ETV Bharat / state

ಅಕ್ಕ ತಂಗಿ ಜಲಪಾತಕ್ಕೆ ಬಂತು ಜೀವಕಳೆ.. ಅಗಸ್ತ್ಯ ಹೊಂಡ ಭರ್ತಿ - ಅಕ್ಕತಂಗಿ ಜಲಪಾತ

ಬಾಗಲಕೋಟೆ ಸುತ್ತ ಕೆಲ ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಇಲ್ಲಿನ ಅಕ್ಕ ತಂಗಿ ಜಲಪಾತ ಉಕ್ಕಿ ಹರಿಯುತ್ತಿದೆ. ಬೇಸಿಗೆಯಲ್ಲಿ ನೀರಿಲ್ಲದೇ ಒಣಗುವ ಈ ಜಲಪಾತಕ್ಕೀಗ ಮರಜೀವ ಬಂದಂತಾಗಿದೆ.

public-rushed-to-see-beauty-of-akka-thangi-falls
ಮಳೆಯಿಂದ ಅಕ್ಕ ತಂಗಿ ಜಲಪಾತಕ್ಕೆ ಬಂತು ಜೀವಕಳೆ
author img

By

Published : Sep 7, 2021, 11:14 AM IST

ಬಾಗಲಕೋಟೆ: ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಸತತ ಮಳೆಯಾಗುತ್ತಿರುವ ಪರಿಣಾಮ ಐತಿಹಾಸಿಕ ಬಾದಾಮಿ ಅಕ್ಕ ತಂಗಿ ಜಲಪಾತ ಕಣ್ಮನ ಸೆಳೆಯುತ್ತಿದೆ. ಅಗಸ್ತ್ಯ ತೀರ್ಥ ಹೊಂಡ ಬಳಿ ಬೆಟ್ಟದ ಮೇಲಿಂದ‌ ನೀರು ಧುಮ್ಮಿಕ್ಕುತ್ತಿರುವುದು ಪ್ರವಾಸಿಗರನ್ನು ಆಕರ್ಷಿಸುವಂತೆ ಮಾಡಿದೆ.

ಬೆಟ್ಟದ ಪಕ್ಕದಲ್ಲಿಯೇ ಭೂತನಾಥ ದೇವಾಲಯವಿದ್ದು, ಪ್ರಕೃತಿಯ ಸೌಂದರ್ಯ ಮಧ್ಯೆ ಇರುವ ಬೆಟ್ಟದಿಂದ ನೀರು ಹರಿದು ಬರುವುದನ್ನ ಕಣ್ತುಂಬಿಕೊಳ್ಳಲು ಸ್ಥಳೀಯರ ದಂಡು ಆಗಮಿಸುತ್ತಿದೆ.

ಮಳೆಯಿಂದ ಅಕ್ಕ ತಂಗಿ ಜಲಪಾತಕ್ಕೆ ಬಂತು ಜೀವಕಳೆ

ಮಳೆ ನಡುವೆ ಪ್ರಕೃತಿ ಸೌಂದರ್ಯ ಹೆಚ್ಚಿಸಿರೋ ಅಕ್ಕ ತಂಗಿ ಕಿರು ಜಲಪಾತದಿಂದ ಅಗಸ್ತ್ಯ ತೀರ್ಥ ಕೆರೆಯು ತುಂಬಿ ಹರಿಯುತ್ತಿದೆ. ಎರಡು ದಿನ ನಿರಂತರ ಮಳೆಯಿಂದ ಮಿನಿ ಜಲಪಾತ ಭೋರ್ಗರೆಯುತ್ತಿರುವ ದೃಶ್ಯ ಗಮನ ಸೆಳೆಯುತ್ತಿದೆ. ಬಾದಾಮಿ ಚಾಲುಕ್ಯರ ಆಡಳಿತದ ಸಮಯದಲ್ಲಿ ಇರುವ ಸ್ಮಾರಕಗಳ ವೀಕ್ಷಣೆಗೆ ಬರುತ್ತಿರುವ ಪ್ರವಾಸಿಗರ ಮನ ಸೆಳೆಯುತ್ತಿದೆ.

ಓದಿ: ಅವಸಾನದತ್ತ ಸಿದ್ದಾಪುರದ ಮಹಿಳಾ ಸತ್ಯಾಗ್ರಹ ಸ್ಮಾರಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.