ಬಾಗಲಕೋಟೆ: ಬೆಂಗಳೂರಿನಲ್ಲಿ ನಡೆದ ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಛಾಯಾಚಿತ್ರ ಪ್ರದರ್ಶನದಲ್ಲಿ ಬಾಗಲಕೋಟೆ ನಗರದ ವಿವಿಧ ಪತ್ರಿಕೆ ಛಾಯಾಚಿತ್ರಕಾರರು ತೆಗೆದಿರುವ ಛಾಯಾಚಿತ್ರಗಳು ಪ್ರದರ್ಶನಗೊಂಡವು.
ಚಿತ್ರ ನಟಿ, ಬಿಜೆಪಿ ನಾಯಕಿ ತಾರಾ ಅನುರಾಧ ಜೊತೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿ ವೀಕ್ಷಿಸಿದರು. ಕರ್ನಾಟಕ ರಾಜ್ಯ ಫೋಟೋ ಜರ್ನಲಿಸ್ಟ್ ಅಸೋಸಿಯೇಶನ್ ವತಿಯಿಂದ ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್‍ನಲ್ಲಿ ಈ ಚಿತ್ರ ಪ್ರದರ್ಶನ ಜರುಗಿತು.
ಈ ಛಾಯಾಚಿತ್ರ ಪ್ರದರ್ಶನದಲ್ಲಿ ಬಾಗಲಕೋಟೆ ಪತ್ರಿಕಾ ಛಾಯಾಗ್ರಾಹಕರಾದ ಚಂದ್ರು ಅಂಬಿಗೇರ, ಸಿಂದೂರ ಜಮಖಂಡಿ, ವಿಠ್ಠಲ್ ಮೂಲಿಮನಿ, ಸಂಗಮೇಶ ಬಡಿಗೇರ, ಮಂಜು ಗೊಡೆಪ್ಪನವರ, ಭೀಮು ಜಮಖಂಡಿ, ಅನಿರುದ್ಧ ಅವರ ಛಾಯಾಚಿತ್ರಗಳನ್ನು ಆಯ್ಕೆ ಮಾಡಿ ಪ್ರದರ್ಶನಕ್ಕಿಡಲಾಗಿತ್ತು.