ETV Bharat / state

ಬಾದಾಮಿಯಲ್ಲಿ ಆಹಾರ ಕೊರತೆ ಆಗದ ರೀತಿ ವ್ಯವಸ್ಥೆ ಮಾಡಲಾಗ್ತಿದೆ.. ವಿಪಕ್ಷ ನಾಯಕ ಸಿದ್ದರಾಮಯ್ಯ!!

ರೋಗಕ್ಕೆ ಜಾತಿ-ಧರ್ಮಗಳಿಲ್ಲ. ಇದನ್ನು ಜಾತಿ-ಧರ್ಮದ ಪೂರ್ವಾಗ್ರಹಗಳಿಲ್ಲದೆಯೇ ಎದುರಿಸಬೇಕು. ಕೊರೊನಾ ವಿರುದ್ಧ ದೇಶ ಒಂದಾಗಿ ನಡೆಸುತ್ತಿರುವ ಹೋರಾಟಕ್ಕೆ ಕೆಲವರು ಜಾತಿ-ಧರ್ಮದ ಬಣ್ಣ ಹಚ್ಚಲು ಪ್ರಯತ್ನಿಸುತ್ತಿರುವುದು ಅಪಾಯಕಾರಿ ಬೆಳವಣಿಗೆ.

Siddaramaia tweet news
ಸಿದ್ದರಾಮಯ್ಯ
author img

By

Published : Apr 1, 2020, 5:48 PM IST

ಬೆಂಗಳೂರು : ಲಾಕ್​ಡೌನ್ ಪರಿಣಾಮ ಬಾದಾಮಿಯಲ್ಲಿ ಆಹಾರದ ಕೊರತೆ ಎದುರಾಗದ ರೀತಿ ಮುನ್ನೆಚ್ಚರಿಕೆ ವಹಿಸಲಾಗಿದೆ. ಹಲವೆಡೆ ಆಹಾರ ಸಿದ್ಧಪಡಿಸಿ ಅಗತ್ಯವಿರುವವರಿಗೆ ಪೂರೈಕೆ ಮಾಡುವ ಕೆಲಸ ಆರಂಭಿಸಲಾಗಿದೆ. ಈ ಸಂಬಂಧ ಸ್ಥಳೀಯ ಮುಖಂಡರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಮಾಹಿತಿ ಪಡೆಯುತ್ತಿದ್ದೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

  • ಲಾಕ್‌ಡೌನ್ ಪರಿಣಾಮ ಬಾದಾಮಿಯಲ್ಲಿ ಆಹಾರ ಕೊರತೆ ಎದುರಾಗಿ, ಕ್ಷೇತ್ರದ ಜನರು ಹಸಿವಿನಿಂದ ಪರದಾಡುವ ಪರಿಸ್ಥಿತಿ ಎದುರಾಗಬಾರದೆಂದು ಮುಂಜಾಗ್ರತೆ ವಹಿಸಿ ಹಲವೆಡೆ ಆಹಾರ ಸಿದ್ಧಪಡಿಸಿ, ಅಗತ್ಯವಿರುವವರಿಗೆ ಪೂರೈಕೆ ಮಾಡುವ ಕೆಲಸ ಆರಂಭಿಸಲಾಗಿದೆ. ಈ ಸಂಬಂಧ ಸ್ಥಳೀಯ ಮುಖಂಡರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಮಾಹಿತಿ ಪಡೆಯುತ್ತಿದ್ದೇನೆ.#COVID pic.twitter.com/NWCZoY9v7g

    — Siddaramaiah (@siddaramaiah) April 1, 2020 " class="align-text-top noRightClick twitterSection" data=" ">

ಮಾಧ್ಯಮ ಪ್ರಕಟಣೆ : ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಸಿದ್ದರಾಮಯ್ಯ, ಆಹಾರ ತಯಾರಿಕೆ ಹಾಗೂ ವಿತರಣೆ ವೇಳೆ ಗುಂಪುಗೂಡಿ ಕೆಲಸ ಮಾಡಬಾರದು. ಸೂಕ್ತ ಅಂತರ ಕಾಯ್ದುಕೊಳ್ಳುವಂತೆ ನಮ್ಮ ಮುಖಂಡರಿಗೆ, ಕಾರ್ಯಕರ್ತರಿಗೆ ಸೂಚನೆ ನೀಡಿದ್ದೇನೆ. ಹಸಿದವರಿಗೆ ಅನ್ನ ನೀಡುವುದು ಎಷ್ಟು ಮುಖ್ಯವೋ, ರೋಗ ಹರಡದಂತೆ ಎಚ್ಚರಿಕೆಯಿಂದ ಕೆಲಸ ಮಾಡುವುದು ಅಷ್ಟೇ ಮುಖ್ಯ. ಜನ ಸೇವೆ ಮತ್ತು ಕೊರೊನಾ ಬಗ್ಗೆ ಜಾಗೃತಿ ಎರಡನ್ನೂ ಮರೆಯದಿರೋಣ ಎಂದಿದ್ದಾರೆ.

  • ಅಡುಗೆ ತಯಾರಿ ಹಾಗೂ ವಿತರಣೆ ವೇಳೆ ಮುನ್ನೆಚ್ಚರಿಕೆಯಿಂದ ಸೂಕ್ತ ಅಂತರ ಕಾಯ್ದುಕೊಳ್ಳುವಂತೆ ನಮ್ಮ ಮುಖಂಡರಿಗೆ, ಕಾರ್ಯಕರ್ತರಿಗೆ ಸೂಚನೆ ನೀಡಿದ್ದೇನೆ. ಹಸಿದವರಿಗೆ ಅನ್ನ ನೀಡುವುದು ಎಷ್ಟು ಮುಖ್ಯವೋ, ರೋಗ ಹರಡದಂತೆ ಎಚ್ಚರಿಕೆಯಿಂದ ಕೆಲಸ ಮಾಡುವುದು ಅಷ್ಟೇ ಮುಖ್ಯ.
    ಜನಸೇವೆ ಮತ್ತು ಕೊರೊನಾ ಬಗ್ಗೆ ಜಾಗೃತಿ ಎರಡನ್ನು ಮರೆಯದಿರೋಣ.#COVID

ಸಿದ್ದರಾಮಯ್ಯ ಟ್ವೀಟ್ : ರೋಗಕ್ಕೆ ಜಾತಿ-ಧರ್ಮಗಳಿಲ್ಲ. ಇದನ್ನು ಜಾತಿ-ಧರ್ಮದ ಪೂರ್ವಾಗ್ರಹಗಳಿಲ್ಲದೆಯೇ ಎದುರಿಸಬೇಕು. ಕೊರೊನಾ ವಿರುದ್ಧ ದೇಶ ಒಂದಾಗಿ ನಡೆಸುತ್ತಿರುವ ಹೋರಾಟಕ್ಕೆ ಕೆಲವರು ಜಾತಿ-ಧರ್ಮದ ಬಣ್ಣ ಹಚ್ಚಲು ಪ್ರಯತ್ನಿಸುತ್ತಿರುವುದು ಅಪಾಯಕಾರಿ ಬೆಳವಣಿಗೆ. ಈ ಸಂಕಷ್ಟದ ಗಳಿಗೆಯಲ್ಲಿ ಒಂದಾಗಿರೋಣ, ಎಚ್ಚರವಾಗಿರೋಣ ಎಂದು ಟ್ವೀಟ್​ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.