ETV Bharat / state

ಕಾನೂನು ಉಲ್ಲಂಘಿಸಿ ಬಾರ್ ತೆರೆಯುವುದಕ್ಕೆ ಹುನ್ನಾರ ಆರೋಪ... ಮಹಿಳೆಯರಿಂದ ಆಕ್ರೋಶ - ಕಾನೂನು ಉಲ್ಲಂಘನೆ

ಕಲಾದಗಿ ಗ್ರಾಮದಲ್ಲಿ ಈಗಾಗಲೇ ಮೂರು ಬಾರ್ ಇವೆ. ಈಗ ನಾಲ್ಕನೇ ಅಂಗಡಿ ಮುಧೋಳ ಪಟ್ಟಣದಿಂದ ಈ ಸ್ಥಳಕ್ಕೆ ಸ್ಥಳಾಂತರಿಸುವ ಹುನ್ನಾರ ನಡೆದಿರುವುದು ಮಹಿಳೆಯರ ಆಕ್ರೋಶಕ್ಕೆ ಕಾರಣವಾಗಿದೆ.

ಕಾನೂನು ಉಲ್ಲಂಘನೆ ಮಾಡಿ ಬಾರ್ ತೆರೆಯುವುದಕ್ಕೆ ಸಿದ್ಧತೆ
author img

By

Published : Jul 12, 2019, 12:48 PM IST

ಬಾಗಲಕೋಟೆ: ಹೆದ್ದಾರಿಯಿಂದ ಸುಮಾರು 250 ಮೀಟರ್ ದೂರದಲ್ಲಿ ಬಾರ್ ತೆರೆಯುವಂತೆ ಕೋರ್ಟ್​ ಆದೇಶಿಸಿದೆ. ಆದರೆ ಈ ಕಾನೂನು ಉಲ್ಲಂಘಿಸಿ, ರಾಜಕೀಯ ಒತ್ತಡದಿಂದ ಕೇವಲ 100 ಮೀಟರ್ ಒಳಗೆ ಬಾರ್ ತೆರೆಯುವುದಕ್ಕೆ ಹುನ್ನಾರ ಜಿಲ್ಲೆಯ ಕಲಾದಗಿ ಗ್ರಾಮದಲ್ಲಿ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಸುಮಾರು 20 ಸಾವಿರ ಜನಸಂಖ್ಯೆ ಇರುವ ಕಲಾದಗಿ ಗ್ರಾಮದಲ್ಲಿ ಈಗಾಗಲೇ ಮೂರು ಬಾರ್ ಇವೆ. ಈಗ ನಾಲ್ಕನೇ ಬಾರ್​​ ಮುಧೋಳ ಪಟ್ಟಣದಿಂದ ಈ ಸ್ಥಳಕ್ಕೆ ಸ್ಥಳಾಂತರಿಸುವ ಹುನ್ನಾರ ನಡೆದಿದೆ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾನೂನು ಉಲ್ಲಂಘನೆ ಮಾಡಿ ಬಾರ್ ತೆರೆಯುವುದಕ್ಕೆ ಸಿದ್ಧತೆ

ಸಕ್ಕರೆ ಸಚಿವ ಆರ್.ಬಿ. ತಿಮ್ಮಾಪೂರ ಅವರ ಆಪ್ತರಿಗೆ ಸೇರಿದೆ ಎನ್ನಲಾಗ್ತಿರುವ ಬಾರ್ ಅಂಗಡಿ ಮುಧೋಳ ಪಟ್ಟಣದಿಂದ ಇಲ್ಲಿ ಸ್ಥಳಾಂತರ ಮಾಡುವುದಕ್ಕೆ ಸಿದ್ಧತೆ ನಡೆಯುತ್ತಿದೆ. ಈ ಬಗ್ಗೆ ಸಚಿವರು ಅಧಿಕಾರಿಗಳ ಮೇಲೆ ಒತ್ತಡ ತರುತ್ತಿದ್ದಾರೆ ಎನ್ನಲಾಗಿದೆ. ಬೆಳಗಾವಿ-ರಾಯಚೂರರು ಹೆದ್ದಾರಿಯಿಂದ ಕೇವಲ ನೂರು ಮೀಟರ್ ದೂರದಲ್ಲಿ ಕಟ್ಟಡ ನಿರ್ಮಿಸಲಾಗಿದೆ.

