ಬಾಗಲಕೋಟೆ: ಕ್ಲಸ್ಟರ್ ಮಟ್ಟದ ಶಾಲಾ ಕ್ರೀಡಾಕೂಟದಲ್ಲಿ ಗಲಾಟೆ ಉಂಟಾಗಿ ಕಲ್ಲು ತೂರಾಟ ನಡೆದು ಇಬ್ಬರು ಗಾಯಗೊಂಡಿರುವ ಘಟನೆ ಬಾದಾಮಿ ತಾಲೂಕಿನ ರೆಡ್ಡೇರ ತಿಮ್ಮಾಪೂರ ಗ್ರಾಮದಲ್ಲಿ ನಡೆದಿದೆ. ಗಲಾಟೆ ಗ್ರಾಮದ ಗುರುದೇವ ಆತ್ಮಾನಂದ ಪ್ರೌಢಶಾಲೆ ಆವರಣದಲ್ಲಿ ನಡೆದಿದೆ. ಚಿಂಚಲಕಟ್ಟಿ ಮತ್ತು ನೀರಲಕೇರಿ ಗ್ರಾಮದ ಯುವಕರ ನಡುವೆ ಕ್ರೀಡಾ ಕೂಟ ನಡೆದಿರುವ ಸಮಯದಲ್ಲಿ ಮಾತಿನ ಚಕಮಕಿ ನಡೆದು ಗಲಾಟೆಗೆ ಕಾರಣವಾಯಿತು.
ಎರಡು ಗ್ರಾಮದ ಯುವಕರು ಪರಸ್ಪರ ಮಾತಿಗೆ ಮಾತು ಬೆಳೆದು ಗಲಾಟೆ ಮಾಡಿಕೊಂಡಿದ್ದಾರೆ. ಕಲ್ಲು ತೂರಾಟದಲ್ಲಿ ನೀರಲಕೇರಿ ಗ್ರಾಮದ ಸಿದ್ದಪ್ಪ ಮತ್ತು ರವಿ ಎಂಬುವವರ ತಲೆಗೆ ಗಾಯವಾಗಿ ರಕ್ತ ಸಾವ್ರ ಉಂಟಾಯಿತು. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಬಾದಾಮಿ ಸಿಪಿಐ ಕರಿಯಪ್ಪ ಬನ್ನೆ ಭೇಟಿ ನೀಡಿ ಪರಿಶೀಲನೆ ನಡೆಸಿ ಗಲಾಟೆಯನ್ನು ಹತೋಟಿಗೆ ತಂದರು. ಕೆರೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಎರಡು ಕಡೆಯಿಂದ ಪ್ರಕರಣ ದಾಖಲಿಸಿ, ತನಿಖೆ ನಡೆಸಲಾಗುತ್ತದೆ.
ಇದನ್ನೂ ಓದಿ : ಸ್ಟಾಪ್ ದಿಸ್ ನಾನ್ಸೆನ್ಸ್: ಸಂಸದರಿಗೆ ತಿರುಗೇಟು ನೀಡಿದ ಎಸ್ಪಿ ಧರಣಿ ದೇವಿ