹಿಸಿಕೊಟ್ಟು ವೀಕ್ಷಣೆ ಮಾಡಿಸಿದ್ದೇನೆ. ಎಲ್ಲಾ ಕಾಂಗ್ರೆಸ್ ಮುಖಂಡರನ್ನೂ ವೀಕ್ಷಣೆ ಮಾಡುವಂತೆ ಹೇಳಿದ್ದೆ, ಅವರು‌ ಕೂಡಾ ನೆರವಾಗಿದ್ದಾರೆ. ಕೆಲವು ದಾನಿಗಳಿಂದಲೂ ಅಗತ್ಯ ಸಾಮಾನುಗಳನ್ನು ಕೊಡಲು ಹೇಳಿದ್ದೆ. ಸಂತ್ರಸ್ತರಿಗೆ ಅಗತ್ಯ ನೆರವು ಕೊಡುವಂತೆ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದು ತಿಳಿಸಿದರು.

ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಿದ್ದರಾಮಯ್ಯ..

ಇದೇ ಸಮಯದಲ್ಲಿ ಪ್ರವಾಹದ ವೇಳೆ ಮೃತಪಟ್ಟ 58 ವರ್ಷದ ಕರ್ಲಕೊಪ್ಪ ಗ್ರಾಮದ ಭೀಮಪ್ಪ ಜಾಲಿಕಟ್ಟಿ ಎಂಬುವ ಕುಟುಂಬದವರಿಗೆ ಐದು ಲಕ್ಷ ಪರಿಹಾರದ ಚೆಕ್ ವಿತರಣೆ ಮಾಡಿದರು. ಶಾಸಕ ಎಸ್ ಕೆ ಸೋಮಶೇಖರ ಸೇರಿದಂತೆ ಇತರ ಮುಖಂಡರು ಉಪಸ್ಥಿತರಿದ್ದು, ಅಗತ್ಯ ವಸ್ತುಗಳನ್ನು ಹಂಚಿದರು. ಮೂರು ದಿನಗಳ ಕಾಲ ಬಾದಾಮಿಯಲ್ಲಿಯೇ ವಾಸ್ತವ್ಯ ಹೂಡಲಿರುವ ಸಿದ್ದರಾಮಯ್ಯ, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂಚಾರ ಮಾಡಿ, ಸಂತ್ರಸ್ತರ ಸಮಸ್ಯೆ ಆಲಿಸಲಿದ್ದಾರೆ.

Intro:AnchorBody:-ಮಲ್ಲಪ್ರಭಾ ನದಿಯಿಂದ ಪ್ರವಾಹ ಪೀಡಿತ ಬಾದಾಮಿ ಮತಕ್ಷೇತ್ರದ ಪ್ರದೇಶಗಳಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕರಾಗಿರುವ ಸಿದ್ದರಾಮಯ್ಯ ಭೇಟ್ಟಿ ನೀಡಿ‌ ಪರಿಶೀಲನೆ ನಡೆಸಿದರು.
ನರಗುಂದ ಮಾರ್ಗವಾಗಿ ಆಗಮಿಸಿ ಸಿದ್ದರಾಮಯ್ಯ ನವರು ಮೊದಲು ಕರ್ಲಕೊಪ್ಪ ಗ್ರಾಮಕ್ಕೆ ಭೇಟ್ಟಿ ನೀಡಿದರು.ಈ ಸಮಯದಲ್ಲಿ ಸಂತ್ರಸ್ಥರೊಂದಿಗೆ ಚರ್ಚೆ ನಡೆಸಿ,ಸಮಸ್ಯೆಯನ್ನು ಆಲಿಸಿದರು.
ನಂತರ ಸಂತ್ರಸ್ಥರನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ ನವರು,ಕಣ್ಣಿಗೆ ಶಸ್ತ್ರಚಿಕಿತ್ಸೆ ಆಗಿದ್ದರಿಂದ ನೆರೆ ವೀಕ್ಷಣೆಗೆ ಬರಲಿಲ್ಲ.ಪುತ್ರ ಯತೀಂದ್ರ ಕಳಿಸಿಕೊಟ್ಟು ವೀಕ್ಷಣೆ ಮಾಡಿಸಿದ್ದೇನೆ.ಅಲ್ಲದೆ ಎಲ್ಲಾ ಕಾಂಗ್ರೆಸ್ ಮುಖಂಡರನ್ನು ವೀಕ್ಷಣೆ ಮಾಡುವಂತೆ ಹೇಳಿದ್ದೆ,ಅವರು‌ ಕೂಡಾ ನೆರವಾಗಿದ್ದಾರೆ.ಕೆಲವು ದಾನಿಗಳಿಂದಲೂ ಅಗತ್ಯ ಸಾಮಾನುಗಳನ್ನು ಕೊಡಲು ಹೇಳಿದ್ದೆ.ಸಂತ್ರಸ್ತರಿಗೆ ಅಗತ್ಯ ನೆರವು ಕೊಡುವಂತೆ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದು ತಿಳಿಸಿದ ಸಿದ್ದರಾಮಯ್ಯ, ಈ ಬಗ್ಗೆ ವಿಶೇಷ ವಿಧಾನಸಭೆ ಕರೆಯುವಂತೆ ಸಿಎಂ ಯಡಿಯೂರಪ್ಪ ನವರಿಗೆ ಒತ್ತಾಯ ಮಾಡಿದ್ದೇನೆ ಎಂದರು.
ಇದೇ ಸಮಯದಲ್ಲಿ ಪ್ರವಾಹದ ವೇಳೆ ಮೃತಪಟ್ಟ 58 ವರ್ಷದ ಕರ್ಲಕೊಪ್ಪ ಗ್ರಾಮದ ಭೀಮಪ್ಪ ಜಾಲಿಕಟ್ಟಿ ಎಂಬುವ ಕುಟುಂಬದವರಿಗೆ ಐದು ಲಕ್ಷ ಪರಿಹಾರದ ಚೆಕ್ ವಿತರಣೆ ಮಾಡಿದರು.ಈ ಸಮಯದಲ್ಲಿ ಶಾಸಕ ಎಸ್.ಕೆ.ಸೋಮಶೇಖರ ಸೇರಿದಂತೆ ಇತರ ಮುಖಂಡರು ಉಪಸ್ಥಿತಿ ಇದ್ದು,ಅಗತ್ಯ ವಸ್ತುಗಳನ್ನು ಹಂಚಿದರು.ಮೂರು ದಿನಗಳ ಕಾಲ ಬಾದಾಮಿ ಯಲ್ಲಿಯೇ ವಾಸ್ತವ್ಯ ಇದ್ದು, ವಿವಿಧ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂಚಾರ ಮಾಡಿ,ಸಂತ್ರಸ್ತರ ಸಮಸ್ಯೆ ಆಲಿಸಲಿದ್ದಾರೆ.Conclusion:ಈ ಟಿವಿ,ಭಾರತ,ಬಾಗಲಕೋಟೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.