ಬಾಗಲಕೋಟೆ: ಜಿಲ್ಲೆಯ ಕೃಷ್ಣಾ, ಘಟಪ್ರಭಾ ಹಾಗೂ ಮಲ್ಲಪ್ರಭಾ ನದಿಗಳ ಪ್ರವಾಹದಿಂದ ಗ್ರಾಮದಲ್ಲಿನ ಸ್ಮಾರಕಗಳು ಹಾಗೂ ಸೇತುವೆಗಳು ಮುಳಗಡೆಯಿಂದಾಗಿ ಸಾಕಷ್ಟು ಜನ ತೊಂದರೆಗಿಡಾದರೆ, ಮತ್ತಷ್ಟು ಜನರಿಗೆ ಇದೆ ಪ್ರವಾಸಿ ತಾಣವಾಗಿ ಹೊರಹೊಮ್ಮಿದೆ.
ಹೌದು, ಬಾದಾಮಿ ಚಾಲುಕ್ಯರು ಆಳಿದ ಕಾಲದಲ್ಲಿ ನಿರ್ಮಾಣ ಆಗಿರುವ ಪಟ್ಟದಕಲ್ಲು ಸಂಪೂರ್ಣ ಜಲಾವೃತಗೊಂಡಿದೆ. ಹೀಗೆ ಜಲಾವೃತಗೊಂಡಿರುವ ಕಾಟಾಪೂರ- ಪಟ್ಟದಕಲ್ಲು ನೋಡಲು ಗುಡೂರು, ಬಾದಾಮಿ, ಬಾಗಲಕೋಟೆಯಿಂದ ಜನರು ಬರುತ್ತಿದ್ದಾರೆ. ನೀರಿನ ಒಳಗೆ ಹೋಗಿ ಸೆಲ್ಫಿ , ಫೋಟೋ ತೆಗೆದುಕೊಳ್ಳುವ ಹುಚ್ಚು ಹೆಚ್ಚಾಗುತ್ತಿದೆ.
ಇದರಿಂದ ಪೊಲೀಸರಿಗೆ ಕಿರಿಕಿರಿ ಉಂಟಾಗಿದ್ದು, ಏನಾದರೂ ಅನಾಹುತ ಆದಲ್ಲಿ, ಅಧಿಕಾರಗಳ ಮೇಲೆ ಬರುತ್ತದೆ ಎಂದು ಪೊಲೀಸ್ ಅಂಜಿಕೆಯಲ್ಲಿದ್ದರೆ, ಯಾವುದೇ ಅಂಜಿಕೆ ಇಲ್ಲದೇ ಜನರು ನೀರಿನ ಒಳಗೆ ನುಗ್ಗಿ ಫೋಟೋ ತೆಗೆದುಕೊಳ್ಳುವ ಹುಚ್ಚು ಹೆಚ್ಚಾಗಿದೆ.