ETV Bharat / state

ಗ್ರಾಮಗಳ ಅಭಿವೃದ್ಧಿಗೆ ಸಿಇಒ ಗಂಗೂಬಾಯಿ ಮಾನಕರ ಕರೆ - ಗ್ರಾಮಗಳ ಅಭಿವೃದ್ಧಿಗೆ ಸಿಇಓ ಗಂಗೂಬಾಯಿ ಮಾನಕರ ಕರೆ

ಸರ್ಕಾರದ ಅನುದಾನದ ಜೊತೆ ಸ್ಥಳೀಯ ಸಂಪನ್ಮೂಲಗಳನ್ನು ಸಹ ಕ್ರೋಢೀಕರಿಸಿಕೊಂಡು ಗ್ರಾಮಗಳನ್ನು ಅಭಿವೃದ್ಧಿ ಪಡಿಸಿಸುವಂತೆ ಜಿಲ್ಲಾ ಪಂಚಾಯತ್​ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಂಗೂಬಾಯಿ ಮಾನಕರ ಕರೆ ನೀಡಿದರು.

NREG Meeting at Bagalkot
ಗ್ರಾಮಗಳ ಅಭಿವೃದ್ಧಿಗೆ ಸಿಇಓ ಗಂಗೂಬಾಯಿ ಮಾನಕರ ಕರೆ
author img

By

Published : Jan 25, 2020, 9:21 AM IST

ಬಾಗಲಕೋಟೆ: ಸರ್ಕಾರದ ಅನುದಾನದ ಜೊತೆ ಸ್ಥಳೀಯ ಸಂಪನ್ಮೂಲಗಳನ್ನು ಸಹ ಕ್ರೋಢೀಕರಿಸಿಕೊಂಡು ಗ್ರಾಮಗಳನ್ನು ಅಭಿವೃದ್ಧಿ ಪಡಿಸಿಸುವಂತೆ ಜಿಲ್ಲಾ ಪಂಚಾಯತ್​ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಂಗೂಬಾಯಿ ಮಾನಕರ ಕರೆ ನೀಡಿದರು.

ಜಿಲ್ಲಾಡಳಿತದ ಸಭಾಭವನದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನ ಕುರಿತಾಗಿ ಎಲ್ಲಾ ಗ್ರಾಮ ಪಂಚಾಯತ್​ ಅಧ್ಯಕ್ಷರುಗಳಿಗೆ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಗ್ರಾಮಗಳ ಅಭಿವೃದ್ಧಿಗಾಗಿ ನರೇಗಾ ಯೋಜನೆಯಡಿ 178 ಕೋಟಿ ರೂ. ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ರಾಜ್ಯದಲ್ಲಿ ನಮ್ಮ ಜಿಲ್ಲೆ 7ನೇ ಸ್ಥಾನದಲ್ಲಿದೆ ಎಂದರು.

ತೋಟಗಾರಿಕೆ ಇಲಾಖೆ ವತಿಯಿಂದ ನೆರೇಗಾ ಯೋಜನೆಯಡಿ ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ ಕಾರ್ಯಕ್ರಮಕ್ಕೆ ಇಲ್ಲಿಯವರೆಗೆ 270.000 ಲಕ್ಷ ರೂ. ಅನುದಾನ ಬಳಕೆಯಾಗಿದೆ. ಹಾಗೂ ಐಇಸಿ ಅಡಿ ಜಲಾಮೃತ, ಸ್ವಚ್ಛ ಮೇವ ಜಯತೆ ಕಾರ್ಯಕ್ರಮದಡಿ ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳಲ್ಲಿ ಗಿಡ ನೆಡುವ ಕಾರ್ಯಕ್ರಮ ಮಾಡಲಾಗುತ್ತಿದ್ದು, 65,000 ಗಿಡಗಳನ್ನು ನೆಡಲಾಗಿದೆ ಎಂದು ತಿಳಿಸಿದರು.

198 ಗ್ರಾಮ ಪಂಚಾಯತ್​​ಗಳಲ್ಲಿ 26 ಗ್ರಾಮ ಪಂಚಾಯತಿಗಳಿಗೆ ಸ್ಥಳ ದೊರೆತಿದ್ದು, ಒಂದೊಂದು ಗ್ರಾಮದ ಅಭಿವೃದ್ಧಿಗೆ 20 ಲಕ್ಷ ರೂ. ಅನುದಾನ ಹಂಚಿಕೆಯಾಗಿದೆ. ಕಸದಿಂದ ರಸ ಕಾರ್ಯಕ್ರಮದ ಮೂಲಕ ಪ್ರತಿಯೊಂದು ಗ್ರಾಮಗಳಲ್ಲಿ ಕಸದ ಗುಂಡಿಗಳನ್ನು ತೆರೆಯಲಾಗಿದೆ. ಕಸ ಸಾಗಿಸಲು ವಾಹನ ನಿಯೋಜಿಸಲಾಗಿದ್ದು, ಘನತ್ಯಾಜ್ಯ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

