ಬಾಗಲಕೋಟೆ: ಡೆತ್ನೋಟ್ ಬರೆದಿಟ್ಟು ಪಿಕೆಪಿಎಸ್ ಕಾರ್ಯದರ್ಶಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಇಲಾಳ ಗ್ರಾಮದ ನಿವಾಸಿ ಚಂದ್ರಶೇಖರ ಹೊರಪೇಟ ಮೃತರು. ಈ ಹಿಂದೆ ಪಿಕೆಪಿಎಸ್ನಲ್ಲಿ ಅವ್ಯವಹಾರ ನಡೆದಿರೋ ಆರೋಪ ಕೇಳಿ ಬಂದಿತ್ತು. ಆರೋಪದ ಬೆನ್ನಲ್ಲೇ ಬಾಗಲಕೋಟೆ ಡಿಸಿಸಿ ಬ್ಯಾಂಕ್ನಿಂದ ತನಿಖೆ ಆರಂಭಿಸಲಾಗಿತ್ತು.
ಈ ನಡುವೆ ಡೆತ್ನೋಟ್ ಅನ್ನು ಕೈಯಲ್ಲಿ ಹಿಡಿದುಕೊಂಡು ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪ್ರಕರಣ ದಾಖಲಿಸಿಕೊಂಡಿರುವ ಸಿಬ್ಬಂದಿ ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು: ಬಾಳೆ ಗಿಡಗಳ ಮಧ್ಯೆ ನವಜಾತ ಶಿಶುವಿನ ಮೃತದೇಹ ಪತ್ತೆ