ETV Bharat / state

ಶೂ - ಸಾಕ್ಸ್ ವಿಚಾರದಲ್ಲೂ ಕಾಂಗ್ರೆಸ್ ರಾಜಕಾರಣ: ಸಚಿವ ಶ್ರೀರಾಮಲು ಆಕ್ರೋಶ

author img

By

Published : Jul 8, 2022, 8:16 PM IST

ಕಾಂಗ್ರೆಸ್ ಕುರಿತು ಸಚಿವ ಶ್ರೀರಾಮುಲು ಟೀಕೆಗಳ ಮಳೆ ಸುರಿಸಿದ್ದಾರೆ.

minister shreeramulu
ಸಚಿವ ಶ್ರೀರಾಮಲು

ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವೇಷ ಬದಲಾವಣೆ ಮಾಡುತ್ತಾ ಅಲೆಯುತ್ತಿದ್ದಾರೆ. ಹೀಗಾಗಿ ಅವರಿಗೆ ಯಾವುದೇ ಕ್ಷೇತ್ರ ಸಿಗುತ್ತಿಲ್ಲ ಎಂದು ಸಚಿವ ಶ್ರೀರಾಮಲು ಬಾಗಲಕೋಟೆಯಲ್ಲಿ ವ್ಯಂಗ್ಯವಾಡಿದ್ದಾರೆ.

ಶಾಲಾ ಮಕ್ಕಳ ಶೂ-ಸಾಕ್ಸ್ ಹಂಚಿಕೆ ವಿಚಾರವಾಗಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಶೂ - ಸಾಕ್ಸ್ ಹಂಚಿಕೆ ಸ್ವಲ್ಪ ಲೇಟಾಗಿದೆ. ಆದರೂ ಕೂಡಾ ಎಲ್ಲ ಕಡೆ ಶೂ-ಸಾಕ್ಸ್, ಶಾಲಾ ಸಮವಸ್ತ್ರ ಹಂಚಿಕೆ ಮಾಡಲಾಗುತ್ತಿದೆ ಎಂದರು. ಅದನ್ನೇ ಕಾಂಗ್ರೆಸ್ ದೊಡ್ಡ ರಾದ್ದಾಂತ ಮಾಡುವ ಮೂಲಕ ರಾಜಕಾರಣ ಮಾಡುತ್ತಿದೆ ಎಂದರು.

ಬಾದಾಮಿ ಕ್ಷೇತ್ರದಿಂದ ಪಾಲಾಯನ ಮಾಡಿದ ಸಿದ್ದರಾಮಯ್ಯ ಕ್ಷೇತ್ರ ಹುಡುಕಿಕೊಂಡು ಹೋಗುತ್ತಿದ್ದಾರೆ. ಚಾಮರಾಜ್ ಪೇಟೆ, ವರುಣಾ, ಕೋಲಾರ, ಸೌದತ್ತಿ ಅಂತಾ ಹೇಳುತ್ತಾ ವೇಷ ಬದಲಾವಣೆ ಮಾಡುತ್ತಾ ಅಲೆಯುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಇದೇ ಸಂದರ್ಭದಲ್ಲಿ ಸಿದ್ದರಾಮೋತ್ಸವಕ್ಕೆ ಹೋಗ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾವು ಹೋಗೋ ಪ್ರಶ್ನೆಯೇ ಇಲ್ಲ. ನಾವು ಮೊದಲಿನಿಂದಲೂ ಅವರನ್ನು ವಿರೋಧ ಮಾಡಿಕೊಂಡು ಬಂದಿದ್ದೇವೆ ಎಂದರು.

ಕಾಂಗ್ರೆಸ್ ಸರ್ಕಾರ ಬರುತ್ತೆ ಅಂದುಕೊಂಡಿದ್ದಾರೆ. ಸಿಎಂ ಸ್ಥಾನಕ್ಕೆ ಕಿತ್ತಾಟವಿದೆ. ಆದರೆ, ಅವರನ್ನು ಬರಲು ಬಿಡೋದಿಲ್ಲ. 2023ರಲ್ಲೂ ಬಿಜೆಪಿ 150 ಸ್ಥಾನ ಗೆಲ್ಲುತ್ತದೆ. ಮತ್ತೆ ನಮ್ಮ ಸರ್ಕಾರ ಆಡಳಿತಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಮಕ್ಕಳಿಗೆ ಸಮವಸ್ತ್ರ, ಶೂ, ಸಾಕ್ಸ್ ನೀಡುತ್ತೇವೆ: ಸಿಎಂ

ಇದಕ್ಕೂ ಮೊದಲು ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಕಳೆದ ಎರಡು ದಿನಗಳ ಹಿಂದೆ ಕೆರೂರು ಗುಂಪು ಘರ್ಷಣೆ ಪ್ರಕರಣದಲ್ಲಿ ಚೂರಿ ಇರಿತಕ್ಕೆ ಒಳಗಾದ ಹಿಂದೂ ಯುವಕರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು. ಗೋಪಾಲ ನಗರದ ಆಸ್ಪತ್ರೆಯಲ್ಲಿ ಮತ್ತೋರ್ವ ಚಿಕಿತ್ಸೆ ಪಡೆಯುತ್ತಿದ್ದು, ಆತನನ್ನೂ ಭೇಟಿ ಮಾಡಿದರು. ಗಾಯಗೊಂಡಿದ್ದವರಿಗೆ ಸರ್ಕಾರದಿಂದ ತಲಾ 50 ಸಾವಿರ ರೂಪಾಯಿಗಳ ಪರಿಹಾರ ಧನದ ಚೆಕ್ ವಿತರಣೆ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.