ETV Bharat / state

ಬಾಗಲಕೋಟೆ ಅಂಚೆ ಕಚೇರಿಯಲ್ಲಿ ಪಾಸ್​​ಪೋರ್ಟ್​ ಸೇವಾ ಕೇಂದ್ರಕ್ಕೆ ಚಾಲನೆ - MP P C Gaddigowdar

ಬಾಗಲಕೋಟೆ ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಪಾಸ್​​ಪೋರ್ಟ್ ಸೇವಾ ಕೇಂದ್ರ ನಿರ್ಮಾಣವಾಗಿದ್ದು, ಸಂಸದ ಪಿ.ಸಿ.ಗದ್ದಿಗೌಡರ್​ ಚಾಲನೆ ನೀಡಿದರು.

ಪಾಸ್​​ಪೋರ್ಟ್​ ಸೇವಾ ಕೇಂದ್ರಕ್ಕೆ ಚಾಲನೆ
author img

By

Published : Sep 5, 2019, 10:15 AM IST

ಬಾಗಲಕೋಟೆ: ಕೇಂದ್ರ ಸರ್ಕಾರದ ಭಾರತೀಯ ಮಂತ್ರಾಲಯ ಹಾಗೂ ಅಂಚೆ ಕಚೇರಿಯ ಸಹಯೋಗದೊಂದಿಗೆ ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಪಾಸ್​​ಪೋರ್ಟ್​ ಸೇವಾ ಕೇಂದ್ರಕ್ಕೆ ಸಂಸದ ಪಿ.ಸಿ.ಗದ್ದಿಗೌಡರ್​ ಚಾಲನೆ ನೀಡಿದರು.

ಪಾಸ್​​ಪೋರ್ಟ್​ ಸೇವಾ ಕೇಂದ್ರಕ್ಕೆ ಚಾಲನೆ

ಅಂಚೆ ಕಚೇರಿಯ ಮುಖ್ಯ ಅಧೀಕ್ಷಕರಾದ ಭರತಕುಮಾರ್​​, ಶಾಸಕ ವೀರಣ್ಣ ಚರಂತಿಮಠ ಅವರ ನೇತೃತ್ವದಲ್ಲಿ ಸಂಸದರು ಚಾಲನೆ ನೀಡಿದರು. ಬಳಿಕ ಮಾತನಾಡಿದ ಗದ್ದಿಗೌಡರ್​, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಎಲ್ಲಾ ವರ್ಗದ ಜನತೆಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳುತ್ತಿದ್ದಾರೆ. ಹಿಂದಿನ ಭಾರಿ ವಿದೇಶಾಂಗ ಸಚಿವೆಯಾಗಿದ್ದ ದಿವಂಗತ ಸುಷ್ಮಾ ಸ್ವರಾಜ್​​, ಜಿಲ್ಲಾ ಕೇಂದ್ರದಲ್ಲಿ ಪಾಸ್​​ಪೋರ್ಟ್ ಸೇವಾ ಕೇಂದ್ರ ತೆರೆಯುವ ಉದ್ದೇಶ ಹೂಂದಿದ್ದರು. ಈ ಮೂಲಕ ಬಡ ಜನತೆಗೆ ಯೋಜನೆಗಳು ಸರಳ ರೀತಿಯಲ್ಲಿ ದೊರಕುವಂತಾಗಿಬೇಕು ಎಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಈಗ ಬಾಗಲಕೋಟೆ ನಗರದಲ್ಲಿ ಪಾಸ್​​ಪೋರ್ಟ್ ಸೇವಾ ಕೇಂದ್ರ ನಿರ್ಮಾಣವಾಗಿದ್ದು, ಇದರ ಸದೋಪಯೋಗ ಪಡೆದುಕೊಳ್ಳಬೇಕು ಎಂದು ಸಾರ್ವಜನಿಕರಿಗೆ ಕರೆ ನೀಡಿದರು.

ಇದೇ ವೇಳೆ ಅಂಚೆ ಕಚೇರಿಯ ಮುಖ್ಯ ಅಧೀಕ್ಷಕ ಭರತಕುಮಾರ್​ ಮಾತನಾಡಿ, ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿದ ಬಳಿಕ ದಿನಾಂಕ, ಸಮಯ ನಿಗದಿಗೊಳಿಸಲಾಗುತ್ತದೆ. ಆಗ ಅಂಚೆ ಇಲಾಖೆಗೆ ಬಂದು ತಮ್ಮ ದಾಖಲೆಗಳನ್ನು ತೋರಿಸಿದರೆ ಸಾಕು, 15 ನಿಮಿಷದಲ್ಲಿ ಕೆಲಸ ಮುಗಿಸಿಕೊಂಡು ಹೊರಗೆ ಹೋಗಬಹುದು. ನಂತರ ಪೊಲೀಸ್ ಇಲಾಖೆಯಿಂದ ಪರೀಕ್ಷೆ ನಡೆದ ಬಳಿಕ 15 ರಿಂದ 20 ದಿನಗಳಲ್ಲಿ ಅಂಚೆ ಮೂಲಕ ಪಾಸ್​​ಪೋರ್ಟ್ ಮನೆಗೆ ಬರಲಿದೆ ಎಂದು ತಿಳಿಸಿದರು.

