ಬಾಗಲಕೋಟೆ : 500 ರೂ.ಗೆ ಚಿಲ್ಲರೆ ಕೆಳುವ ನೆಪದಲ್ಲಿ ಸಹಕಾರಿ ಸಂಘವೊಂದಕ್ಕೆ ನುಗ್ಗಿದ ಇಬ್ಬರು ಅನಾಮಿಕ ವ್ಯಕ್ತಿಗಳು, ಮಹಿಳಾ ಸಿಬ್ಬಂದಿಯನ್ನ ವಂಚಿಸಿ ಡ್ರಾದಲ್ಲಿದ್ದ 50 ಸಾವಿರ ರೂ.ಗಳನ್ನು ಕ್ಷಣಾರ್ಧದಲ್ಲಿ ದೋಚಿ ಪರಾರಿಯಾದ ಘಟನೆ ಜಿಲ್ಲೆಯ ರಬಕವಿ - ಬನಹಟ್ಟಿ ಪಟ್ಟಣದಲ್ಲಿ ಜರುಗಿದೆ.
ಹೌದು ಸೋಮವಾರ ಪೇಟೆಯಲ್ಲಿರುವ ಜನಧನ ಸೌಹಾರ್ದ ಸಂಘದಲ್ಲಿ ಮಧ್ಯಾಹ್ನ 3 ಗಂಟೆ ಸುಮಾರಿಗೆ ಇಬ್ಬರು ಅನಾಮಿಕ ವ್ಯಕ್ತಿಗಳು ಬೈಕ್ ಮೇಲೆ ಬಂದು ಸಂಘದಲ್ಲಿ ಮಹಿಳಾ ಸಿಬ್ಬಂದಿಯೊಬ್ಬರು ಮಾತ್ರ ಇದ್ದದ್ದನ್ನು ಗಮನಿಸಿ ಚಿಲ್ಲರೆ ಕೇಳುವ ನೆಪದಲ್ಲಿ ಇಬ್ಬರಲ್ಲಿಯೇ ಗದ್ದಲ ಉಂಟು ಮಾಡಿದ್ದಾರೆ. ನಂತರ ಸಂಘದ ಸಿಬ್ಬಂದಿ ಚಿಲ್ಲರೆಯಿಲ್ಲವೆಂದು ಸ್ಪಷ್ಟವಾಗಿ ತಿಳಿಸಿದರೂ ಕೊನೆಗೆ 100 ರೂ.ಗೆ ಚಿಲ್ಲರೆ ನೀಡಿ ಎಂದು ಮಹಿಳಾ ಸಿಬ್ಬಂದಿ ಯನ್ನು ಪೀಡಿಸಿದ್ದಾರೆ. ಓರ್ವ ತಿಳಿಯದಂತೆ ಅನ್ಯ ಭಾಷೆ ಮಾತನಾಡುತ್ತ ಗೊಂದಲ ಸೃಷ್ಟಿಸಿದ್ದಾನೆ. ಮತ್ತೋರ್ವ ಸಿಬ್ಬಂದಿಯೊಂದಿಗೆ ಮಾತಿಗಿಳಿದಿದ್ದಾನೆ. ಏಕಾಏಕಿ ಡ್ರಾ ದಲ್ಲಿದ್ದ 500 ರೂ.ಗಳ ಕಂತೆಯಿರುವ ಬಂಡಲ್‌ವೊಂದನ್ನು ಕ್ಷಣಾರ್ಧದಲ್ಲಿ ಎತ್ತಿಕೊಂಡು ಇಬ್ಬರೂ ಬೈಕ್ ಏರಿ ಪರಾರಿಯಾಗಿದ್ದಾರೆ. ಈ ದೃಶ್ಯ ಸಿಸಿಟಿವಿ ಯಲ್ಲಿ ಸೆರೆಯಾಗಿದ್ದು, ಈ ಖತರ್ನಾಕ್ ಕಳ್ಳರನ್ನ ಹಿಡಿಯಲು ಬನಹಟ್ಟಿ ಪೊಲೀಸರು ಬಲೆ ಬೀಸಿದ್ದಾರೆ.
ಓದಿ : 'ಪ್ಲಾಸ್ಮಾ ಫೆರೋಸಿಸ್ ಚಿಕಿತ್ಸೆ': ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ಮಹಿಳೆಗೆ ಜೀವದಾನ