ಬಾಗಲಕೋಟೆ : ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಭೀಕರ ಮಳೆಯಾಗುತ್ತಿರುವ ಹಿನ್ನೆಲೆ ನೀರಿನ ಹರಿವು ಹೆಚ್ಚಾಗಿದೆ. ಈ ಮಧ್ಯೆ ಬೈಕ್ ಸವಾರನೋರ್ವ ನೀರಿನ ರಭಸಕ್ಕೆ ಸಿಲುಕಿ ತನ್ನ ಬೈಕ್ ಉಳಿಸಿಕೊಳ್ಳಲು ಹರಸಾಹಸ ಪಟ್ಟಿದ್ದಾನೆ.
ಹುನಗುಂದ ತಾಲೂಕಿನಾದ್ಯಂತ ಉಂಟಾದ ವರುಣನ ಅಬ್ಬರಕ್ಕೆ ಮಳೆ ನೀರು, ಮನೆ ಹಾಗೂ ಜಮೀನುಗಳಿಗೆ ನುಗ್ಗಿದ್ದು, ಸಾಕಷ್ಟು ಹಾನಿ ಉಂಟಾಗಿದೆ. ಹುನಗುಂದ ಪಟ್ಟಣದ ಬಳಿಯ ಅಮರಾತಿ ಗ್ರಾಮಕ್ಕೆ ತೆರಳುವ ಬೈ ಪಾಸ್ ಸೇತುವೆ ಸಂಪೂರ್ಣ ಮುಳಗುಡೆಯಾಗಿದೆ. ಈ ಸಮಯದಲ್ಲಿ ಅಲ್ಲಿ ನಿಂತಿದ್ದ ಟ್ರ್ಯಾಕ್ಟರ್ ಸಹ ಮುಳುಗಿದೆ.
ಜಿಲ್ಲೆಯಲ್ಲಿನ ಎಲ್ಲಾ ತಾಲೂಕುಗಳಲ್ಲಿಯೂ ಗರಿಷ್ಠ ಪ್ರಮಾಣದಲ್ಲಿ ಮಳೆಯಾಗಿದ್ದು, ಕೆಲ ಗ್ರಾಮದಲ್ಲಿನ ಜನರ ಜೀವನ ಅಸ್ತವ್ಯಸ್ಥವಾಗಿದೆ. ಮನೆ ಹಾಗೂ ಜಮೀನುಗಳಿಗೆ ನೀರು ನುಗ್ಗಿದ ಪರಿಣಾಮ, ಮನೆಯ ಮಹಡಿ ಮೇಲೆ ವಾಸಿಸುವಂತಾಗಿದೆ ಕೆಲವರ ಸ್ಥಿತಿ.