Intro:AnchorBody:ಬಾಗಲಕೋಟೆ ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಪಾಸ್ ಪೋರ್ಟ ಸೇವಾ ಕೇಂದ್ರಕ್ಕೆ ಚಾಲನೆ ನೀಡಲಾಯಿತು.ಕೇಂದ್ರ ಸರ್ಕಾರದ ಭಾರತೀಯ ಮಂತ್ರಾಲಯ ಹಾಗೂ ಅಂಚೆ ಕಚೇರಿಯ ಸಹಯೋಗದೊಂದಿಗೆ ಪಾಸ್‍ಪೋರ್ಟ ಕೇಂದ್ರಕ್ಕೆ ಸಂಸದರಾದ ಪಿ.ಸಿ.ಗದ್ದಿಗೌಡರ ಚಾಲನೆ ನೀಡಿದರು.
ಅಂಚೆ ಕಚೇರಿಯ ಮುಖ್ಯ ಅಧೀಕ್ಷಕರಾದ ಭರತಕುಮಾರ,ಶಾಸಕರಾದ ವೀರಣ್ಣ ಚರಂತಿಮಠ ಅವರ ನೇತೃತ್ವದಲ್ಲಿ ಪಾಸ್ ಪೋರ್ಟ ಸೇವಾ ಕೇಂದ್ರಕ್ಕೆ ಚಾಲನೆ ನೀಡಿದರು.ನಂತರ ನಡೆದ ಸಮಾರಂಭದಲ್ಲಿ ಜ್ಯೋತಿ ಬೆಳೆಗಿಸುವ ಮೂಲಕ ಉದ್ಘಾಟಿಸಿದ ಸಂಸದರಾದ ಪಿ.ಸಿ.ಗದ್ದಿಗೌಡರ ಮಾತನಾಡಿ.ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರು ಎಲ್ಲಾ ವರ್ಗದ ಜನತೆಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳುತ್ತಿದ್ದಾರೆ.ಹಿಂದಿನ ಭಾರಿ ವಿದೇಶಾಂಗ ಸಚಿವೆರಾಗಿದ್ದ ದಿವಂಗತ ಸುಷ್ಮಾ ಸ್ವರಾಜ ಅವರು,ಜಿಲ್ಲಾ ಕೇಂದ್ರದಲ್ಲಿ ಪಾಸ್ ಪೋರ್ಟ ಸೇವಾ ಕೇಂದ್ರ ತೆರೆಯುವ ಉದ್ದೇಶ ಹೂಂದಿದ್ದರು.ಈ ಮೂಲಕ ಬಡ ಜನತೆಗೆ ಯೋಜನೆಗಳು ಸರಳ ರೀತಿಯಲ್ಲಿ ದೂರಕುವಂತಾಗಿಬೇಕು ಎಂದು ತಿಳಿಸಿದ್ದರು.ಈ ಹಿನ್ನಲೆಯಲ್ಲಿ ಈಗ ಬಾಗಲಕೋಟೆ ನಗರದಲ್ಲಿ ಪಾಸ ಪೋರ್ಟ ಸೇವಾ ಕೇಂದ್ರ ನಿರ್ಮಾಣವಾಗಿದ್ದು,ಇದರ ಸದೋಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.ಈ ಸಮಯದಲ್ಲಿ ಅಂಚೆ ಇಲಾಖೆ ಮುಖ್ಯ ಅಧೀಕ್ಷಕರಾದ ಭರತಕುಮಾರ ಮಾತನಾಡಿ,ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿದ ಬಳಿಕ,ದಿನಾಂಕ,ಸಮಯ ನಿಗದಿಗೊಳಿಸಲಾಗುತ್ತದೆ.ಅವಾಗ ಅಂಚೆ ಇಲಾಖೆ ಬಂದು ತಮ್ಮ ದಾಖಲೆಗಳನ್ನು ಪ್ರದರ್ಶನ ಮಾಡಿದರೆ ಸಾಕು,15 ನಿಮಿಷದಲ್ಲಿ ಕೆಲಸ ಮುಗಿಸಿಕೊಂಡು ಹೋರಗೆ ಹೋಗಬಹುದು.ನಂತರ ಪೊಲೀಸ್ ಇಲಾಖೆಯಿಂದ ಪರೀಕ್ಷೆ ನಡೆದ ಬಳಿಕ 15 ರಿಂದ 20 ದಿನಗಳಲ್ಲಿ ಪಾಸ್ ಪೋರ್ಟ ಅಂಚೆ ಮೂಲಕ ಮನೆಗೆ ಬರಲಿದೆ ಎಂದು ತಿಳಿಸಿದರು.Conclusion:E Tv,Bharat-Bagalkote
ETV Bharat Logo

Copyright © 2025 Ushodaya Enterprises Pvt. Ltd., All Rights Reserved.