ಬಾಗಲಕೋಟೆ : ಕುಡಿತಕ್ಕೆ ದಾಸರಾಗಿದ್ದವರಿಗೆ ಮದ್ಯಪಾನದಿಂದ ದೂರವಿರಿಸಲು ಮದ್ಯವರ್ಜನ ಶಿಬಿರ ಹಮ್ಮಿಕೊಳ್ಳಲಾಗಿದೆ. ಸುಮಾರು 80 ಕ್ಕೂ ಅಧಿಕ ಮದ್ಯ ವ್ಯಸನ ಶಿಬಿರಾರ್ಥಿಗಳು ಈ ಸಂಬಂಧ ತರಬೇತಿ ಪಡೆದು ಅದರಿಂದ ವಿಮುಕ್ತರಾಗಿದ್ದಾರೆ. ಈ ಮೂಲಕ ಅವರು ಹೊಸ ಜೀವನಕ್ಕೆ ಅಣಿಯಾಗಿದ್ದಾರೆ. ಅಂತಹವರಿಗೆ ಅವರ ಕುಟುಂಬದವರನ್ನ ಕರೆಯಿಸಿ ಮರು ಮದುವೆ ಮಾಡಿಸಿ ಸುಗಮ ಬಾಳು ನಡೆಸಲು ಅವಕಾಶ ಕಲ್ಪಿಸಲಾಯಿತು.
7 ದಿನದ ತರಬೇತಿಯ ಕೊನೆ ದಿನವಾದ ಇಂದು ಮದ್ಯದ ಕುಡಿತದಿಂದ ವಿಮುಖರಾದ ಶಿಬಿರಾರ್ಥಿಗಳಿಗೆ ಅವರ ಕುಟುಂಬದವರನ್ನು ಕರೆಯಿಸಿ, ನವ ವಧುವರರಂತೆ ಶೃಂಗಾರಗೊಳಿಸಿ, ಮತ್ತೊಮ್ಮೆ ಮರು ವಿವಾಹ ಮಾಡಿಸಿದರು. ಕುಡಿತದಿಂದ ತಮ್ಮ ಪತ್ನಿಯವರನ್ನು ನಿಂದನೆ ಮಾಡುವ ಪುರುಷರು ಹಾಗೂ ಬೇಸರವಾಗಿರುವ ಪತ್ನಿಯರಿಗೆ ಪರಸ್ಪರ ಹೂಸ ಸಂಬಂಧ ಭಾಂದವ್ಯದ ಬೇಸುಗೆ ಬೇಸೆಯುವ ಮೂಲಕ ಗಮನ ಸೆಳೆಯಲಾಯಿತು.
ಗುಳೇದಗುಡ್ಡ ಕೆಂದೂರ ಸಂಸ್ಥಾನ ಮಠದ ಒಪ್ಪತ್ತೇಶ್ವರ ಮಹಾಸ್ವಾಮಿಗಳು, ಮರು ಮದುವೆ ಆಗಿರುವ ವಧು ವರರಿಗೆ ಆಶೀರ್ವಚನ ನೀಡಿ, ಸಾಮೂಹಿಕ ವಿವಾಹ ಎಂಬಂತೆ ಭಾಸ ಆಗುತ್ತದೆ ಎಂದು ಸಂತಸ ಹಂಚಿಕೊಂಡರು.