ETV Bharat / state

ನಾನು ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡ್ಬೇಕು ಅಂತ ಈಶ್ವರಪ್ಪನ ಕೇಳ್ಬೇಕಾ: ಸಿದ್ದರಾಮಯ್ಯ - ಸಿದ್ದರಾಮಯ್ಯ ಈಶ್ವರಪ್ಪ ಚುನಾವಣಾ ಹೇಳಿಕೆ

ಸಿದ್ದರಾಮಯ್ಯ ಜಮೀರ್ ಕೈ ಕಾಲು ಹಿಡಿದು ಚಾಮರಾಜಪೇಟೆಯಲ್ಲಿ ನಿಲ್ಲುತ್ತಾರೆ ಎಂಬ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಬಾದಾಮಿಯಲ್ಲಿ ಕರೀತಾರೆ, ಇಲ್ಲೇ ನಿಂತುಕೊಳ್ಳುತ್ತೇನೆ. ಈಶ್ವರಪ್ಪನ ಮಾತು ಕೇಳಿ ನಿಲ್ಲಲ್ಲ ನಾವು. ಅಷ್ಟಕ್ಕೂ ಈಶ್ವರಪ್ಪ ಯಾರು?. ನಮ್ಮ ಪಾರ್ಟಿಗೂ ಅವರಿಗೂ ಏನು ಸಂಬಂಧ? ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

siddaramaiah-slams-eshwarappa
ಸಿದ್ದರಾಮಯ್ಯ
author img

By

Published : Dec 6, 2021, 1:24 PM IST

ಬಾಗಲಕೋಟೆ: ನಾನು ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಅಂತ ಈಶ್ವರಪ್ಪನನ್ನು ಕೇಳಬೇಕಾ?. ಯಾರವ ಈಶ್ವರಪ್ಪ ನಮಗೆ ಹೇಳೋಕೆ?. ನನಗೆ ಎಲ್ಲಿ ಜನ ಪ್ರೀತಿಯಿಂದ ಕರೀತಾರೆ, ಅಲ್ಲಿ ನಿಲ್ಲುತ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದರು.

'ಈಶ್ವರಪ್ಪಗೆ ಪಾರ್ಲಿಮಂಟರಿ ಭಾಷೆ ಗೊತ್ತಿಲ್ಲ':

ನಾವು ಯಾವುದೇ ಭಾಷೆ ಬಳಸಬೇಕಾದರೆ ಪಾರ್ಲಿಮೆಂಟರಿ ಭಾಷೆ ಬಳಸಬೇಕು. ಅದು ಗೊತ್ತಿಲ್ಲದವರಿಗೆ ಏನ್ ಮಾಡೋಕಾಗುತ್ತೆ?. ಅವರಿಗೆ ಸಂವಿಧಾನ ಗೊತ್ತಾ? ಸಂವಿಧಾನ ಓದಿದ್ದಾರಾ? ಅವರಿಗೆ ಸಂವಿಧಾನ ಗೊತ್ತಿದ್ದರೆ ಮುಸಲ್ಮಾನ್​​, ಕ್ರಿಶ್ಚಿಯನ್ನರ ವಿರುದ್ಧ ಮಾತನಾಡುತ್ತಿರಲಿಲ್ಲ. ಇಂತಹವರ ಕೈಯಲ್ಲಿ ಅಧಿಕಾರ ಸಿಕ್ಕರೆ ಈ ಪರಿಸ್ಥಿತಿ ನಿರ್ಮಾಣವಾಗುತ್ತೆ ಎಂದರು.

ಜೆಡಿಎಸ್ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಜೆಡಿಎಸ್​ನವರು ಎಲ್ಲೋ ನಾಲ್ಕೈದು ಜಿಲ್ಲೆಯಲ್ಲಿದ್ದಾರೆ. ಅವರ ಬಗ್ಗೆ ಯಾಕೆ ಮಾತನಾಡಬೇಕು ಪಾಪ ಎಂದು ವ್ಯಂಗ್ಯವಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.