ಇನ್ನು ಅಬಕಾರಿ ಇಲಾಖೆ ಅಧಿಕಾರಿಗಳ ಅಂತಿಮ ಮುದ್ರೆ ಬಿದ್ದರೆ ಶೀಘ್ರದಲ್ಲೇ ಇಲ್ಲಿಯೇ ಮತ್ತೊಂದು ಬಾರ್ ತಲೆ ಎತ್ತಲಿದೆ. ಈ ಸ್ಥಳದ ಬಲಭಾಗದ ಕೂಗು ಅಳತೆಯಲ್ಲಿ ಸಾಯಿ ಮಂದಿರ ಇದ್ದು, ಎಡಭಾಗದ ಸ್ವಲ್ಪ ದೂರದಲ್ಲಿ ಶಾಲಾ- ಕಾಲೇಜ್ ಇವೆ. ಈಗಾಗಲೇ ಮೂರು ಬಾರ್ ಇರುವ ಈ ಚಿಕ್ಕ ಗ್ರಾಮದಲ್ಲಿ ಮತ್ತೊಂದು ಬಾರ್ ಆದಲ್ಲಿ, ತೋಟಗಾರಿಕೆ ಬೆಳೆಗೆ ಪ್ರಮುಖವಾಗಿರುವ ಕಲಾದಗಿ ಗ್ರಾಮದಲ್ಲಿ ದುಡಿದ ಹಣ, ಬಾರ್​ಗೆ ಹಾಕುವಂತಾಗಿ ಇಡೀ ಕುಟುಂಬ ಬೀದಿ ಪಾಲಾಗಲಿದೆ ಎಂದು ಆಕ್ರೋಶ ಹೊರ ಬಂದಿದೆ.

ಗ್ರಾಮೀಣ ಭಾಗದಲ್ಲಿ ಬಾರ್​ಗಳನ್ನು ತೆರೆವುಗೊಳಿಸುವಂತೆ ಮಹಿಳಾ ಸಂಘಟನೆ ಪ್ರತಿಭಟನೆ ನಡೆಸುತ್ತಿದ್ದರೂ, ಈಗ ಬಾರ್ ತೆರೆಯುತ್ತಿರುವದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಅಬಕಾರಿ ಇಲಾಖೆಯವರು ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳದೆ ಇದ್ದಲ್ಲಿ, ಜಿಲ್ಲಾಡಳಿತ ಕಚೇರಿ ಎದುರು ಉಗ್ರ ಹೋರಾಟ ಮಾಡುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.