Intro:AnchorBody:
ಗ್ರಾಮಗಳ ಅಭಿವೃದ್ಧಿಗೆ ಸಿಇಓ ಮಾನಕರ ಕರೆ
ಬಾಗಲಕೋಟೆ-- ಸರಕಾರದ ಅನುದಾನದ ಜೊತೆ ಸ್ಥಳೀಯ ಸಂಪನ್ಮೂಲಗಳನ್ನು ಸಹ ಕ್ರೂಢಿಕರಿಸಿಕೊಂಡು ಗ್ರಾಮಗಳನ್ನು ಅಭಿವೃದ್ಧಿ ಪಡಿಸಿಕೊಳ್ಳುವಂತೆ ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಗಂಗೂಬಾಯಿ ಮಾನಕರ ಕರೆ ನೀಡಿದರು.
ಜಿಲ್ಲಾಡಳಿತದ ಸಭಾ ಭವನದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅನುಷ್ಟಾನ ಕುರಿತಾಗಿ ಎಲ್ಲಾ ಗ್ರಾಮ ಪಂಚಾಯತ ಅಧ್ಯಕ್ಷರುಗಳಿಗೆ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಗಾರದಲ್ಲಿ ಮಾತನಾಡಿದ ಅವರು ಗ್ರಾಮಗಳ ಅಭಿವೃದ್ಧಿಗಾಗಿ ನರೇಗಾ ಯೋಜನೆಯಡಿ 178 ಕೋಟಿ ರೂ. ಕಾಮಗಾರಿ ಕೈಗೊಳ್ಳಲಾಗುತ್ತಿದ್ದು ರಾಜ್ಯದಲ್ಲಿ ನಮ್ಮ ಜಿಲ್ಲೆ 7ನೇ ಸ್ಥಾನದಲ್ಲಿದೆ ಎಂದರು.
ಈ ಯೋಜನೆಯಲ್ಲಿ 5044 ಕುರಿದೊಡ್ಡಿ ಹಾಗೂ ದನದೊಡ್ಡಿಗಳಿಗೆ ಅನುಮೊದನೆ ದೊರೆತಿದ್ದು 2000 ದನದ ದೊಡ್ಡಿಗಳನ್ನು ನಿರ್ಮಾಣ ಮಾಡಲಾಗಿದೆ ಮತ್ತು 162 ಕರೆ ಅಭಿವೃದ್ಧಿ ಕಾಮಗಾರಿ, 252 ಶಾಲಾ ಕಂಪೌಂಡ್ಗಳ ನಿರ್ಮಾಣ, 198 ಆಟದ ಮೈದಾನಗಳ ಅಭಿವೃದ್ಧಿ, 170 ಶಾಲಾ ಶೌಚಾಲಯಗಳ ಕಾಮಗಾರಿ, ನೆರೆಹಾವಳಿಯ ಪ್ರದೇಶದಲ್ಲಿ ಸಿಸಿ ರಸ್ತೆ ನಿರ್ಮಾಣ, ಸ್ಮಶಾನ ಜಾಗಗಳ ಅಭಿವೃದ್ಧಿ, ಕೃಷಿಹೊಂಡಗಳ ನಿರ್ಮಾಣ, ಘನತ್ಯಾಜ್ಯ ವಸ್ತುಗಳ ವಿಲೆವಾರಿ ಘಟಕಗಳ ಸ್ಥಾಪನೆ ಮಾಡುವ ಮೂಲಕ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.
ತೋಟಗಾರಿಕೆ ಇಲಾಖೆ ವತಿಯಿಂದ ನೆರೇಗಾ ಯೋಜನೆಯಡಿ ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ ಕಾರ್ಯಕ್ರಮಕ್ಕೆ ಇಲ್ಲಿಯ ವರೆಗೆ 270.000 ಲಕ್ಷ ರೂ, ಅನುದಾನ ಬಳಕೆಯಾಗಿದೆ. ಹಾಗೂ ಐಇಸಿ ಅಡಿ ಜಲಾಮೃತ ಸ್ವಚ್ಛ ಮೇವ ಜಯತೆ ಕಾರ್ಯಕ್ರಮದಡಿ ಬಯಲು ಬಹಿರ್ದೇಸೆ ಮುಕ್ತ ಗ್ರಾಮಗಳಲ್ಲಿ ಗಿಡ ನೆಡುವ ಕಾರ್ಯಕ್ರಮ ಮಾಡಲಾಗುತ್ತಿದ್ದು 65000 ಗಿಡಗಳನ್ನು ನೆಡಲಾಗಿದೆ ಎಂದು ತಿಳಿಸಿದರು.
198 ಗ್ರಾಮ ಪಂಚಾಯತಗಳಲ್ಲಿ 26 ಗ್ರಾಮ ಪಂಚಾಯತಿಗೆ ಸ್ಥಳ ದೊರೆತ್ತಿದ್ದು ಒಂದೊಂದು ಗ್ರಾಮದ ಅಭಿವೃದ್ಧಿಗೆ 20 ಲಕ್ಷರೂ. ಅನುದಾನ ಹಂಚಿಕೆಯಾಗಿದೆ. ಮತ್ತು ಕಸದಿಂದ ರಸ ಕಾರ್ಯಕ್ರಮದ ಮೂಲಕ ಪ್ರತಿಯೊಂದು ಗ್ರಾಮಗಳಲ್ಲಿ ಕಸದ ಗುಂಡಿಗಳನ್ನು ತೆರೆಯಲಾಗಿದೆ. ಕಸ ಸಾಗಿಸಲು ವಾಹನವನ್ನು ಯೋಜಿಸಲಾಗಿದ್ದು ಘನತ್ಯಾಜ್ಯ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದರು.Conclusion:ಈ ಟಿವಿ,ಭಾರತ,ಬಾಗಲಕೋಟೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.