ETV Bharat / state

ಬೆಂಬಲ ಬೆಲೆಯಲ್ಲಿ ಕಡಲೆಕಾಳು ಖರೀದಿಗೆ 5 ಕೇಂದ್ರಗಳಲ್ಲಿ ನೋಂದಣಿ ಪ್ರಕ್ರಿಯೆ ಪ್ರಾರಂಭ : ರಾಮಚಂದ್ರನ್ - undefined

ಕೇಂದ್ರ ಸರಕಾರದ ಬೆಂಬಲ ಬೆಲೆ ಯೋಜನೆಯಡಿ ಕಡಲೆಕಾಳಿಗೆ ಪ್ರತಿ ಕ್ವಿಂಟಲ್‍ಗೆ 4,650 ರೂ.ನಂತೆ ಖರೀದಿಸಲಾಗುತ್ತಿದ್ದು, ರೈತರು ಇದರ ಸದುಪಯೋಗವನ್ನು ಪಡೆಯಬೇಕೆಂದು ಬಾಗಲಕೋಟೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಬಾಗಲಕೋಟೆ ಜಿಲ್ಲಾಧಿಕಾರಿ ತಿ
author img

By

Published : May 17, 2019, 5:51 AM IST

ಬಾಗಲಕೋಟೆ: ಕೇಂದ್ರ ಸರಕಾರದ ಬೆಂಬಲ ಬೆಲೆ ಯೋಜನೆಯಡಿ ಕಡಲೆಕಾಳನ್ನು ಪ್ರತಿ ಕ್ವಿಂಟಲ್‍ಗೆ 4,650 ರೂ.ನಂತೆ ಪ್ರತಿ ಎಕರೆಗೆ 3 ಕ್ವಿಂಟಲ್‍ನಂತೆ ಗರಿಷ್ಠ 10 ಕ್ವಿಂಟಲ್ ಖರೀದಿಸಲಾಗುತ್ತಿದ್ದು, ನೊಂದಣಿಗೆ ಮೇ 28 ಕೊನೆ ದಿನವಾಗಿದೆ ಎಂದು ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ತಿಳಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಜಿಲ್ಲಾ ಟಾಸ್ಕ್​ಪೋರ್ಸ್​ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ, ಅವರು ಬಾಗಲಕೋಟೆ ಎಪಿಎಂಸಿ ಪ್ರಾಂಗಣ, ಹುನಗುಂದ ಎಪಿಎಂಸಿ ಆವರಣ, ಸೂಳೇಬಾವಿ ಎಫ್​ಪಿಓ ಆವರಣ, ಸಾವಳಗಿ ಪಿಕೆಪಿಎಸ್ ಆವರಣ ಹಾಗೂ ತೊದಲಬಾಗಿ ಎಫ್ಎಚ್​ಸಿಎಲ್ ಆವರಣದಲ್ಲಿ ತೊಗರಿಕಾಳು ಖರೀದಿಗೆ ರೈತರಿಂದ ನೊಂದಣಿ ಮಾಡಿಕೊಳ್ಳಲಾಗುತ್ತಿದೆ ಎಂದರು.

ಕಡಳೆಕಾಳು ಖರೀದಿಗೆ ಮೇ 28 ಕೊನೆ ದಿನವಾಗಿದ್ದು, ರೈತರು ನೊಂದಣಿ ಸಮಯದಲ್ಲಿ ಕಂದಾಯ ಇಲಾಖೆಯಿಂದ ಪಹಣಿ ಪತ್ರ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‍ಬುಕ್ ಝರಾಕ್ಸ್ ಪ್ರತಿ, ಬೆಳೆ ಪ್ರಮಾಣ ಪತ್ರ ಹಾಗೂ ಮೊಬೈಲ್ ನಂಬರ್ ದಾಖಲೆಗಳನ್ನು ತಪ್ಪದೇ ತರಬೇಕು. ಕಡಳೆಕಾಳು ಖರೀದಿಯನ್ನು ಜೂನ್ 7 ವರೆಗೆ ಖರೀದಿ ಮಾಡಲಾಗುತ್ತಿದೆ. ಖರೀದಿಯನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ ಶಾಖೆ, ಬಾಗಲಕೋಟೆ ಅವರು ಖರೀದಿಸುತ್ತಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳು ರೈತ ಭಾಂದವರಲ್ಲಿ ಕೋರಿದ್ದಾರೆ.

ಖರೀದಿ ಪ್ರಕ್ರಿಯೆ ಬೆಳಿಗ್ಗೆ 8 ರಿಂದ ಸಂಜೆ 6 ಗಂಟೆವರೆಗೆ ನಡೆಯಲಿದ್ದು, ಕಡಲೆಕಾಳನ್ನು ಚೆನ್ನಾಗಿ ಒಣಗಿಸಿ ತರಬೇಕು. ಕಾಳು ಕ್ರಿಮಿ, ಕೀಟಗಳಿಂದ ಕೂಡಿರಬಾರದು. ಕಸಕಡ್ಡಿಗಳನ್ನು ಸಾಣಿಗೆಯಿಂದ ಸ್ವಚ್ಛಗೊಳಿಸಬೇಕು. ಎಫ್.ಎ.ಕ್ಯೂ ಗುಣಮಟ್ಟದ ಕಡಲೆಕಾಳನ್ನು ಮಾತ್ರ ಖರೀದಿ ಮಾಡಲಾಗುತ್ತಿದೆ. ಖರೀದಿ ಕೇಂದ್ರದಲ್ಲಿ ಹುಟ್ಟುವಳಿಯ ಹಸ್ತಾಂತರವನ್ನು ಸಾಗಾಣಿಕೆ ಗುತ್ತಿಗೆದಾರರು ನಿರ್ವಹಿಸುವುದು, ತೂಕದಲ್ಲಿ ಅನಧಿಕೃತವಾಗಿ ಹಮಾಲರ ಫೀ, ತೂಕದ ಫೀ, ಸೂಟು, ಕಾಳು ಕೊಡುವುದು ಮತ್ತು ಪಡೆಯುವುದು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಯಾವುದೇ ಸಂದರ್ಭದಲ್ಲಿ ರೈತರು ಮಧ್ಯವರ್ತಿಗಳ ಮೊರೆ ಹೋಗಬಾರದು ಇದರ ಉಪಯೋಗವನ್ನು ರೈತರೇ ನೇರವಾಗಿ ಪಡೆಯಬೇಕು. ಸಮಸ್ಯೆಗಳಿದ್ದಲ್ಲಿ ಉಪವಿಭಾಗಾಧಿಕಾರಿಗಳು, ತಹಶೀಲ್ದಾರರು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಆಯಾ ಎಪಿಎಂಸಿ ಕಚೇರಿಗಳಲ್ಲಿ ಮಾರ್ಕ್​ಫೆಡ್ ಅಧಿಕಾರಿಗಳ ಮೊಬೈಲ್ ನಂಬರಿಗೆ ಕರೆ ಮಾಡಬಹುದು ಎಂದರು.

ಸಭೆಯಲ್ಲಿ ಜಿ.ಪಂ ಸಿಇಒ ಗಂಗೂಬಾಯಿ ಮಾನಕರ, ಆಹಾರ ಇಲಾಖೆಯ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ, ಸಹಕಾರ ಇಲಾಖೆಯ ಉಪನಿಬಂಧಕ ಕಳಸನ್ನವರ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರಾಜಶೇಖರ ಬಿಜಾಪೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.

sample description

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.