Intro:AnchorBody:Exclusive

ಹೆದ್ದಾರಿ ಯಿಂದ ಸುಮಾರು 250 ಮೀಟರ್ ದೂರದಲ್ಲಿ ಬಾರ್ ಅಂಗಡಿ ತೆರೆಯುವಂತೆ ಆದೇಶ ಮಾಡಲಾಗಿದೆ.ಆದರೆ ಇಂತಹ ಕಾನೂನು ಉಲ್ಲಂಘನೆ ಮಾಡಿ,ರಾಜಕೀಯ ಒತ್ತಡ ದಿಂದ ಕೇವಲ ನೂರು ಮೀಟರ್ ದಲ್ಲಿ ಬಾರ್ ಅಂಗಡಿ ತೆರೆಯುವುದಕ್ಕೆ ಸಿದ್ದತೆ ಬಾಗಲಕೋಟೆ ಜಿಲ್ಲೆಯ ಕಲಾದಗಿ ಗ್ರಾಮದಲ್ಲಿ ನಡೆಯುತ್ತಿದೆ.
ಸುಮಾರು 20 ಸಾವಿರ ಜನಸಂಖ್ಯೆ ಇರುವ ಕಲಾದಗಿ ಗ್ರಾಮದಲ್ಲಿ ಈಗಾಗಲೇ ಮೂರು ಬಾರ್ ಅಂಗಡಿಗಳು ಇವೆ..ಈಗ ನಾಲ್ಕನೇ ಅಂಗಡಿ ಮುಧೋಳ ಪಟ್ಟಣದಿಂದ ಈ ಸ್ಥಳಕ್ಕೆ ಸ್ಥಳಾಂತರ ಮಾಡುವ ಹುನ್ನಾರ ನಡೆದಿದ್ದು,ಮಹಿಳೆಯರ ಆಕ್ರೋಶಕ್ಕೆ ಕಾರಣವಾಗಿದೆ.
ಸಕ್ಕರೆ ಸಚಿವ ಆರ್.ಬಿ.ತಿಮ್ಮಾಪೂರ ಅವರ ಆಪ್ತರಿಗೆ ಸೇರಿರುವ ಬಾರ್ ಅಂಗಡಿ ಮುಧೋಳ ಪಟ್ಟಣದಿಂದ ಇಲ್ಲಿ ಸ್ಥಳಾಂತರ ಮಾಡುವುದಕ್ಕೆ ಸಿದ್ದತೆ ನಡೆಯುತ್ತಿದೆ.ಈ ಬಗ್ಗೆ ಸಚಿವರು ಅಧಿಕಾರಿಗಳ ಮೇಲೆ ಒತ್ತಡ ತರುತ್ತಿದ್ದಾರೆ.ಬೆಳಗಾವಿ- ರಾಯಚೂರ ಹೆದ್ದಾರಿ ಯಿಂದ ಕೇವಲ ನೂರು ಮೀಟರ್ ದೂರದಲ್ಲಿ ಕಟ್ಟಡ ತಯಾರ ಆಗಿದೆ.ಇನ್ನೂ ಅಬಕಾರಿ ಇಲಾಖೆ ಅಧಿಕಾರಿಗಳ ಅಂತಿಮ ಮುದ್ರೆ ಬಿದ್ದರೆ ಶೀಘ್ರದಲ್ಲೇ ಇಲ್ಲಿಯೇ ಮತ್ತೊಂದು ಬಾರ್ ತಲೆ ಎತ್ತಲಿದೆ.ಈ ಸ್ಥಳದ ಬಲಭಾಗದ ಕೂಗು ಅಳತೆಯಲ್ಲಿ ಸಾಯಿ ಮಂದಿರ ಇದ್ದು,ಎಡಭಾಗದಲ್ಲಿ ಸ್ವಲ್ಪ ದೂರದಲ್ಲಿ ಶಾಲಾ ಕಾಲೇಜ್ ಇದೆ.ಈಗಾಗಲೇ ಮೂರು ಬಾರ್ ಗಳು ಇದ್ದ ಈ ಚಿಕ್ಕ ಗ್ರಾಮದಲ್ಲಿ ಮತ್ತೊಂದು ಬಾರ್ ಆದಲ್ಲಿ,ತೋಟಗಾರಿಕೆ ಬೆಳೆಗೆ ಪ್ರಮುಖವಾಗಿರುವ ಕಲಾದಗಿ ಗ್ರಾಮದಲ್ಲಿ ದುಡಿದ ಹಣ,ಬಾರ್ ಹಾಕುವಂತಾಗಿ ಇಡೀ ಕುಟುಂಬ ಬೀದಿ ಪಾಲಾಗಲಿದೆ.ಗ್ರಾಮೀಣ ಭಾಗದಲ್ಲಿ ಬಾರ್ ಗಳು ತೆರೆವು ಗೊಳಿಸುವಂತೆ ಮಹಿಳಾ ಸಂಘಟನೆ ಯವರು ಪ್ರತಿಭಟನೆ ನಡೆಸುತ್ತಿದ್ದರೂ,ಈಗ ಬಾರ್ ತೆರೆಯುತ್ತಿರುವದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.ಅಬಕಾರಿ ಇಲಾಖೆಯವರು ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳದೆ ಇದ್ದಲ್ಲಿ,ಜಿಲ್ಲಾಡಳಿತ ಕಚೇರಿ ಎದುರು ಉಗ್ರ ಸ್ವರೂಪ ಹೋರಾಟ ಮಾಡುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ...Conclusion:ಈ ಟಿವಿ,ಭಾರತ,ಬಾಗಲಕೋಟೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.